ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 372 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ 2 ಪಂದ್ಯಗಳ ಪೇಟಿಎಂ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಜಯಗಳಿಸಿದೆ.
ಗೆಲ್ಲಲು 540 ರನ್ ಗಳ ಬೃಹತ್ ಗುರಿಯನ್ನು ಪಡೆದ ನ್ಯೂಜಿಲೆಂಡ್ 56.3 ಓವರ್‌ಗಳಲ್ಲಿ 167 ರನ್ ಗಳಿಗೆ ಆಲೌಟ್ ಆಯ್ತು.
Advertisement
Advertisement
ಮೂರನೇ ದಿನದಾಟಕ್ಕೆ 140 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು ಉಳಿದ 5 ವಿಕೆಟ್ ಸಹಾಯದಿಂದ 27 ರನ್ ಗಳಿಸಿತು. ಭಾರತದ ಪರ ಅಶ್ವಿನ್ ಹಾಗೂ ಜಯಂತ್ ಯಾದವ್ 4 ವಿಕೆಟ್ ಗಳಿಸಿದ್ದರೇ, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದಿದ್ದಾರೆ.
Advertisement
Advertisement
ನ್ಯೂಜಿಲೆಂಡ್ ವಿರುದ್ಧ ಟಿ20, ಬಳಿಕ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಕೋಚ್ ದ್ರಾವಿಡ್ ಅವರು ಈ ಸರಣಿಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಪ್ರಥಮ ಸರಣಿಯಾಗಿದೆ. ಇದನ್ನೂ ಓದಿ: ಪ್ರಬಲ ಎಡಪಂಥೀಯರಿಂದಾಗಿ ಕೇರಳದಲ್ಲಿ ಸಂಘಪರಿವಾರದ ಅಜೆಂಡಾ ವಿಫಲ: ಪಿಣರಾಯಿ ವಿಜಯನ್