ಶ್ರೀನಗರ: ಜಮ್ಮು ಕಾಶ್ಮೀರದ ಅಖ್ನೂರ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಅಕ್ರಮವಾಗಿ ನಿರ್ಮಾಣ ಮಾಡಿದ್ದ ನೆಲೆಯನ್ನು ಭಾರತೀಯ ಸೈನಿಕರು ಧ್ವಂಸ ಮಾಡಿದ್ದಾರೆ.
ಶನಿವಾರ ಸಂಜೆ ನಡೆದ ಫೈರಿಂಗ್‍ನಲ್ಲಿ ಪಾಕಿಸ್ತಾನ ಸೇನೆಯ ನೆಲೆಯನ್ನು ಧ್ವಂಸಗೊಳಿಸಿದ್ದು, ಧ್ವಂಸಗೊಂಡ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಮಾತ್ರ ಹಾರಾಡುತ್ತಿರುವ ದೃಶ್ಯದ ವಿಡಿಯೋವನ್ನು ಆರ್ಮಿ ಸಾಕ್ಷಿಯಾಗಿ ಬಿಡುಗಡೆ ಮಾಡಿದೆ. ಅಲ್ಲದೇ ಶನಿವಾರ ಸಂಜೆಯಿಂದಲೇ ಭಾರತ ಸೈನಿಕರತ್ತ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದು, ಪಾಕ್ ದಾಳಿಗೆ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
Advertisement
#WATCH Indian Army video of Pakistani base destroyed in Indian firing in Akhnoor sector(J&K), Army sources say upside down Pakistan flag a signal for SOS (extreme danger/distress) pic.twitter.com/2srna7kS7P
— ANI (@ANI) March 24, 2019
Advertisement
ಇತ್ತ ಪೂಂಚ್ ಸೆಕ್ಟರಿನಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಯುವಕನೊರ್ವ ಸಾವನ್ನಪ್ಪಿದ್ದಾನೆ. ಶನಿವಾರ ಸಂಜೆ ಆರಂಭವಾದ ಫೈರಿಂಗ್ ರಾತ್ರಿಯ ವರೆಗೂ ಮುಂದುವರಿದಿದೆ. ದಾಳಿಯಲ್ಲಿ ಸೇನೆಯ ಯೋಧ ಗಾಯಗೊಂಡಿದ್ದು, ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.
Advertisement
ಅಧಿಕಾರಿಗಳು ನೀಡಿದ ಮಾಹಿತಿಯ ಅನ್ವಯ ಶನಿವಾರ ಸಂಜೆ 5:30 ವೇಳೆಗೆ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ. ಈ ದಾಳಿ ರಾತ್ರಿ ಇಡೀ ಮುಂದುವರಿದಿದ್ದು, ಭಾರತೀಯ ಸೈನಿಕರು ಪಾಕ್ ದಾಳಿಗೆ ಬಲವಾದ ಪ್ರತಿದಾಳಿ ನಡೆಸಿದ್ದಾರೆ. ಪಾಕಿಸ್ತಾನ ಆರ್ಮಿ ಸೈನಿಕರನ್ನು ಮಾತ್ರ ಟಾರ್ಗೆಟ್ ಮಾಡದೇ ಸ್ಥಳಿಯ ನಾಗರೀಕರನ್ನು ಗುರಿ ಮಾಡಿ ದಾಳಿ ನಡೆಸುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಪಾಕ್ ದಾಳಿಗೆ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
Advertisement
Ceasefire violation by Pakistan along LoC in Nowshera sector of Jammu and Kashmir at 11.50 am
— ANI (@ANI) March 24, 2019