ಜಾರ್ಜ್‌ಟೌನ್ (ಗಯಾನಾ): ಕೊನೆಯಲ್ಲಿ ಅಕೇಲ್ ಹೊಸೈನ್ (Akeal Hosein) ಹಾಗೂ ಅಲ್ಜರಿ ಜೋಸೆಫ್ (Alzarri Joseph) ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ (West Indies) ಭಾರತದ ವಿರುದ್ಧ ಸತತ 2ನೇ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನೂ ಮೊದಲ ಸೋಲಿನ ಸೇಡು ತೀರಿಸಿಕೊಳ್ಳುವ ಕಾತುರದಲ್ಲಿದ್ದ ಟೀಂ ಇಂಡಿಯಾ ವಿರೋಚಿತ ಸೋಲನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ನಿಗದಿತ 18.5 ಓವರ್‌ಗಳಲ್ಲೇ 8 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿ ರೋಚಕ ಗೆಲುವು ಸಾಧಿಸಿದೆ.
Advertisement
Advertisement
ಬೌಲಿಂಗ್‌ನಲ್ಲಿ ಶುಭಾರಂಭ ಮಾಡಿದ ಭಾರತ ಮೊದಲ ಓವರ್‌ನಲ್ಲಿ ಕೇವಲ 2 ರನ್‌ಗಳಿಗೆ 2 ವಿಕೆಟ್ ಉರುಳಿಸಿತ್ತು. ಬ್ರ್ಯಾಂಡನ್ ಕಿಂಗ್ ಹಾಗೂ ಬ್ರ್ಯಾಂಡನ್ ಕಿಂಗ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ 3ನೇ ವಿಕೆಟ್‌ಗೆ ಜೊತೆಯಾದ ಕೇಲ್ ಮೇಯರ್ಸ್ ಹಾಗೂ ನಿಕೋಲಸ್ ಪೂರನ್ (Nicholas Pooran) ಸ್ಫೋಟಕ ಪ್ರದರ್ಶನ ನೀಡಿದರು. ಟೀಂ ಇಂಡಿಯಾ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ 37 ಎಸೆತಗಳಲ್ಲಿ 57 ರನ್ ಬಾರಿಸಿತು. ಇದರಿಂದ ಭಾರತದ ಸೋಲು ಖಚಿತವಾಗಿತ್ತು.
Advertisement
ನಿಕೋಲಸ್ ಪೂರನ್ 67 ರನ್ (40 ಎಸೆತ, 6 ಬೌಂಡರಿ, 4 ಸಿಕ್ಸರ್) ಗಳಿಸಿ ಔಟಾದರು. ಈ ಬೆನ್ನಲ್ಲೇ ನಾಯಕ ರೋವ್ಮನ್ ಪೋವೆಲ್ (Rovman Powell) 21 ರನ್, ಆಲ್‌ರೌಂಡರ್ ಶಿಮ್ರಾನ್ ಹೆಟ್ಮೇಯರ್ 22 ರನ್ ಗಳಿಸಿ ಔಟಾದರು. 15 ನೇ ಓವರ್‌ನಲ್ಲಿ ವಿಂಡೀಸ್ ಮೂರು ವಿಕೆಟ್ ಕಳೆದುಕೊಂಡಾಗ ಪಂದ್ಯಕ್ಕೆ ರೋಚಕ ತಿರುವು ಸಿಕ್ಕಿತ್ತು. ಕೊನೆಯಲ್ಲಿ ಬೌಲರ್‌ಗಳಾದ ಅಕೇಲ್ ಹೊಸೈನ್ (16 ರನ್) ಹಾಗೂ ಅಲ್ಜರಿ ಜೋಸೆಫ್ (10 ರನ್) ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಜಯದ ದಡ ಸೇರಿಸಿದರು.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲಿ ಆಘಾತ ಅನುಭವಿಸಿತು. ಮೊದಲ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ನಿರಾಸೆಯಾಗಿತ್ತು. ಏಕೆಂದರೆ ಆರಂಭಿಕ ಶುಭಮನ್ ಗಿಲ್ (Shubman Gill) ಮತ್ತೆ ಕಳಪೆ ಪ್ರದರ್ಶನ ತೋರಿದರು. ಗಿಲ್ ಈ ಪಂದ್ಯದಲ್ಲಿ ಕೇವಲ 7 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಈ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ (Suryakumar Yadav) ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾಗಿ ಆಘಾತ ನೀಡಿದರು. ನಂತರ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಜವಾಬ್ಧಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 42 ರನ್ ಕಲೆಹಾಕಿತು. ಅಷ್ಟರಲ್ಲೇ ಇಶಾನ್ 27 ರನ್ (2 ಸಿಕ್ಸರ್, 2 ಬೌಂಡರಿ, 23 ಎಸೆತ) ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಸಂಜು ಸ್ಯಾಮ್ಸನ್ ಸಿಕ್ಸ್ ಬಾರಿಸುವ ಯತ್ನದಲ್ಲಿ 7 ರನ್‌ಗೆ ಸ್ಟಂಪ್ ಔಟ್ ಆದರು.
ತಿಲಕ್ ವರ್ಮಾ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಜವಾಬ್ದಾರಿ ಆಟ ನೀಡಿದರು. 41 ಎಸೆತಗಳಲ್ಲಿ ತಿಲಕ್ 51 ರನ್ (1 ಸಿಕ್ಸರ್, 5 ಬೌಂಡರಿ) ಬಾರಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 24 ರನ್, ಅಕ್ಷರ್ ಪಟೇಲ್ 14 ರನ್, ರವಿ ಬಿಷ್ಣೋಯಿ 8 ರನ್ ಹಾಗೂ ಅರ್ಷ್‌ದೀಪ್ ಸಿಂಗ್ 6 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
Web Stories