ಮೇಹಾ ಪಟೇಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಷರ್ ಪಟೇಲ್

Public TV
1 Min Read
Axar Patel And Meha Patel

ಮುಂಬೈ: ಟೀಂ ಇಂಡಿಯಾದ (Team India) ಆಲ್‍ರೌಂಡರ್ ಅಕ್ಷರ್ ಪಟೇಲ್ (Axar Patel) ಉದ್ಯಮಿ ಮೇಹಾ ಪಟೇಲ್ (Meha Patel) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Axar Patel And Meha Patel 1

ಗುರುವಾರ ಮೇಹಾ ಪಟೇಲ್ ಮತ್ತು ಅಕ್ಷರ್ ಪಟೇಲ್ ಮದುವೆ ವಡೋದರಾದಲ್ಲಿ ನಡೆದಿತ್ತು. ಮದುವೆ ಬಳಿಕ ಈ ಜೋಡಿಯ ಫೋಟೋ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆ ಸಮಾರಂಭದಲ್ಲಿ ಫೋಟೋ, ವೀಡಿಯೋ ಚಿತ್ರೀಕರಣಕ್ಕೆ ನಿಷೇಧವಿತ್ತು. ಇದೀಗ ಈ ಜೋಡಿ ಸ್ವತಃ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿಕೊಂಡಿದೆ. ಇದನ್ನೂ ಓದಿ: Australian Open 2023: ಫೈನಲ್‍ನಲ್ಲಿ ಸೋತ ಬೋಪಣ್ಣ, ಸಾನಿಯಾ ಜೋಡಿ – ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್‍ ಸ್ಲಾಮ್‍ಗೆ ಗುಡ್‍ಬೈ

ಯಾರು ಮೇಹಾ ಪಟೇಲ್:
ಅಕ್ಷರ್ ಪಟೇಲ್ ಅವರ ಪತ್ನಿ ಮೇಹಾ ಪಟೇಲ್ ಆಹಾರ, ಪೌಷ್ಟಿಕ ತಜ್ಞೆಯಾಗಿದ್ದು (Dietician And Nutritionist), ತನ್ನದೇ ಆದ ಉದ್ಯಮವನ್ನು ಸಹ ನಡೆಸುತ್ತಿದ್ದಾರೆ. ಮೇಹಾ ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ಆಹಾರದ ಕುರಿತಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

KL Rahul Athiya Shetty

ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ (Kl Rahul) ಮತ್ತು ಅಥಿಯಾ ಶೆಟ್ಟಿ (Athiya Shetty) ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಆ ಬಳಿಕ ಅಕ್ಷರ್ ಪಟೇಲ್ ಕೂಡ ಇದೀಗ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರೂ ಕೂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿಯಲ್ಲಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *