ಶ್ರೀನಗರ: ಭಾರತದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಡ್ರೋನ್‌ವೊಂದು ಹಾರಾಟ ನಡೆಸಿದ್ದು, ಇದನ್ನು ಗಮನಿಸಿದ ಭಾರತೀಯ ಭದ್ರತಾ ಪಡೆ ಅದಕ್ಕೆ ಗುಂಡು ಹಾರಿಸಿದೆ.
ಕೆಜಿ ಸೆಕ್ಟರ್‌ನ ಬಲೋನಿ ಪ್ರದೇಶದ ಬಳಿ ಡ್ರೋನ್ ಪತ್ತೆ ಆಗಿತ್ತು, ಈ ಹಿನ್ನೆಲೆಯಲ್ಲಿ ಸೇನೆ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಡ್ರೋನ್‍ಗೆ ಬೆಂಕಿ ತಗುಲದಿದ್ದರೂ, ಅದು ಪಾಕ್ ಭೂಪ್ರದೇಶಕ್ಕೆ ಮರಳಿದೆ. ಈ ಹಿನ್ನೆಲೆಯಲ್ಲಿ ಡ್ರೋನ್‌ನನ್ನು ಸೈನ್ಯ ಮತ್ತು ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಈ ಪ್ರದೇಶದಲ್ಲಿ ಹುಡುಕಾಟವನ್ನು ಪ್ರಾರಂಭಿಸಿದೆ. ಇದನ್ನೂ ಓದಿ: ಔರಂಗಾಬಾದ್, ಒಸ್ಮಾನಾಬಾದ್‌ಗೆ ಮರುನಾಮಕರಣ – ಮಹಾರಾಷ್ಟ್ರ ಸಂಪುಟ ಅನುಮೋದನೆ
Advertisement
Advertisement
ಮೇ ತಿಂಗಳಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಹೊಡೆದುರುಳಿಸಿದ್ದರು. ಇದು ಈ ವರ್ಷದ ಅಮರನಾಥ ಯಾತ್ರೆಗೂ ಮುನ್ನ ನಡೆದ ಘಟನೆಯಾಗಿದೆ. ಇದನ್ನೂ ಓದಿ: ಈ ದೇಶಗಳಿಗೂ ಬರಲಿದೆ ಶ್ರೀಲಂಕಾ ಪರಿಸ್ಥಿತಿ – ಆರ್ಥಿಕ ಸಂಕಷ್ಟದ ಹೊಸ್ತಿಲಲ್ಲಿ 12 ರಾಷ್ಟ್ರಗಳು