ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳಲಿದ್ದಾರೆ. ಆದರೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡು ಸಾಧ್ಯತೆ ಇದೆ.
ಹಾರ್ದಿಕ್ ಪಾಂಡೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಸದ್ಯ ಚೇತರಿಸಿಕೊಂಡಿರುವ ಅವರು ದೇಶಿಯ ಟೂರ್ನಿಯ ಭಾಗವಾಗಿ ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಕಪ್‍ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಪಾಂಡ್ಯ 4 ದಿನಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ರಿಲಯನ್ಸ್ -1 ಪರ ಆಡುತ್ತಿರುವ ಪಾಂಡ್ಯ ಶುಕ್ರವಾರ ಬಿಪಿಸಿಎಲ್ ವಿರುದ್ಧ 55 ಎಸೆತಗಳಲ್ಲಿ 158 ರನ್ (20 ಸಿಕ್ಸರ್, 6 ಬೌಂಡರಿ) ಚಚ್ಚಿದ್ದರು. ಇದಕ್ಕೂ ಮೊದಲು ಅವರು ಮಾರ್ಚ್ 3 ರಂದು ಸಿಎಜಿ ವಿರುದ್ಧ 39 ಎಸೆತಗಳಲ್ಲಿ 105 ರನ್ (7 ಬೌಂಡರಿ, 10 ಸಿಕ್ಸರ್) ಸಿಡಿದ್ದರು.
Advertisement
Advertisement
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಾರ್ಚ್ 12ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಮಾರ್ಚ್ 15ರಂದು ಲಕ್ನೋದಲ್ಲಿ ಮತ್ತು ಮೂರನೇ ಪಂದ್ಯ ಕೋಲ್ಕತ್ತಾದಲ್ಲಿ ಮಾರ್ಚ್ 18ರಂದು ನಡೆಯಲಿದೆ.
Advertisement
ಬಿಸಿಸಿಐ ಮೂಲಗಳ ಪ್ರಕಾರ, ಡಿ.ವೈ. ಪಾಟೀಲ್ ಟಿ20 ಟೂರ್ನಿಯು ಪಾಂಡ್ಯ ಅವರಿಗೆ ಉತ್ತಮ ವೇದಿಕೆ ಕಲ್ಪಿಸಿತು. ಅವರು ಶಸ್ತ್ರಚಿಕಿತ್ಸೆಯ ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಪಾಂಡ್ಯ ಈಗ ಫಿಟ್ ಆಗಿದ್ದಾರೆ. ಡಿ.ವೈ.ಪಾಟೀಲ್ ಟೂರ್ನಿಯಲ್ಲಿ ಅವರ ಆಟವೂ ಇದನ್ನು ಸಾಬೀತುಪಡಿಸಿದೆ. ಹೀಗಾಗಿ ಶೀಘ್ರದಲ್ಲೇ ಪಾಂಡ್ಯ ಟೀಂ ಇಂಡಿಯಾಗೆ ಮರಳಲಿದ್ದಾರೆ ಎನ್ನಲಾಗಿದೆ.
Advertisement
ಶಸ್ತ್ರಚಿಕಿತ್ಸೆಯ ನಂತರ ಆಲ್‍ರೌಂಡರ್ ಪಾಂಡ್ಯ ದೆಹಲಿ ಕ್ಯಾಪಿಟಲ್ಸ್ ತರಬೇತುದಾರ ರಜನಿಕಾಂತ್ ಶಿವಗನಮ್ ಅವರ ಸಹಾಯ ಪಡೆದು ಅಭ್ಯಾಸ ನಡೆಸಿದರು. ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎಲ್ಲಾ ಆಟಗಾರರು ಅಭ್ಯಾಸ ನಡೆಸವನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದರು. ಹೀಗಾಗಿ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಪಾಂಡ್ಯ ಟೀಂ ಇಂಡಿಯಾ ಜೊತೆ ನೆಟ್‍ನಲ್ಲಿ ಅಭ್ಯಾಸ ಮಾಡಿದ್ದರು.
ಡಿ.ವೈ. ಪಾಟೀಲ್ ಟೂರ್ನಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪಾಂಡ್ಯ, ಈ ಟೂರ್ನಿ ನನ್ನ ದೇಹದ ಸಾಮಥ್ರ್ಯವನ್ನು ಪರೀಕ್ಷಿಸಲು ಸರಿಯಾದ ವೇದಿಕೆಯಾಗಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ಖುಷಿ ತಂದಿದೆ. ನಾನು ಬಿರುಸಿನ ಹೊಡೆತಗಳನ್ನು ಆಡಲು ಬಯಸುತ್ತೇನೆ. ಹೀಗಾಗಿ ರನ್ ಹೊಳೆ ಹರಿಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ನಿರ್ಧಾರ ಸರಿಯಾಗಿದೆ ಎಂದು ಸಾಬೀತುಪಡಿಸುತ್ತದೆ. ಆದರೆ ಪ್ರತಿ ಇನ್ನಿಂಗ್ಸ್ ನಲ್ಲೂ ಈ ರೀತಿ ಆಡುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ.