ಟ್ರಿನಿನಾಡ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ 10 ಓವರ್ ಎಸೆಯಲು ಬಂದ ಆಟಗಾರನ ಜೆರ್ಸಿಯಲ್ಲಿ ಮಾತ್ರ ಪ್ರಸಿದ್ಧ್ ಕೃಷ್ಣ ಎಂದು ಹೆಸರಿತ್ತು. ಇದನ್ನು ಕಂಡು ಒಂದು ಕ್ಷಣ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
Advertisement
ಹೌದು ಎರಡನೇ ಏಕದಿನ ಪಂದ್ಯದ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಉತ್ತಮ ಆರಂಭವನ್ನು ಪಡೆಯಿತು. ಕೈಲ್ ಮೇಯರ್ಸ್ ಮತ್ತು ಶಾಯ್ ಹೋಪ್ ಮೊದಲ ವಿಕೆಟ್‍ಗೆ 65 ರನ್‍ಗಳ ಜೊತೆಯಾಟವಾಡಿದ್ದರು. ಇತ್ತ ಟೀಂ ಇಂಡಿಯಾ ಕ್ಯಾಪ್ಟನ್ ಶಿಖರ್ ಧವನ್ ವಿಕೆಟ್ ಬೇಟೆಗಾಗಿ ಬೌಲರ್‌ಗಳ ಬದಲಾವಣೆ ಮಾಡುತ್ತಿದ್ದರು. 10 ನೇ ಓವರ್ ದೀಪಕ್ ಹೂಡಾಗೆ ಬೌಲಿಂಗ್ ಮಾಡುವ ಅವಕಾಶವನ್ನು ನೀಡಲಾಯಿತು. ಈ ವೇಳೆ ಬೌಲಿಂಗ್ ಮಾಡಲು ಬಂದ ಹೂಡಾ ತಿರುಗಿ ನಿಂತಂತೆ ಅವರ ಜೆರ್ಸಿಯಲ್ಲಿ ಪ್ರಸಿದ್ಧ್ ಕೃಷ್ಣ ಹೆಸರು ಕಾಣಿಸಿತು. ಇದನ್ನು ಕಂಡ ವೀಕ್ಷಕರು ಪ್ರಸಿದ್ಧ್ ಕೃಷ್ಣ ಹೇಗೆ ಬಂದ್ರು ಎಂದು ಒಂದು ಕ್ಷಣ ಬೆರಗಾಗಿದ್ದಾರೆ. ಇದನ್ನೂ ಓದಿ: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ
Advertisement
Windies won the toss and opt to bat. Avesh Khan replaces Prasidh Krishna #WIvIND #IndvsWI #WIvsIND #INDvWI pic.twitter.com/mjkdP1CJzE
— Extra Pace (@ExtraPace) July 24, 2022
Advertisement
ಆ ಬಳಿಕ ದೀಪಕ್ ಹೂಡಾ ಪ್ರಸಿದ್ಧ್ ಕೃಷ್ಣ ಜೆರ್ಸಿಯನ್ನು ತೊಟ್ಟಿರುವುದು ತಿಳಿಯಿತು. ನಂತರ ಓವರ್ ಮುಗಿದ ಬಳಿಕ ಜೆರ್ಸಿ ಬದಲಾವಣೆ ಮಾಡಿಕೊಂಡರು. ಅಲ್ಲದೇ ಹೂಡಾ ಇದೇ ಓವರ್‌ನಲ್ಲಿ ವಿಕೆಟ್ ಕೂಡ ಪಡೆದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ದೀಪಕ್ ಹೂಡಾ ಜೆರ್ಸಿ ಬಗ್ಗೆ ನೆಟ್ಟಿಗರು ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮುಂದಿನ ಗುರಿ 90 ಮೀ. ಎಸೆತ – ಪದಕದ ಬಣ್ಣ ಬದಲಾಯಿಸಲು ಪ್ರಯತ್ನಿಸುತ್ತೇನೆ: ನೀರಜ್ ಚೋಪ್ರಾ
Advertisement
Deepak Hooda wear prasidh Krishna's Jersey ????????#IndvsWI #WIvsIND #arshdeep #FanCode pic.twitter.com/lqlWQCDQ8z
— ASH (@ASH06207733) July 24, 2022
ಈ ಹಿಂದೆ ಟೀಂ ಇಂಡಿಯಾ ನಾಯಕರಾಗಿದ್ದ ಸೌರವ್ ಗಂಗೂಲಿ ಬ್ಯಾಟಿಂಗ್‍ಗೆ ಆಗಮಿಸಿದ್ದ ವೇಳೆ ಸುರೇಶ್ ರೈನಾರ ಜೆರ್ಸಿ ತೊಟ್ಟಿದ್ದರು. ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಇದೀಗ ಹರಿದಾಡುತ್ತಿದೆ.
Deepak Hooda wearing Prasidh Krishna's jersey. #INDvWI #WIvsIND pic.twitter.com/rnJVJOS4GS
— GoldenDuck (@goldenduckcrick) July 24, 2022
ಇನ್ನೂ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 312 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಅಕ್ಷರ್ ಪಟೇಲ್ ಅಜೇಯ 64 ರನ್ (35 ಎಸೆತ, 3 ಬೌಂಡರಿ, 5 ಸಿಕ್ಸ್) ಚಚ್ಚಿ ಮ್ಯಾಚ್ ಫಿನಿಶ್ ಮಾಡಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ವಿಕೆಟ್ ಕಳೆದುಕೊಂಡು ಸಾಗಿದ ಭಾರತಕ್ಕೆ ಕೊನೆಯ ಓವರ್‌ನಲ್ಲಿ 8 ರನ್‍ಗಳ ಅವಶ್ಯಕತೆ ಇತ್ತು. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ ಮುಂದಿನ ಎರಡು ಎಸೆತಗಳಲ್ಲಿ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ರನ್ ಕಸಿದರು. ಕೊನೆಯ 3 ಎಸೆತಗಳಲ್ಲಿ ಭಾರತದ ಗೆಲುವಿಗೆ 6 ರನ್ ಬೇಕಾಗಿತ್ತು. 4 ಎಸೆತವನ್ನು ಸಿಕ್ಸರ್‌ಗಟ್ಟಿದ ಅಕ್ಷರ್ ಪಟೇಲ್ 49.4 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‍ಗಳನ್ನು ಕಳೆದುಕೊಂಡು ಇನ್ನೂ 2 ಎಸೆತ ಬಾಕಿ ಇರುವಂತೆ 2 ವಿಕೆಟ್‍ಗಳ ರೋಚಕ ಜಯ ತಂದುಕೊಟ್ಟರು.