ಢಾಕಾ: ಪಾಕಿಸ್ತಾನ (Pakistan) ತಂಡದ ಆಲ್‍ರೌಂಡರ್ ನಿದಾ ದಾರ್ (Nida Dar) ಕಳೆದ 10 ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತಕ್ಕೆ ಮುಳ್ಳಾಗಿದ್ದಾರೆ.
Advertisement
ಕಳೆದ 10 ವರ್ಷಗಳಿಂದ ಪಾಕಿಸ್ತಾನ ತಂಡ ಭಾರತ ವಿರುದ್ಧ ಆಡುವಾಗ ಉತ್ತಮ ಪ್ರದರ್ಶನದ ಮೂಲಕ ನಿದಾ ದಾರ್ ಗಮನಸೆಳೆದಿದ್ದಾರೆ. ಇದೀಗ ನಡೆಯುತ್ತಿರುವ ಏಷ್ಯಾಕಪ್‍ನಲ್ಲೂ (AsiaCup) ಇದೇ ಪ್ರದರ್ಶನ ನಿದಾ ದಾರ್ ಮುಂದುವರಿಸಿದ್ದಾರೆ. ಅ.7 ರಂದು ಭಾರತ ಹಾಗೂ ಪಾಕಿಸ್ತಾನ ಏಷ್ಯಾಕಪ್‍ನ ಲೀಗ್ ಪಂದ್ಯದಲ್ಲಿ ಎದುರು ಬದುರಾಗಿತ್ತು. ಈ ಪಂದ್ಯದಲ್ಲೂ ಮಿಂಚಿದ್ದು ಮಾತ್ರ 35ರ ಹರೆಯದ ನಿದಾ ದಾರ್. ಇದನ್ನೂ ಓದಿ: ಕನ್ನಡಿಗ ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ?
Advertisement
Advertisement
ನಿದಾ ದಾರ್ ಏಷ್ಯಾಕಪ್‍ನಲ್ಲಿ ಪಾಕಿಸ್ತಾನ ಕುಸಿತಕಂಡು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಸ್ಥಿತಿಯಲ್ಲಿದ್ದಾಗ ಅಜೇಯ 56 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ ಬ್ಯಾಟಿಂಗ್‍ನಲ್ಲಿ ನೆರವಾದರು. ಆ ಬಳಿಕ ಪಾಕಿಸ್ತಾನದ ಅಲ್ಪಮೊತ್ತವನ್ನು ಬೆನ್ನಟ್ಟಲು ಹೊರಟ ಭಾರತಕ್ಕೆ ಬೌಲಿಂಗ್‍ನಲ್ಲೂ ಆಘಾತ ನೀಡಿದರು. ಪ್ರಮುಖ 2 ವಿಕೆಟ್ ಕಿತ್ತು ಭಾರತ 124 ರನ್‍ಗಳಿಗೆ ಆಲೌಟ್ ಆಗುವಂತೆ ನೋಡಿಕೊಂಡು ಪಾಕಿಸ್ತಾನಕ್ಕೆ 13 ರನ್ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದನ್ನೂ ಓದಿ: Womens Asia Cup: ರಿಚಾ ಘೋಷ್ ವಿಫಲ ಹೋರಾಟ – ಪಾಕ್ ವಿರುದ್ಧ ಭಾರತಕ್ಕೆ ಸೋಲು
Advertisement
ಈ ಮೂಲಕ ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2012ರಲ್ಲೂ ನಿದಾ ದಾರ್ ಭಾರತಕ್ಕೆ ಆಘಾತ ನೀಡಿದ್ದರು. ಅಂದು ಪಾಕಿಸ್ತಾನ ಒಂದು ರನ್‍ಗಳ ರೋಚಕ ಜಯ ಸಾಧಿಸಿದ ಪಂದ್ಯದಲ್ಲಿ ನಿದಾ ದಾರ್ 12 ರನ್ ನೀಡಿ 3 ವಿಕೆಟ್ ಕಿತ್ತು ವಿಜಯದ ರೂವಾರಿಯಾಗಿದ್ದರು. ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದಿದ್ದರು.