ಬೆಂಗಳೂರು: ಇಂಡಿಯನ್ ಬ್ಯಾಂಕ್ ಮ್ಯಾನೇಜರ್‍ನ ವಂಚನೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಚೆಲುವೆಯ ಮೋಡಿಗೆ ಬಿದ್ದು ಬ್ಯಾಂಕ್ ಮ್ಯಾನೇಜರ್ 6 ಕೋಟಿ ಕಳೆದುಕೊಂಡಿದ್ದಾನೆ.
ಬೆಂಗಳೂರಿನ ಹನುಮಂತ ನಗರದ ಇಂಡಿಯನ್ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ಹರಿಶಂಕರ್‍ಗೆ ಡೇಟಿಂಗ್ ಆಪ್‍ನ ಹುಚ್ಚು ಹಿಡಿದಿತ್ತು. ಡೇಟಿಂಗ್ ಆಪ್‍ನ ಮೂಲಕ ಯುವತಿಯರ ಪರಿಚಯ ಮಾಡಿಕೊಂಡು ಮಸಾಲ ವೀಡಿಯೋ ನೋಡುತ್ತಿದ್ದ. ಈ ವೇಳೆ ವೆಸ್ಟ್ ಬೆಂಗಾಲ್‍ನ ಹುಡುಗಿಯೊಬ್ಬಳ ಖಾತೆಗೆ ಕೇವಲ ಆರು ದಿನದಲ್ಲಿ ತನ್ನ ಸ್ವಂತ 12 ಲಕ್ಷ ರೂ. ಹಣ ಹಾಗೂ ಬ್ಯಾಂಕ್‍ನ 5.69 ಕೋಟಿಯನ್ನು ಆಕೆಗೆ ಸಂದಾಯ ಮಾಡಿದ್ದಾನೆ ಎನ್ನಲಾಗಿದೆ.
Advertisement
Advertisement
ಇದ್ದಕ್ಕಾಗಿ ಆತ ಠೇವಣಿದಾರರಾದ ಅನಿತಾ ಅವರ ಎಫ್‍ಡಿ ಅಕೌಂಟ್‍ನ ಮೇಲೆ ಲೋನ್ ತೆಗೆದಿದ್ದಾನೆ. ಈ ಕೆಲಸ ಮಾಡೋದಕ್ಕೆ ಬ್ಯಾಂಕ್ ಕ್ಲರ್ಕ್ ಮುನಿರಾಜು ಅವರನ್ನು ಬಳಸಿಕೊಂಡಿದ್ದ ಎಂಬ ಸತ್ಯ ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಗೃಹ ಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ಕಿರಿಕ್ – ಕೇಳಿದಷ್ಟು ಹಣ ನೀಡದ್ದಕ್ಕೆ ದಾಂಧಲೆ
Advertisement
Advertisement
ಡೇಟಿಂಗ್ ಆಪ್‍ನಲ್ಲಿ ಪರಿಚಯ ಆದವಳು ತುಂಬಾನೆ ಚೆನ್ನಾಗಿ ಇದ್ದಳು ಅವಳ ಪ್ರೀತಿಯ ಪಾಶಕ್ಕೆ ಬಿದ್ದಿದ್ದೆ. ಅವಳ ಮೋಹದಿಂದ ಈ ಹಣವನ್ನು ಕಳೆದುಕೊಂಡೆ ಎಂದು ಬ್ಯಾಂಕ್ ಮ್ಯಾನೇಜರ್ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಠೇವಣಿದಾರರು ಕೊಟ್ಟ ದೂರಿನ ಮೇಲೆ ಹರಿಶಂಕರ್ ಅನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: 5 ಸ್ಟಾರ್ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?