– ಎರಡಂಕಿಯೂ ಹೊಡೆಯದ 8 ಟೀಂ ಇಂಡಿಯಾ ಆಟಗಾರರು
ಸೆಂಚೂರಿಯನ್: ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಭಾರತ (Team India) ಟೆಸ್ಟ್ ಕ್ರಿಕೆಟ್ ಮುಗ್ಗರಿಸಿದೆ. ಮುಗ್ಗರಿಸಿದ್ದು ಮಾತ್ರವಲ್ಲ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಹೀನಾಯವಾಗಿ ಸೋತಿದೆ. ಮೊದಲ ಟೆಸ್ಟ್ (Test Cricket) ಪಂದ್ಯವನ್ನು ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಗೆದ್ದ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
Advertisement
ಎರಡನೇ ದಿನ 5 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿದ್ದ ಆಫ್ರಿಕಾ ಇಂದು 108.4 ಓವರ್‌ಗಳಲ್ಲಿ 408 ರನ್‌ಗಳಿಗೆ ಆಲೌಟ್ ಆಯ್ತು. 163 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿವಾಗಿ 34.1 ಓವರ್‌ಗಳಲ್ಲಿ 131 ರನ್‌ಗಳಿಗೆ ಸರ್ವಪತನ ಕಂಡಿತು.
Advertisement
Advertisement
ಟೀಂ ಇಂಡಿಯಾದ ಬ್ಯಾಟಿಂಗ್ ಎಷ್ಟು ಕಳಪೆ ಆಗಿತ್ತು ಶುಭಮನ್ ಗಿಲ್ 26 ರನ್, ವಿರಾಟ್ ಕೊಹ್ಲಿ 76 ರನ್(82 ಎಸೆತ, 12 ಬೌಂಡರಿ, 1 ಸಿಕ್ಸರ್) ಹೊಡೆದದ್ದು ಬಿಟ್ಟರೆ ಉಳಿದ 8 ಆಟಗಾರರು ಎರಂಡಕಿ ಗಳಿಸದೇ ಔಟಾಗಿದ್ದರು. ಇದನ್ನೂ ಓದಿ: ಗಲ್ಲು ಶಿಕ್ಷೆ ರದ್ದು – ಕತಾರ್ ಜೈಲಿನಲ್ಲಿರುವ 8 ಭಾರತೀಯರಿಗೆ ಬಿಗ್ ರಿಲೀಫ್
Advertisement
ಯಶಸ್ವಿ ಜೈಸ್ವಾಲ್ 5, ನಾಯಕ ರೋಹಿತ್ ಶರ್ಮಾ 0, ಶ್ರೇಯಸ್ ಅಯ್ಯರ್ 6, ಕೆಎಲ್ ರಾಹುಲ್ 4, ರವಿಚಂದ್ರನ್ ಅಶ್ವಿನ್ 0, ಶಾರ್ದೂಲ್ ಠಾಕೂರ್ 2, ಬುಮ್ರಾ 0, ಸಿರಾಜ್ 4, ಪ್ರಸಿದ್ಧ್ ಕೃಷ್ಣ ಔಟಾಗದೇ 0 ರನ್ ಗಳಿಸಿದರು.
ಬರ್ಜರ್ 4 ವಿಕೆಟ್ ಪಡೆದರೆ, ಮಾರ್ಕೋ ಜನ್‌ಸೆನ್ 3 ವಿಕೆಟ್, ರಬಾಡ 2 ವಿಕೆಟ್ ಕಿತ್ತು ಟೀಂ ಇಂಡಿಯಾದ ಬ್ಯಾಟಿಂಗ್ ಬಲವನ್ನು ಮುರಿದರು.
ಎರಡನೇ ದಿನ 140 ರನ್ ಗಳಿಸಿ ಅಜೇಯರಾಗಿದ್ದ ಎಲ್ಗರ್ ಇಂದು 185 ರನ್ (287 ಎಸೆತ, 28 ಬೌಂಡರಿ) ಹೊಡೆದು ಔಟಾದರೇ ಮಾರ್ಕೋ ಜನ್‌ಸೆನ್ 84 ರನ್ (147 ಎಸೆತ, 11 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಭಾರತ ಇತರ ರೂಪದಲ್ಲಿ 24 ರನ್ ನೀಡಿತ್ತು. ಶತಕ ಸಿಡಿಸಿದ ಡೀನ್ ಎಲ್ಗರ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ – 245/10
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ – 408/10
ಭಾರತ ಎರಡನೇ ಇನ್ನಿಂಗ್ಸ್ – 131/10