ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಬಳಸಲಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕವಾಗಿರಲಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ -1 ರೇಟಿಂಗ್ ನೀಡಿದೆ.
Advertisement
ಭಾರತ ಹಾಗೂ ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯವಾಗಿತ್ತು. ಬಳಿಕ ಪಿಚ್ ಬಗ್ಗೆ ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಐಸಿಸಿಗೆ ವರದಿ ಸಲ್ಲಿಸಿದ್ದರು. ಪಿಚ್ ಮೊದಲ ದಿನವೇ ಸ್ಪಿನ್ನರ್‌ಗಳಿಗೆ ನಿರೀಕ್ಷೆಗಿಂತ ಹೆಚ್ಚು ನೆರವು ನೀಡಿತ್ತು. ಪಿಚ್ ಸ್ಪರ್ಧಾತ್ಮಕವಾಗಿರಲಿಲ್ಲ ಎಂದು ಶ್ರೀನಾಥ್ ಐಸಿಸಿಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಬಳಿಕ ಪಿಚ್ ಸಾಧಾರಣವಾಗಿತ್ತು ಎಂದು ಐಸಿಸಿ -1 ರೇಟಿಂಗ್ ನೀಡಿದೆ. ಇದನ್ನೂ ಓದಿ: ಟಿ20 ಮಾದರಿಯಲ್ಲಿ ಏಷ್ಯಾ ಕಪ್ – ಶ್ರೀಲಂಕಾದಲ್ಲಿ ಆಗಸ್ಟ್ 27ಕ್ಕೆ ಆರಂಭ
Advertisement
Advertisement
ಅಂತಾರಾಷ್ಟ್ರೀಯ ಪಂದ್ಯ ಕೈತಪ್ಪುವ ಭೀತಿ:
ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯಗಳು ನಿಗದಿಪಡಿಸಿದ ದಿನಕ್ಕಿಂತ ಮುಂಚಿತವಾಗಿ ಪೂರ್ಣಗೊಂಡರೆ ಮ್ಯಾಚ್ ರೆಫ್ರಿ ಪಿಚ್ ಬಗ್ಗೆ ಐಸಿಸಿಗೆ ವರದಿ ಸಲ್ಲಿಸಬೇಕು. ಮ್ಯಾಚ್ ರೆಫ್ರಿ ಸಲ್ಲಿಸಿದ ವರದಿ ಪರಿಶೀಲಿಸಿದ ಬಳಿಕ ಐಸಿಸಿ ಪಿಚ್ ಕಳಪೆ ಮಟ್ಟದ್ದಾಗಿದ್ದರೆ -3 ಹಾಗೂ ಆಟಕ್ಕೆ ಯೋಗ್ಯವಲ್ಲದ ಪಿಚ್‍ಗೆ -5 ಅಂಕ ನೀಡುತ್ತದೆ. 5 ವರ್ಷಗಳೊಳಗೆ -5 ಅಂಕ ಪಡೆಯುವ ಪಿಚ್‍ಗಳಲ್ಲಿ 1 ವರ್ಷಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವುದಿಲ್ಲ. ಇದೀಗ ಕೆಎಸ್‍ಸಿಎಗೆ -1 ಅಂಕ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಿಚ್ ಸಿದ್ಧಪಡಿಸುವಾಗ ಬಹಳ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೇ ಗುಣಮಟ್ಟದ ಪಿಚ್ ತಯಾರಿಕೆಗಾಗಿ ಗಮನಹರಿಸಬೇಕಾಗಿದೆ. ಇದನ್ನೂ ಓದಿ: 238 ರನ್‍ಗಳ ಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ
Advertisement
𝗦𝗲𝗿𝗶𝗲𝘀 𝗦𝘄𝗲𝗲𝗽 𝗖𝗼𝗺𝗽𝗹𝗲𝘁𝗲𝗱! 👍 👍@Paytm #INDvSL pic.twitter.com/Cm6KZg7y0s
— BCCI (@BCCI) March 14, 2022
ಪಿಂಕ್ ಬಾಲ್ ಟೆಸ್ಟ್ ಫಲಿತಾಂಶ:
ಕೆಎಸ್‍ಸಿಎಯಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ 252ಕ್ಕೆ ಆಲೌಟ್ ಆಗಿತ್ತು. ಬಳಿಕ ಶ್ರೀಲಂಕಾ ಬ್ಯಾಟಿಂಗ್ ಆರಂಭಿಸಿ 109 ರನ್‍ಗಳಿಗೆ ಸರ್ವಪತನ ಕಂಡಿತು. 143 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 303 ರನ್‍ಗಳಿಗೆ 9 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತ್ತು. ಗೆಲ್ಲಲು 447 ರನ್ ಗುರಿ ಪಡೆದ ಶ್ರೀಲಂಕಾ ತಂಡ 208 ರನ್‍ಗಳಿಗೆ ಆಲೌಟ್ ಆಯಿತು. ಭಾರತ ತಂಡ 238 ರನ್‍ಗಳ ಜಯ ಗಳಿಸಿತು. ಈ ಮೂಲಕ ಮೂರೇ ದಿನಕ್ಕೆ ಟೆಸ್ಟ್ ಪಂದ್ಯ ಅಂತ್ಯಗೊಂಡಿತ್ತು.