ಇಂಡಿಯನ್ ಕ್ರಿಕೆಟರ್ ಶುಭಮನ್ ಗಿಲ್ (Shubaman Gill) ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅಭಿಮಾನಿಗಳಿಗೆ ಶುಭಮನ್ ಸಿಹಿಸುದ್ದಿ ನೀಡಿದ್ದಾರೆ. ಬಣ್ಣದ ಲೋಕಕ್ಕೆ ಶುಭಮನ್ ಗಿಲ್ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಮಾಧುರಿ ದೀಕ್ಷಿತ್ ಮೇಲೆ ಗರಂ ಆದ ಉರ್ಫಿ ಜಾವೇದ್
ಕ್ರಿಕೆಟ್ ಕ್ಷೇತ್ರಕ್ಕೂ ಬಾಲಿವುಡ್‌ಗೂ (Bollywood) ನಂಟಿದೆ. ಸೆಲೆಬ್ರಿಟಿ ಅಂದಮೇಲೆ ಅಫೇರ್, ಲವ್, ಡೇಟಿಂಗ್ ಎಲ್ಲವೂ ಸಹಜ. ಶುಭಮನ್ ಗಿಲ್ ಕೂಡ ಕ್ರಿಕೆಟ್‌ಗಿಂತ ಸಾರಾ (Sara) ಜೊತೆಗಿನ ಡೇಟಿಂಗ್ ವಿಚಾರವಾಗಿಯೇ ಸದ್ದು ಮಾಡಿದ್ದರು.
ಅಕ್ರಾಸ್ ದಿ ಸ್ಪೈಡರ್ ವರ್ಸ್ (The Spider Man) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಗಿಲ್ ಕಾಲಿಡುತ್ತಿದ್ದಾರೆ. ಸ್ಪೈಡರ್ ಮ್ಯಾನ್ ಚಿತ್ರದ ಹಿಂದಿ- ಪಂಜಾಬಿ ವರ್ಷನ್‌ನಲ್ಲಿ ಮುಖ್ಯ ನಾಯಕನಿಗೆ ಶುಭಮನ್ ವಾಯ್ಸ್ (Voice Dub) ನೀಡಿದ್ದಾರೆ. ಈ ಅನಿಮೇಟೆಡ್ ಟ್ರೈಲರ್ ಜೂನ್ 2ರಂದು ರಿಲೀಸ್ ಆಗಲಿದೆ.
View this post on Instagram
ಕ್ರಿಕೆಟ್ ಲೋಕದಲ್ಲಿ ತನ್ನದೇ ಹವಾ ಸೃಷ್ಟಿಸಿದ ಶುಭಮನ್ ಗಿಲ್, ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಕಂಠದಾನ ಮೂಲಕ ಬಣ್ಣದ ಜಗತ್ತಿಗೆ ಹೆಜ್ಜೆ ಇಡ್ತಿದ್ದಾರೆ. ಈ ಬಗ್ಗೆ ಶುಭಮನ್, ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಫ್ಯಾನ್ಸ್, ಯುವ ಕ್ರಿಕೆಟಗ ಶುಭಮನ್‌ಗೆ ವಿಶ್ ಮಾಡಿದ್ದಾರೆ.