ವಿಶಾಖಪಟ್ಟಣ: ಸತತ 20 ಪಂದ್ಯಗಳಲ್ಲಿ ಟಾಸ್ (Toss) ಸೋತ ಬಳಿಕ ಕೊನೆಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದೆ.
ಎಡಗೈಯಿಂದ ಕೆಎಲ್ ರಾಹುಲ್ (KL Rahul) ನಾಣ್ಯ ಚಿಮ್ಮಿಸಿ ಹೆಡ್ ಎಂದು ಕಾಲ್ ಮಾಡಿದರು. ಹೆಡ್ ಬಿದ್ದ ಕೂಡಲೇ ಕೆಎಲ್ ರಾಹುಲ್ ನಕ್ಕು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು.
ಈ ಹಿಂದೆ ಮುಂಬೈ ವಾಖೆಂಡೆ ಕ್ರೀಡಾಂಗಣದಲ್ಲಿ 2023ರ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತ ಟಾಸ್ ಗೆದ್ದಿತ್ತು. ನಂತರ ನಡೆದ ಎಲ್ಲಾ ಏಕದಿನ ಪಂದ್ಯಗಳಲ್ಲಿ ಭಾರತ ಟಾಸ್ ಸೋತಿತ್ತು. ಇದನ್ನೂ ಓದಿ: ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧಾನ ಮೊದಲ ಪೋಸ್ಟ್ – ಎಂಗೇಜ್‌ಮೆಂಟ್ ರಿಂಗ್ ಎಲ್ಲಿ ಅಂದ್ರು ಫ್ಯಾನ್ಸ್
🚨 Toss 🚨#TeamIndia have won the toss and elected to field first.
Updates ▶️ https://t.co/HM6zm9o7bm#INDvSA | @IDFCFIRSTBank pic.twitter.com/vYNPSa1iKF
— BCCI (@BCCI) December 6, 2025
ಇಂದಿನ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಕೈ ಬಿಡಲಾಗಿದೆ. ಅವರ ಜಾಗಕ್ಕೆ ತಿಲಕ್ ವರ್ಮಾ ಅವರನ್ನು ಆಡಿಸುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ಮೊದಲ ಪಂದ್ಯದಲ್ಲಿ ಭಾರತ 17 ರನ್‌ಗಳಿಂದ ಜಯಗಳಿಸಿದರೆ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ಜಯ ಸಾಧಿಸಿತ್ತು.

