ಬೆಂಗಳೂರು: ಈ ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ ಇನ್ನು ಕೆಲವೇ ಗಂಟೆಗಳಲ್ಲಿ ಶುರುವಾಗಲಿದೆ. ರಾತ್ರಿ 10:52ಕ್ಕೆ ಆರಂಭವಾಗಲಿರುವ ಗ್ರಹಣ ಮಧ್ಯರಾತ್ರಿ 12:48 ರವರೆಗೆ ಇರಲಿದೆ. 11:50ರ ಸಮಯದಲ್ಲಿ ಬಹುಪಾಲನ್ನು ಚಂದ್ರನನ್ನ ಆವರಿಸಲಿದೆ.
ಅಮಾವಾಸ್ಯೆ, ಮೋಡ ಕವಿದಿದ ದಿನ ಹೊರತು ಪಡಿಸಿ ಪ್ರತಿದಿನ ಬೆಳ್ಳಿಯಂತ ಬೆಳಕು ಚೆಲ್ಲೋ ಚಂದಮಾಮ ಕೆಲಕಾಲ ಮಂಕು ಆವರಿಸದಂತೆ ಕಾಣ್ತಾನೆ. ಗ್ರಹಣ ಅಂದ ತಕ್ಷಣ ಮೂಢನಂಬಿಕೆ-ಸಂಪ್ರದಾಯ ನಂಬುವವರು ಭಯ ಪಟ್ಟರೆ, ಕೆಲವರು ಇದನ್ನು ಮೆಟ್ಟಿನಿಲ್ಲುತ್ತಾರೆ. ವೈಜ್ಞಾನಿಕ ಲೋಕಕ್ಕೆ ಇದು ಕೌತುಕ ಕ್ಷಣವೇ ಆಗಿರುತ್ತೆ.
Advertisement
ಇವತ್ತಿನ ಚಂದ್ರಗ್ರ್ರಹಣವನ್ನು ಬರಿಗಣಿನಲ್ಲಿ ನೋಡಬಹುದು ತೊಂದರೆ ಇಲ್ಲ. ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯೂರೋಪ್‍ಗಳಲ್ಲಿ ಚಂದ್ರಗ್ರಹಣ ಕಾಣಸಿಗಲಿದೆ. 2018ರ ಜನರಿಯಲ್ಲಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಇನ್ನು, ಧಾರ್ಮಿಕ ದೃಷ್ಟಿಕೋನದಲ್ಲಿ ನೋಡುವುದಾದರೆ ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ಇಂದು ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತಿದೆ.
Advertisement
ಗ್ರಹಣ ಹೇಗೆ ಆಗುತ್ತೆ? ಸೂರ್ಯ-ಚಂದ್ರರ ನಡುವೆ ಭೂಮಿ ಬಂದು, ಸೂರ್ಯ, ಭೂಮಿ ಮತ್ತು ಚಂದ್ರ ಸರಳರೇಖೆಯಲ್ಲಿದ್ದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಇದ್ದಾಗ, ಸೂರ್ಯ ಕಿರಣದಿಂದ ಉಂಟಾಗುವ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಚಂದ್ರಗ್ರಹಣ ಸಂಭವಿಸುತ್ತದೆ.
Advertisement
ದೇವಾಲಯ ಬಂದ್: ಧಾರ್ಮಿಕವಾಗಿ ಗ್ರಹಣಗಳಿಗೆ ಒಂದೊಂದು ಅರ್ಥ ಇರತ್ತೆ. ಹೀಗಾಗಿ, ಇವತ್ತಿನ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಾಲಯಗಳನ್ನ ಮಧ್ಯಾಹ್ನದಿಂದಲೇ ಬಂದ್ ಮಾಡಲಾಯ್ತು. ಬೆಂಗಳೂರಿನ ಬಹುತೇಕ ದೇವಾಲಯಗಳು, ಮಂಡ್ಯದ ಮೇಲುಕೋಟೆ ಚಲುವನಾರಾಯಣ, ಉಡುಪಿಯ ಕೃಷ್ಣಮಠ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ, ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ, ತುಮಕೂರಿನ ಯಡಿಯೂರು ಸಿದ್ದಲಿಂಗೇಶ್ವರ, ಕೋಲಾರದ ಕೋಲಾರಮ್ಮ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಿವೆ.
Advertisement
ಇವುಗಳಲ್ಲಿ ಕೆಲವು ದೇಗುಲಗಳು ಎಂದಿನಂತೆ ರಾತ್ರಿ ಹೊತ್ತು ಬಂದ್ ಆಗುತಿತ್ತು. ಆದರೆ ಚಿಕ್ಕಮಗಳೂರಿನ ಹೊರನಾಡು ಅನ್ನಪೂರ್ಣೇಶ್ವರಿ ಮತ್ತು ಶೃಂಗೇರಿಯ ದೇವಾಲಯದಲ್ಲಿ ರಾತ್ರಿ 11 ಗಂಟೆಗೆ ವಿಶೇಷ ಪೂಜೆ ನಡೆಯುತ್ತದೆ. ಕಟೀಲಿನಲ್ಲಿ ಗ್ರಹಣ ಕಾಲದಲ್ಲೂ ಪೂಜೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ದೇವಾಲಯ ಎಂದಿನಂತೆ ಇರಲಿದೆ. ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಧಾರ್ಮಿಕ ಚಿಂತಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ, ನದಿಯಲ್ಲಿ ಸ್ನಾನ ನಡೆಯಲಿದೆ. ಭಾನುವಾರ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿವೆ.
Varanasi: Ganga Aarti held during afternoon for the first time in 26 years due to Lunar Eclipse today pic.twitter.com/sJ0D7vwpDo
— ANI UP/Uttarakhand (@ANINewsUP) August 7, 2017