ಧರ್ಮಶಾಲಾ: ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವಣ ಮೊದಲ ಟ್ವೆಂಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಬೆಳಗ್ಗೆಯಿಂದ ಸುರಿದ ಮಳೆಯಿಂದಾಗಿ ಪಂದ್ಯಕ್ಕೆ ಪಿಚ್ ಸಿದ್ಧಗೊಳಿಸುವುದು ಮೈದಾನದ ಸಿಬ್ಬಂದಿಗೆ ಸವಾಲಿನ ವಿಷಯವಾಗಿತ್ತು. ಸುರಿದ ಮಳೆಯಿಂದಾಗಿ ಟಾಸ್ ಕೂಡ ಮಾಡದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಸರಣಿಯ ಎರಡನೇ ಪಂದ್ಯವು ಸೆಪ್ಟೆಂಬರ್ 18ರಂದು ಮೊಹಾಲಿ ಹಾಗೂ ಮೂರನೇ ಪಂದ್ಯವು ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಉಭಯ ತಂಡಗಳ ನಡುವೆ ಈವರೆಗೆ ಒಟ್ಟು 14 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 8 ಪಂದ್ಯಗಳಲ್ಲಿ ಜಯಗಳಿಸಿದೆ. ದಕ್ಷಿಣ ಆಫ್ರಿಕಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಒಂದು ಪಂದ್ಯ ರದ್ದುಗೊಂಡಿದೆ. ಐಸಿಸಿ ಬಿಡುಗಡೆ ಮಾಡಿರುವ ಟ್ವೆಂಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಭಾರತವು ನಾಲ್ಕು, ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ.
The rains continue and the match has officially been called off. See you in Chandigarh for the 2nd T20I #INDvSA pic.twitter.com/BjZ9Y7QAf2
— BCCI (@BCCI) September 15, 2019
ಎರಡೂ ತಂಡಗಳು:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಖಲೀಲ್ ಅಹ್ಮದ್, ದೀಪಕ್ ಚಹರ್, ನವದೀಪ್ ಸೈನಿ.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ನಾಯಕ), ರಾಸೀ ವ್ಯಾನ್ ಡೆರ್ ದುಸೆನ್, ತೆಂಬಾ ಬವುಮಾ, ಜೂನಿಯರ್ ದಾಲಾ, ಜಾರ್ನ್ ಫಾರ್ಚೂಯಿನ್, ಬ್ಯೂರಾನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಅನ್ರಿಕ್ ನೊಟ್ರ್ಜೆ, ಆ್ಯಂಡಿಲ್ ಪೆಹ್ಲುಕಾಯೊ, ಡ್ವೇನ್ ಪ್ರೊಟೊರಿಯಸ್, ಕಗಿಸೊ ರಬಾಡ, ಟಬ್ರೈಜ್ ಶಮ್ಸಿ, ಜಾರ್ಜ್ ಲಿಂಡೆ.
Work in progress at the moment to get the ground ready here in Dharamsala ????????#INDvSA pic.twitter.com/Oqbsy3go0g
— BCCI (@BCCI) September 15, 2019