ಮುಂಬೈ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR) ಜೊತೆಗಿನ ರಿಂಕು ಅವರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಅಭಿಯಾನ ಈಗಾಗಲೇ ಮುಗಿದಿದೆ. ಬ್ಯಾಟ್ಸ್ಮನ್ ತಮ್ಮ ವೈಯಕ್ತಿಕ ಜೀವನದ ಕೆಲವು ಪ್ರಮುಖ ಬೆಳವಣಿಗೆಗಳತ್ತ ಗಮನ ಹರಿಸಿದ್ದಾರೆ. ಇದನ್ನೂ ಓದಿ: ಇಂದು ಪಂಜಾಬ್-ಮುಂಬೈ ನಡ್ವೆ ಕ್ವಾಲಿಫೈಯರ್-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್ಸಿಬಿ ಗುದ್ದಾಟ!
View this post on Instagram
ಜೂನ್ 8 ರಂದು ಲಕ್ನೋದ ಹೋಟೆಲ್ನಲ್ಲಿ ರಿಂಕು ಮತ್ತು ಸಂಸದೆ ಪ್ರಿಯಾ ನಿಶ್ಚಿತಾರ್ಥ ಆಗಲಿದ್ದಾರೆ ಎಂದು ತಿಳಿದುಬಂದಿದೆ. ರಿಂಕು ಮತ್ತು ಪ್ರಿಯಾ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದವು. ಆಗಲೇ ಅವರು ಪರಸ್ಪರ ಮದುವೆಯಾಗಲು ಬಯಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಅಧಿಕೃತ ನಿಶ್ಚಿತಾರ್ಥ ಸಮಾರಂಭವು ಈ ತಿಂಗಳು ನಡೆಯಲಿದೆ ಎಂದು ಈಗ ತಿಳಿದುಬಂದಿದೆ.
ಕೆಲವು ತಿಂಗಳ ಹಿಂದೆ ಪ್ರಿಯಾಳ ತಂದೆ ತುಫಾನಿ ಸರೋಜ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಮಾಜವಾದಿ ಪಕ್ಷದ ಹಾಲಿ ಶಾಸಕರೂ ಆಗಿರುವ ತುಫಾನಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಇಬ್ಬರೂ ಮದುವೆಯಾಗಲು ನಮ್ಮ ಅನುಮತಿ ಕೋರಿದರು. ನಿಶ್ಚಿತಾರ್ಥ ಇನ್ನೂ ನಡೆದಿಲ್ಲ. ಆರಂಭಿಕ ಮಾತುಕತೆಗಳು ಮಾತ್ರ ನಡೆದಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೋ’ಹಿಟ್’ ಆಟಕ್ಕೆ ಗಿಲ್ ಪಡೆ ಡಲ್; ಮುಂಬೈಗೆ 20 ರನ್ಗಳ ಜಯ – ಫೈನಲ್ ಸ್ಥಾನಕ್ಕೆ ಪಂಜಾಬ್ ವಿರುದ್ಧ ಫೈಟ್
2025ರ ಐಪಿಎಲ್ನಲ್ಲಿ ಕೆಕೆಆರ್ ತಂಡದ ರಿಂಕು ಸಿಂಗ್ ಅಷ್ಟಾಗಿ ಗಮನ ಸೆಳೆಯಲಿಲ್ಲ. 29.42 ರ ಸರಾಸರಿಯಲ್ಲಿ 206 ರನ್ ಗಳಿಸಿದ್ದಾರೆ. 153.73 ರ ಸ್ಟ್ರೈಕ್-ರೇಟ್ ಹೊಂದಿದ್ದಾರೆ.
ಭಾರತದ ಟಿ20ಐ ತಂಡದ ಪ್ರಮುಖ ಆಟಗಾರನಾಗಿ ರಿಂಕು ಹೊರಹೊಮ್ಮಿದ್ದಾರೆ. 30 ಟಿ20ಐ ಪಂದ್ಯಗಳು ಮತ್ತು 22 ಇನ್ನಿಂಗ್ಸ್ಗಳಲ್ಲಿ ರಿಂಕು 507 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ. ಅವರು ಇನ್ನೂ ತಮ್ಮ ಚೊಚ್ಚಲ ಟಿ20ಐ ಶತಕವನ್ನು ಬಾರಿಸಿಲ್ಲ. 27 ವರ್ಷದ ಅವರು 2023 ರಲ್ಲಿ ಐರ್ಲೆಂಡ್ ವಿರುದ್ಧ ಟಿ20ಐಗೆ ಪಾದಾರ್ಪಣೆ ಮಾಡಿದರು. ರಿಂಕು ಭಾರತ ಪರ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಲಿಸ್ಟ್-ಎ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 52 ಇನ್ನಿಂಗ್ಸ್ಗಳಲ್ಲಿ 1,899 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ನಲ್ಲಿ ಎರಡೆರಡು ದಾಖಲೆ ಬರೆದ ಹಿಟ್ಮ್ಯಾನ್