ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಆಟೋಮೊಬೈಲ್ ಉದ್ಯಮವು (Indian Automobile Business) ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಭವಿಷ್ಯ ನುಡಿದಿದ್ದಾರೆ.
ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಕಷ್ಟು ಮಾನವಶಕ್ತಿ, ಕಚ್ಚಾ ಸಾಮಗ್ರಿಗಳು ಇಲ್ಲೇ ದೊರೆಯುವುದರಿಂದ ಭಾರತದ ಆಟೋಮೊಬೈಲ್ ಉದ್ಯಮವು ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.
Advertisement
ಪಳೆಯುಳಿಕೆ ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದನ್ನೂ ಓದಿ: ಇಂದು ಎಸ್‌ಎಂಕೆ ಅಂತ್ಯಕ್ರಿಯೆ – ಮೊಮ್ಮಗ ಅಮರ್ಥ್ಯ ಸಿದ್ದಾರ್ಥ್‌ರಿಂದ ಚಿತೆಗೆ ಅಗ್ನಿಸ್ಪರ್ಶ
Advertisement
ದೇಶದಲ್ಲಿ ವಾಹನ ಫಿಟ್‌ನೆಸ್ ಕೇಂದ್ರಗಳು ಮತ್ತು ಚಾಲನಾ ಕೇಂದ್ರಗಳಿಗೆ ಹೊಸ ಯೋಜನೆ ಪರಿಚಯಿಸುವ ಕುರಿತು ಮಾತನಾಡಿದ ಅವರು, ನಾವು ಈ ಉಪಕ್ರಮಕ್ಕಾಗಿ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ, ದೇಶದ ಪ್ರತಿ ಜಿಲ್ಲೆಯಲ್ಲಿ ನಾಲ್ಕರಿಂದ ಐದು ಫಿಟ್‌ನೆಸ್ ಕೇಂದ್ರಗಳಿದ್ದರೆ, ಹತ್ತರಿಂದ ಇಪ್ಪತ್ತು ಚಾಲಕ ತರಬೇತಿ ಕೇಂದ್ರಗಳು ಇರುತ್ತವೆ ಎಂದು ಅವರು ತಿಳಿಸಿದರು.
Advertisement
ಭಾರತೀಯ ರಸ್ತೆಗಳಿಂದ ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ತೆಗೆದುಹಾಕುವ ಉದ್ದೇಶದಿಂದ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಸ್ವಚ್ಛವಾದ ಸಾರಿಗೆ ವಿಧಾನಗಳನ್ನು ಉತ್ತೇಜಿಸಲು ಉದ್ದೇಶವನ್ನು ಈ ನೀತಿ ಹೊಂದಿದೆ.
Advertisement