ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ದೇಶಿ ತಳಿ ಮುಧೋಳ ಶ್ವಾನವನ್ನು ಸೈನ್ಯದಲ್ಲಿ, ಭದ್ರತೆಯಲ್ಲಿ, ಅರಣ್ಯದಲ್ಲಿ ಬಳಸಲು ಕರೆಕೊಟ್ಟಿದ್ರು. ಅವರ ಮಾತಿನಿಂದ ಪ್ರೇರಣೆಗೊಂಡ ಬಂಡೀಪುರ ಅರಣ್ಯ ಅಧಿಕಾರಿಗಳು, ಈ ಪ್ರದೇಶದಲ್ಲಿ ಕಳ್ಳಬೇಟೆ ಪತ್ತೆ ಹಚ್ಚಲು ಮುಧೋಳ ತಳಿಯ ಶ್ವಾನವನ್ನು ತರಲಾಗಿತ್ತು. ಆದ್ರೆ ಬೇಟೆಗೆ ಮಾತ್ರ ನಿಸ್ಸೀಮವಾಗಿರುವ ಮುಧೋಳ ತಳಿ ಶ್ವಾನ ಕಳ್ಳಬೇಟೆ ಪತ್ತೆ ಹಚ್ಚಲು ವಿಫಲವಾಗಿದೆ.
ಕಳ್ಳಬೇಟೆ ಪತ್ತೆಹಚ್ಚಲು ಕಳೆದ ಒಂದೂವರೆ ವರ್ಷದ ಹಿಂದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮುಧೋಳ ತಳಿಯ ಶ್ವಾನವನ್ನು ಕರೆತರಲಾಗಿತ್ತು. ಈ ಶ್ವಾನಕ್ಕೆ ‘ಮಾರ್ಗರೇಟ್’ ಎಂದು ಹೆಸರಿಡಲಾಗಿತ್ತು. ಆ ಬಳಿಕ ಈ ಶ್ವಾನಕ್ಕೆ ಎಲ್ಲಾ ರೀತಿಯ ತರಬೇತಿಯನ್ನು ಕೂಡ ನೀಡಲಾಗಿತ್ತು. ಆದರೆ ಇದೂವರೆಗೂ ಒಂದು ಕಳ್ಳತನವನ್ನು ಸಹ ಪತ್ತೆಹಚ್ಚಲು ಈ ಮಾರ್ಗರೇಟ್‍ನಿಂದ ಸಾಧ್ಯವಾಗಿಲ್ಲ. ಮುಧೋಳ ಶ್ವಾನ ಅರಣ್ಯಧಿಕಾರಿಗಳು ಚಿಂತಿಸಿದ್ದ ಮಟ್ಟಿಗೆ ಕೆಲಸ ಮಾಡುತ್ತಿಲ್ಲ. ಹೀಗಾಗಿ ಈ ಶ್ವಾನವನ್ನು ಕೇವಲ ಬೋನಿನಲ್ಲಿರಿಸಿದ್ದಾರೆ. ಹೀಗಾಗಿ ಮೊದಲಿದ್ದ ಜರ್ಮನ್ ಶೆಫರ್ಡ್ ಅಥವಾ ಬೆಲ್ಜಿಯಂ ತಳಿಯ ಶ್ವಾನವನ್ನು ತರಲು ಅರಣ್ಯಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ – ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್
ಬಂಡೀಪುರದಲ್ಲಿ ಕಾಡುಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಹಂಟಿಂಗ್ ಸ್ಪೆಷಲಿಸ್ಟ್ ಖ್ಯಾತಿಯ ಜರ್ಮನ್ ಶೆಫರ್ಡ್ ತಳಿಯ ಶ್ವಾನ ರಾಣಾಗೆ 13 ವರ್ಷ ತುಂಬಿದ್ದು ನಿವೃತ್ತಿ ಅಂಚಿನಲ್ಲಿತ್ತು. ಇದಕ್ಕೆ ಪರ್ಯಾಯವಾಗಿ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆ ಪತ್ತೆ ಹಚ್ಚುವುದು, ಅರಣ್ಯ ಸಿಬ್ಬಂದಿ ನೀಡುವ ಸೂಚನೆ ಪಾಲಿಸುವುದು, ವಾಸನೆ ಗ್ರಹಿಸಿ ಅದರ ಮೂಲಕ ಕಳ್ಳರನ್ನು ಪತ್ತೆ ಹಚ್ಚುವುದು, ಈ ರೀತಿಯ ಎಲ್ಲಾ ತರಬೇತಿಯನ್ನು ನೀಡಿ ಅರಣ್ಯಾಧಿಕಾರಿಗಳು ಮಾರ್ಗರೇಟ್ ಅನ್ನು ಕರೆತಂದಿದ್ರು. ಆದ್ರೆ ಮಾರ್ಗರೇಟ್ ಯಾವುದೇ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾದರೆ ಅರಣ್ಯ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತದೆ. ಕಳ್ಳ ಬೇಟೆಗಾರರನ್ನು ಹಿಡಿಯುವುದು ಕಷ್ಟವಾಗುತ್ತದೆ. ಇದು ಅರಣ್ಯ ಇಲಾಖೆಗೆ ತಲೆ ನೋವಾಗಿದೆ. ಇದನ್ನೂ ಓದಿ: ಮಾಜಿ ಪ್ರೇಯಸಿಯ ರುಂಡ ಕಡಿದು, ಪೊಲೀಸ್ ಠಾಣೆಗೆ ತಂದ ಪಾಗಲ್ ಪ್ರೇಮಿ