ಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಗೋವಾದ ಮೀನುಗಾರಿಕಾ ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ರಕ್ಷಿಸಿದೆ.
ಅ.24 ರಂದು ಸಂಪರ್ಕಕ್ಕೆ ಸಿಗದೆ IFB ಸಂತ ಆಂಟನಿ ಹೆಸರಿನ ಬೋಟ್ ಕಾಣೆಯಾಗಿತ್ತು. ತುರ್ತು ಮಾಹಿತಿ ಪಡೆದು ಕೋಸ್ಟ್ ಗಾರ್ಡ್‌ನ ICGS ಕಸ್ತೂರ ಬಾ ಗಾಂಧಿ ಹಡಗು ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ: Anekal | ಕಂದಕಕ್ಕೆ ಉರುಳಿದ ಕಂಟೈನರ್ ಲಾರಿ – ಇಬ್ಬರು ದುರ್ಮರಣ, ನಾಲ್ವರು ಗಂಭೀರ
ಆಳ ಸಮುದ್ರದಲ್ಲಿ ಸ್ಟೇರಿಂಗ್ ಹಾಗೂ ಗೇರ್‌ನ ವೈಫಲ್ಯದಿಂದಾಗಿ ಮೀನುಗಾರಿಕಾ ಬೋಟ್ ಅಪಾಯಕ್ಕೆ ಸಿಲುಕಿತ್ತು. ಆಳ ಸಮುದ್ರದಲ್ಲಿ ತೂಫಾನ್ ನಡುವೆ ಸಿಲುಕಿ ಮೀನುಗಾರಿಕಾ ಬೋಟ್‌ನಲ್ಲಿದ್ದ 31 ಮೀನುಗಾರರು ಅಪಾಯದಲ್ಲಿದ್ದರು.
ಸಮುದ್ರ ತಟದಿಂದ 100 ನಾಟಿಕಲ್ ಮೈಲ್ಸ್ ದೂರುದಲ್ಲಿ ಬೋಟ್ ಅಪಾಯಕ್ಕೆ ಸಿಲುಕಿತ್ತು. ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ ಬೋಟನ್ನು ಕೋಸ್ಟ್ ಗಾರ್ಡ್‌ನ ಡೋನಿಯರ್ ಗಸ್ತು ವಿಮಾನ ಪತ್ತೆ ಮಾಡಿತ್ತು. ಮೀನುಗಾರಿಕಾ ಬೋಟ್ ಬಗ್ಗೆ ಕಡಲಲ್ಲಿ ಗಸ್ತು ತಿರುಗುತ್ತಿದ್ದ ICGS ಕಸ್ತೂರ ಬಾ ಗಾಂಧಿ ಹಡಗಿಗೆ ಮಾಹಿತಿ ರವಾನಿಸಿತು. ಇದನ್ನೂ ಓದಿ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ
ಪ್ರತಿಕೂಲ ಹವಾಮಾನ ನಡುವೆ ಕಾರ್ಯಾಚರಣೆ ನಡೆಸಿದ ಭಾರತೀಯ ತಟ ರಕ್ಷಣಾ ಪಡೆಯ ಯೋಧರು, ಅಪಾಯದಲ್ಲಿ ಮೀನುಗಾರರನ್ನು ರಕ್ಷಿಸಿದರು. ಹಾನಿಗೊಂಡಿದ್ದ ಮೀನುಗಾರಿಕಾ ಬೋಟನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆತಂದು ನಿಲ್ಲಿಸಿದರು.


