ಚೊಚ್ಚಲ ಟಿ20 ವಿಶ್ವಕಪ್ ಆರಂಭ: 2007
ಆತಿಥ್ಯ: ದಕ್ಷಿಣ ಆಫ್ರಿಕಾ
ವಿಶ್ವಕಪ್ ವಿಜೇತ ತಂಡ: ಭಾರತ
ರನ್ನರ್‌ಅಪ್: ಪಾಕಿಸ್ತಾನ
2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಟೂರ್ನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನೆನಪಿನಲ್ಲಿಡಬೇಕಾದ ವರ್ಷ. ಏಕೆಂದರೆ ಆಗಷ್ಟೇ ಮಹತ್ವ ಪಡೆದುಕೊಳ್ಳುತ್ತಿದ್ದ ಮೊಟ್ಟ ಮೊದಲ ಚುಟುಕು ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟ ಟೂರ್ನಿ ಅದಾಗಿತ್ತು. ಅಲ್ಲದೇ ಎಂ.ಎಸ್ ಧೋನಿ ( MS Dhoni) ಅವರಂತಹ `ಮಹಾನಾಯಕ’ ಉದಯಕ್ಕೆ ಸಾಕ್ಷಿಯಾದ ಟೂರ್ನಿಯೂ ಅದಾಗಿತ್ತು.
Advertisement
Advertisement
2007ರಲ್ಲಿ ಅದೇ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ (2007 ODI World Cup) ಟೂರ್ನಿಯೂ ನಡೆದಿತ್ತು. ಆ ಆವೃತ್ತಿಯಲ್ಲಿ ಟೀಂ ಇಂಡಿಯಾ (Team India) ಲೀಗ್ ಹಂತದಲ್ಲೇ ಹೀನಾಯ ಸೋಲು ಕಂಡು ಹೊರಬಿದ್ದಿತ್ತು. ಇದಾದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆದು, ಪ್ರಮುಖ ಆಟಗಾರರ ಮೆನಗಳ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಟೂರ್ನಿಯೂ ನಿಗದಿಯಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದ ಖ್ಯಾತನಾಮರು ಟಿ20 ಆಡಲು ಹಿಂದೇಟು ಹಾಕಿದ್ದ ಕಾರಣ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಎಂ.ಎಸ್ ಧೋನಿ ಅವರಿಗೆ ನಾಯಕತ್ವದ ಹೊಣೆ ನೀಡಲಾಯಿತು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್!
Advertisement
ಟಿ20 ಚುಕುಟು ಕ್ರಿಕೆಟ್ (T20 Cricket) ಆಗಿನ್ನು ಜನಪ್ರಿಯವಾಗಿರಲಿಲ್ಲ. ಇದರಿಂದ ಬಹಳಷ್ಟು ಜನರು ಇದನ್ನು ಟೀಕಿಸಿದ್ದರು. ಆದ್ರೆ ರಾಂಚಿ ಮೂಲದ ಎಂ.ಎಸ್ ಧೋನಿ ಅವರು ಆ ಟೂರ್ನಿಯಲ್ಲಿ ಕೈಗೊಂಡ ನಿರ್ಧಾರಗಳಿಂದ ಟೀಂ ಇಂಡಿಯಾ, ಚೊಚ್ಚಲ ಆವೃತ್ತಿಯಲ್ಲೇ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
Advertisement
ಪಾಕ್ ವಿರುದ್ಧ ಗೆದ್ದು ಬೀಗಿದ್ದೇ ರೋಚಕ:
ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಅಂದು ಇಡೀ ಭಾರತವೇ ಈ ಪಂದ್ಯವನ್ನು ಕುತೂಹಲದಿಂದ ನೋಡುತ್ತಿತ್ತು. ಇದನ್ನೂ ಓದಿ: IPL 2024: ದಣಿವರಿಯದೇ ದುಡಿದ ಕ್ರೀಡಾ ಸಿಬ್ಬಂದಿಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್ ಶಾ
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 157 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 12 ರನ್ ಮಾತ್ರವೇ ಬೇಕಿತ್ತು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತದ ಗೆಲುವಿಗೆ ಒಂದು ವಿಕೆಟ್ ಅಗತ್ಯವಿತ್ತು. ಪ್ರಮುಖ ಬೌಲರ್‌ಗಳು ತಮ್ಮ ಓವರ್ ಮುಕ್ತಾಯ ಗೊಳಿಸಿದ್ದರಿಂದ ಮಹಿ, ಜೋಗಿಂದರ್ ಶರ್ಮಾ ಅವರಿಗೆ ಬೌಲಿಂಗ್ ನೀಡಿದರು. ಪಾಕ್‌ನ ಸ್ಫೋಟಕ ಬ್ಯಾಟರ್ ಮಿಸ್ಬಾ ಉಲ್ ಹಕ್ ಸ್ಟ್ರೈಕ್‌ನಲ್ಲಿದ್ದರು. ಇದನ್ನೂ ಓದಿ: IPL 2024: ಚಾಂಪಿಯನ್ KKRಗೆ 20 ಕೋಟಿ ರೂ., ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಮೊದಲಿಗೆ ವೈಡ್ ರನ್ ಬಿಟ್ಟುಕೊಟ್ಟ ಜೋಗಿಂದರ್ ಶರ್ಮಾ ಮೊದಲ ಎಸೆತದಲ್ಲಿ ಹಿಡಿತ ಸಾಧಿಸಿದರು. ಆದ್ರೆ 2ನೇ ಎಸೆತದಲ್ಲಿ ಮಿಸ್ಬಾ ಉಲ್ ಹಲ್ ಸಿಕ್ಸರ್ ಸಿಡಿಸಿದಾಗ ಪಾಕ್‌ತಂಡ ಗೆದ್ದೇಬಿಟ್ಟೆವು ಎಂಬ ಸಂತಸದಲ್ಲಿ ಕುಣಿದು ಕುಪ್ಪಳಿಸಿತ್ತು, ಪಾಕ್ ಅಭಿಮಾನಿಗಳು ಕೇಕೆ ಹಾಕಲು ಶುರು ಮಾಡಿದ್ದರು. ಮರು ಎಸೆತದಲ್ಲಿ ಆನ್‌ಸ್ಟಂಪ್ ಮೂಲಕ ಶಾರ್ಟ್ ಫೈನ್‌ಲೆಗ್ ಶಾರ್ಟ್ ಪ್ರಯತ್ನಿಸಿದ ಮಿಸ್ಬಾ, ಶ್ರೀಶಾಂತ್‌ಗೆ ಕ್ಯಾಚ್ ನೀಡಿ ಔಟಾದರು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದ ಪರಿಣಾಮ ಪಾಕಿಸ್ತಾನ ತಂಡ ಆಲೌಟ್ ಆಗಿ ಟೀಂ ಇಂಡಿಯಾ ಎದುರು ಮಂಡಿಯೂರಿತು. ಅಂತಿಮವಾಗಿ ಭಾರತ 5 ರನ್‌ಗಳ ರೋಚಕ ಜಯ ಸಾಧಿಸಿತು. ಕುತೂಹಲದಿಂದ ನೋಡುತ್ತಿದ್ದ ಇಡೀ ಭಾರತ ಸಂಭ್ರಮದಲ್ಲಿ ತೇಲಿತು.