ಜೋಹನ್ಸ್‌ಬರ್ಗ್: 2ನೇ ಟೆಸ್ಟ್‌ನ ಎರಡನೇ ದಿನ ಶಾರ್ದೂಲ್ ಠಾಕೂರ್ 7 ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾಗೆ ಕಡಿವಾಣ ಹಾಕಿದ್ದಾರೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 58 ರನ್‍ಗಳ ಮುನ್ನಡೆ ಪಡೆದುಕೊಂಡಿದೆ.
Advertisement
ಮೊದಲ ದಿನದಾಟದಲ್ಲಿ 35 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾಗೆ ಎರಡನೇ ದಿನ ಶಾರ್ದೂಲ್ ಠಾಕೂರ್ ಅಕ್ಷರಷಃ ಮುಳ್ಳಾದರು. ಡೀನ್ ಎಲ್ಗರ್ 28 ರನ್ (120 ಎಸೆತ, 4 ಬೌಂಡರಿ) ವಿಕೆಟ್ ಬೇಟೆಯ ಮೂಲಕ ಆರಂಭವಾದ ಠಾಕೂರ್ ಆರ್ಭಟ ಆಫ್ರಿಕಾವನ್ನು ಆಲ್‍ಔಟ್ ಮಾಡುವವರೆಗೂ ಮುಂದುವರಿಯಿತು. ಇದನ್ನೂ ಓದಿ: ಪಂತ್ ವಿವಾದಾತ್ಮಕ ಕ್ಯಾಚ್ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ
Advertisement
Advertisement
ಆಫ್ರಿಕಾ ಪರ ಕೀಗನ್ ಪೀಟಸರ್ನ್ 62 ರನ್ (118 ಎಸೆತ, 9 ಬೌಂಡರಿ) ಮತ್ತು ತೆಂಬ ಬವುಮ 51 ರನ್ (60 ಎಸೆತ, 6 ಬೌಂಡರಿ, 1 ಸಿಕ್ಸ್) ಸ್ವಲ್ಪ ಹೊತ್ತು ಭಾರತದ ಬೌಲರ್‍ಗಳನ್ನು ಕಾಡಿದರೂ. ಈ ಇಬ್ಬರನ್ನೂ ಕೂಡ ಠಾಕೂರ್ ಪೆವಿಲಿಯನ್‍ಗೆ ಕಳುಹಿಸಿದರು. ಇವರ ಬಳಿಕ ಕೈಲ್ ವೆರೆನ್ನೆ 21 ರನ್ (72 ಎಸೆತ, 2 ಬೌಂಡರಿ), ಮಾರ್ಕೊ ಜಾನೆನ್ಸ್ 21 ರನ್ (34 ಎಸೆತ, 3 ಬೌಂಡರಿ) ಮತ್ತು ಕೇಶವ್ ಮಹಾರಾಜ್ 21 ರನ್ (29 ಎಸೆತ, 3 ಬೌಂಡರಿ) ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿ ಅಲ್ಪ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ 79.4 ಓವರ್‌ಗಳ ಅಂತ್ಯದಲ್ಲಿ 229 ರನ್‍ಗಳಿಗೆ ಸರ್ವಪತನ ಕಂಡು 27 ರನ್‍ಗಳ ಮುನ್ನಡೆ ಪಡೆದುಕೊಂಡಿತು.
Advertisement
ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ 17.5 ಓವರ್ ಎಸೆದು 61 ರನ್ ಕೊಟ್ಟು 7 ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಮೊಹಮ್ಮದ್ ಶಮಿ 2 ಮತ್ತು ಬುಮ್ರಾ 1 ವಿಕೆಟ್ ಕಿತ್ತರು. ಇದನ್ನೂ ಓದಿ: ಟೀಂ ಇಂಡಿಯಾ ಪರ ನೂತನ ಮೈಲಿಗಲ್ಲು ನೆಟ್ಟ ಶಮಿ, ಪಂತ್ ಸಂಭ್ರಮ
ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಕೆ.ಎಲ್ ರಾಹುಲ್ 8 ರನ್ (21 ಎಸೆತ, 1 ಬೌಂಡರಿ) ಮತ್ತು ಮಯಾಂಕ್ ಅಗರ್ವಾಲ್ 23 ರನ್ (37 ಎಸೆತ, 5 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಒಂದಾದ ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಚೇತೇಶ್ವರ ಪೂಜಾರ ಅಜೇಯ 35 ರನ್ (42 ಎಸೆತ, 7 ಬೌಂಡರಿ) ಮತ್ತು ಅಜಿಂಕ್ಯಾ ರಹಾನೆ 11 ರನ್ (22 ಎಸೆತ, 1 ಬೌಂಡರಿ) ಸಿಡಿಸಿ 3ನೇ ವಿಕೆಟ್‍ಗೆ 41 ರನ್ (52 ಎಸೆತ) ಜೊತೆಯಾಟವಾಡಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಾಟದ ಅಂತ್ಯಕ್ಕೆ ಭಾರತ ತಂಡ 20 ಓವರ್‌ಗಳಲ್ಲಿ 85 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು 58 ರನ್‍ಗಳ ಮುನ್ನಡೆಯಲ್ಲಿದೆ.