ನವದೆಹಲಿ: ಕೇದಾರನಾಥ್ ದೇವಾಲಯದ ಬಳಿಯ ಹೆಲಿಪ್ಯಾಡ್ ನಲ್ಲಿ ಭಾರತೀಯ ವಾಯು ಸೇನಾ ಸರಕು ಹೆಲಿಕಾಪ್ಟರ್ ಅಪಘಾತಕ್ಕೊಳಗಾಗಿದ್ದು, ಕಾಪ್ಟರ್ ನಲ್ಲಿದ್ದ ಆರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಸೇನಾ ಪರಿಕರಗಳನ್ನು ಹೊತ್ತ ಸಾಗಿದ್ದ ಎಂಐ-17 ಹೆಸರಿನ ಸೇನಾ ಸರಕು ಹೆಲಿಕಾಪ್ಟರ್ ಕೇದಾರನಾಥ್ ದೇವಾಲಯದ ಬಳಿಯ ಹೆಲಿಪ್ಯಾಡ್‍ನಲ್ಲಿ ಇಳಿಯುವ ವೇಳೆ ಘಟನೆ ಸಂಭವಿಸಿದೆ. ಕಾಪ್ಟರ್ ಲ್ಯಾಡಿಂಗ್ ವೇಳೆ ಕಬ್ಬಿಣದ ವಸ್ತುವಿಗೆ ತಾಗಿದ ಕಾರಣ ಹೆಲಿಕಾಪ್ಟರ್ ಪತನಗೊಂಡಿದೆ.
Advertisement
Advertisement
ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತೆರಳಿ ಆರು ಮಂದಿ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ. ಹೆಲಿಕಾಪ್ಟರ್ ನ ಹಿಂಭಾಗದಲ್ಲಿ ಅಳವಡಿಸಿದ್ದ ರಷ್ಯಾ ನಿರ್ಮಿತ ತಿರುಗುವ ಚಕ್ರ ಹೊರ ಬಂದಿದ ಕಾರಣ ಘಟನೆ ನಡೆದಿದೆ ಎಂದು ಭಾರತೀಯ ವಾಯು ಸೇನೆ ಸ್ಪಷ್ಟಪಡಿಸಿದೆ.
Advertisement
ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ಎಂಐ-17 ಹೆಲಿಕಾಪ್ಟರ್ ಪತನಗೊಂಡ ದುರಂತದಲ್ಲಿ 7 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ಮಸುವ ಮುನ್ನವೇ ಮತ್ತೊಂದು ಅವಘಡ ನಡೆದಿದ್ದು ಸಿಬ್ಬಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
Advertisement
#UPDATE Four people including the pilot suffered minor injuries after Indian Air Force's MI-17 helicopter caught fire following collision with an iron girder while landing at helipad near Kedarnath temple in Uttarakhand. (The helicopter is not of the Army as mentioned earlier) pic.twitter.com/l59bFVV4eP
— ANI (@ANI) April 3, 2018