ಇಸ್ಲಾಮಾಬಾದ್: ಪ್ರತಿಷ್ಠಿತ ಏಕದಿನ ಏಷ್ಯಾಕಪ್ (AsiaCup 2023) ಟೂರ್ನಿಗೆ ಇನ್ನೂ ಮೂರು ವಾರಗಳಷ್ಟೇ ಬಾಕಿಯಿದ್ದು, ಸೆ.2ರಂದು ನಡೆಯಲಿರುವ ಇಂಡೋಪಾಕ್ ರೋಚಕ ಕದನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಪಾಕ್ ತಂಡದ ಮಾಜಿ ವೇಗಿ ಸರ್ಫರಾಜ್ ನವಾಜ್, ಟೀಂ ಇಂಡಿಯಾ (Team India) ವಿನಾಶದತ್ತ ಸಾಗುತ್ತಿದೆ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದಾರೆ.
Advertisement
ಪಾಕಿಸ್ತಾನ (Pakistan) ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸರ್ಫರಾಜ್ ನವಾಜ್, ಟೀಂ ಇಂಡಿಯಾ ಇತ್ತೀಚೆಗೆ ವಿಂಡೀಸ್ (West Indies) ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ನಡೆಸಿದ ಪ್ರಯೋಗಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತ ತಂಡಕ್ಕೆ ಹೋಲಿಸಿದ್ರೆ ಪಾಕಿಸ್ತಾನ ತಂಡ 100% ಸ್ಥಿರವಾಗಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಗಳಿಗೆ ಅತ್ಯಂತ ಸ್ಥಿರವಾದ ತಂಡವನ್ನ ಹೊಂದಿದೆ. ಆದ್ರೆ ಭಾರತ ಇನ್ನೂ ಅಂತಿಮ ತಂಡವನ್ನ ಸಂಯೋಜನೆ ಮಾಡೋದಕ್ಕೆ ಹೆಣಗಾಡುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಿಂದ ಅತಿ ಹೆಚ್ಚು ಹಣ – ಜಸ್ಟ್ 1 ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತೆ ಕೋಟಿ ಕೋಟಿ
Advertisement
Advertisement
ವೆಸ್ಟ್ ಇಂಡೀಸ್ ಸರಣಿಯಲ್ಲಿ ಭಾರತ ತಂಡದ ಪರಿಸ್ಥಿತಿ ಅರ್ಥವಾಗುತ್ತಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ಗೆ ತಮ್ಮ ತಂಡವನ್ನು ಸಂಯೋಜಿಸಲು ಪರದಾಡುತ್ತಿದೆ. ಯಾರನ್ನ ಯಾವ ಜಾಗದಲ್ಲಿ ಆಡಿಸಿದ್ರೆ ಉತ್ತಮ ಅನ್ನೋದೇ ಗೊಂದಲವಾಗಿ ಕಾಡುತ್ತಿದೆ. ಪದೆ ಪದೇ ನಾಯಕರು ಬದಲಾಗುತ್ತಿದ್ದಾರೆ. ಹೊಸ ಆಟಗಾರರನ್ನ ಕರೆ ತರುತ್ತಿದ್ದಾರೆ. ಮತ್ತೊಂದೆಡೆ ಆಟಗಾರರಿಗೆ ಗಾಯದ ಸಮಸ್ಯೆಗಳು. ಇದೆಲ್ಲಾ ನೋಡುತ್ತಿದ್ದರೆ, ಸರಿಯಾದ ಸಂಯೋಜನೆಗೆ ಸಿದ್ಧವಾಗಲು ಕಷ್ಟವಾಗುತ್ತಿದೆ ಎಂದೆನಿಸುತ್ತದೆ ಎಂದಿದ್ದಾರೆ.
Advertisement
ಇದೇ ವೇಳೆ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಕಂಬ್ಯಾಕ್ ಕುರಿತು ಕಳವಳ ವ್ಯಕ್ತಪಡಿಸಿದ ನವಾಜ್, ಟೀಂ ಇಂಡಿಯಾ ತನ್ನ ಅಭಿವೃದ್ಧಿಗೆ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಬೆಂಚ್ ಬಲವನ್ನ ಹೆಚ್ಚಿಸುವಲ್ಲಿ ವಿಫಲವಾಗುತ್ತಿದ್ದು, ವಿನಾಶದತ್ತ ಸಾಗುತ್ತಿದೆ. ಪ್ರಮುಖ ಟೂರ್ನಿಗಳು ಹತ್ತಿರದಲ್ಲಿರುವಾಗ ಯಾವ ರೀತಿ ಸಂಯೋಜನೆ ಮಾಡಬೇಕು ಎಂಬುದೇ ತಿಳಿದಿಲ್ಲ. ಈ ಅವಧಿಯಲ್ಲೂ ಪ್ರಯೋಗಗಳು ಅಗತ್ಯವೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ICC WorldCup 2023: ಭಾರತ-ಪಾಕ್ ಸೇರಿದಂತೆ ಪ್ರಮುಖ ಪಂದ್ಯಗಳ ವೇಳಾಪಟ್ಟಿ ಬದಲು
ಐಸಿಸಿ ಟ್ರೋಫಿ ಗೆಲ್ಲುವ ಒತ್ತಡಕ್ಕೂ ಭಾರತ ಸಿಲುಕಿದೆ. ಏಕೆಂದರೆ ಕಳೆದ 10 ವರ್ಷಗಳಲ್ಲಿ ಟೀಂ ಇಂಡಿಯಾ ಐಸಿಸಿಯ ಯಾವುದೇ ಟ್ರೋಫಿ ಗೆದ್ದಿಲ್ಲ ಎಂದು ನವಾಜ್ ವಿವರಿಸಿದ್ದಾರೆ.
ಇದೇ ಆಗಸ್ಟ್ 30 ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಕದಿನ ಏಷ್ಯಾಕಪ್ ಟೂರ್ನಿ ಆಯೋಜನೆಗೊಂಡಿದೆ. ಆ ನಂತರ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ.
Web Stories