– ಯುವಿ ಅರ್ಧಶತಕ ಸಾಧನೆ ಸರಿಗಟ್ಟಿದ ರಾಹುಲ್
ಮುಂಬೈ: ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಿಕ್ಸರ್ ದಾಖಲೆ, ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅಮೋಘ ಅರ್ಧಶತಕದ ಸಹಾಯದಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್‍ಗೆ 241 ರನ್‍ಗಳ ಗುರಿ ನೀಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಭಾರತವು ರೋಹಿತ್ ಶರ್ಮಾ 71 ರನ್, ಕೆ.ಎಲ್.ರಾಹುಲ್ 91 ರನ್, ವಿರಾಟ್ ಕೊಹ್ಲಿ 70ರನ್‍ಗಳಿಂದ 3 ವಿಕೆಟ್ ನಷ್ಟಕ್ಕೆ 240 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿದೆ.
Advertisement
Advertisement
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಬೌಲರ್ ಗಳು ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಜೋಡಿಯನ್ನು ಕಟ್ಟಿ ಹಾಕಲು ವಿಫಲರಾದರು. ಸಿಕ್ಸರ್ ಹಾಗೂ ಬೌಂಡರಿ ಸುರಿಮಳೆ ಸುರಿಸಿದ ಈ ಜೋಡಿಯು ಯಾವುದೇ ವಿಕೆಟ್ ನಷ್ಟವಿಲ್ಲದೆ ಇನ್ನಿಂಗ್ಸ್ ನ 5ನೇ ಓವರ್ ಮುಕ್ತಾಯಕ್ಕೆ 58 ರನ್ ಗಳಿಸಿತು. ಇದೇ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿದ್ದ ರೋಹಿತ್, ಎರಡನೇ ಎಸೆತವನ್ನು ಸಿಕ್ಸ್ ಸಿಡಿಸಲು ಯತ್ನಿಸಿದರು. ಆದರೆ ಬೌಂಡರಿ ಲೈನ್‍ನಲ್ಲಿ ನಿಂತಿದ್ದ ಎವಿನ್ ಲೂಯಿಸ್ ಎತ್ತರಕ್ಕೆ ಜಿಗಿದು ಕ್ಯಾಚ್ ಹಿಡಿದು ಬೌಂಡರಿ ಲೈನ್ ದಾಟುವ ಮುನ್ನವೇ ಕೈಚೆಲ್ಲಿದರು. ಜೀವದಾನ ಪಡೆದ ರೋಹಿತ್ ಶರ್ಮಾ ಈ ಎಸೆತದಲ್ಲಿ ಎರಡು ರನ್ ಗಳಿಸಿದರು.
Advertisement
ಇನ್ನಿಂಗ್ಸ್ ನ 8ನೇ ಓವರ್ ನಲ್ಲಿ ನಿರಂತರ ಎರಡು ಸಿಕ್ಸರ್ ಸಿಡಿಸಿ ಶರ್ಮಾ ಅರ್ಧಶತಕ (23 ಎಸೆತ, 51 ರನ್) ಪೂರೈಸಿದರು. ಅಂತರಾಷ್ಟ್ರೀಯ ಟಿ20ಯಲ್ಲಿ ಇದು ಹಿಟ್‍ಮ್ಯಾನ್ ಅವರ 19ನೇ ಅರ್ಧಶತಕವಾಗಿದೆ. ಈ ಬೆನ್ನಲ್ಲೇ ಕೆ.ಎಲ್.ರಾಹುಲ್ ಕೂಡ ಅರ್ಧಶತಕ (29 ಎಸೆತ) ದಾಖಲಿಸಿದರು.
Advertisement
ICYMI – 6,6,4 – @ImRo45 goes berserk
Brutal! Rohit Sharma showcasing his class with some incredible hitting off Pierre.
Full video here – https://t.co/tVaeZkwKTZ #INDvWI pic.twitter.com/1ilZLEzCgh
— BCCI (@BCCI) December 11, 2019
ಯುವಿ ಸರಿಗಟ್ಟಿದ ರಾಹುಲ್:
ಅಂತರರಾಷ್ಟ್ರೀಯ ಟಿ20ಯಲ್ಲಿ 8 ಅರ್ಧ ಶತಕ ಸಿಡಿಸುವ ಮೂಲಕ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಯುವಿ 51 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ 8 ಅರ್ಧಶತಕ ಪೂರೈಸಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ಸಿಕ್ಸ್ ಹೊಡೆಯಲು ಯತ್ನಿಸಿದ ರೋಹಿತ್ ಕ್ಯಾಚ್ ನೀಡಿದರು. ರೋಹಿತ್ 34 ಎಸೆತಗಳಲ್ಲಿ (6 ಬೌಂಡರಿ, 5 ಸಿಕ್ಸರ್) 71 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ರಿಷಭ್ ಪಂತ್ (ಶೂನ್ಯಕ್ಕೆ) ಬಹುಬೇಗ ಪೆವಿಲಿಯನ್‍ಗೆ ತೆರಳಿದರು. ನಂತರ ಮೈದಾಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 17ನೇ ಓವರ್ ಮುಕ್ತಾಯಕ್ಕೆ ಭಾರತವು ಎರಡು ವಿಕೆಟ್ ನಷ್ಟದಿಂದ 204 ರನ್ ಗಳಿಸಿತು. ಈ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಅರ್ಧಶತಕ (21 ಎಸೆತ) ಪೂರೈಸಿದರು. ಶತಕದ ಹೊಸ್ತಿಲಲ್ಲಿದ್ದ ಕೆ.ಎಲ್.ರಾಹುಲ್ 91 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
WATCH: The dual @klrahul11 upper cuts
Same ball, same shot, same area – presenting the KL Rahul sixes zone
Full video here – https://t.co/y7GALp7lMk #INDvWI pic.twitter.com/sOBwNjR5Rj
— BCCI (@BCCI) December 11, 2019
ಹಿಟ್‍ಮ್ಯಾನ್ ಸಿಕ್ಸರ್ ದಾಖಲೆ:
ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದಾರೆ. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‍ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು. 360 ಇನ್ನಿಂಗ್ಸ್ ಗಳಲ್ಲಿ ರೋಹಿತ್ ಈ ಸಾಧನೆ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 232 ಮತ್ತು ಟಿ-20ಯಲ್ಲಿ 120 ಸಿಕ್ಸರ್ ಸೇರಿ ಒಟ್ಟು 404 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.
ಕೊಹ್ಲಿ-ರೋಹಿತ್ ಸಮಬಲ:
ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 2ನೇ ಪಂದ್ಯದಲ್ಲಿ 19 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದರು. ಈ ಪಂದ್ಯದಲ್ಲಿ 71 ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಗ್ರಸ್ಥಾನಕ್ಕೆ ಏರಿದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ವಿರಾಟ್ 70 ರನ್ ಗಳಿಸಿ ರೋಹಿತ್‍ರನ್ನು ಸರಿಗಟ್ಟಿದರು. ರೋಹಿತ್ ಶರ್ಮಾ ಹಾಗೂ ಕೊಹ್ಲಿ ತಲಾ 2,633 ರನ್ ಗಳಿಸಿದ್ದಾರೆ.
Innings Break!
An absolute run fest here at the Wankhede as #TeamIndia put up a stupendous total of 240/3 on the board, courtesy batting fireworks by Rohit (71), Rahul (91), Kohli (70*).@Paytm #INDvWI pic.twitter.com/O5t0SoWLoS
— BCCI (@BCCI) December 11, 2019