– ಜೈಸ್ವಾಲ್ ಶತಕ, ಸಕ್ಸೇನಾ ಅರ್ಧಶಕತ ಸಂಭ್ರಮ
– ಮೊದಲ ವಿಕೆಟಿಗೆ 176 ರನ್ ಜೊತೆಯಾಟಕ್ಕೆ ಅಭಿಮಾನಿಗಳು ಫಿದಾ
ಪೊಷೆಫ್‍ಸ್ಟ್ರೂಮ್: ಸುಶಾಂತ್ ಮಿಶ್ರಾ ಸೂಪರ್ ಬೌಲಿಂಗ್, ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಭರ್ಜರಿ ಬ್ಯಾಟಿಂಗ್‍ನಿಂದ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧದ ಅಂಡರ್ 19 ವಿಶ್ವಕಪ್ನಲ್ಲಿ ಭರ್ಜರಿ ಗೆಲುವು ದಾಖಲಿಸಿ, ಅಜೇಯವಾಗಿ ಫೈನಲಿಗೆ ಲಗ್ಗೆ ಇಟ್ಟಿದೆ.
ಮಂಗಳವಾರ ಪೊಷೆಫ್‍ಸ್ಟ್ರೂಮ್‍ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‍ನಲ್ಲಿ ಭಾರತವು 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 7ನೇ ಬಾರಿ ಭಾರತ ಫೈನಲ್ ಪ್ರವೇಶ ಮಾಡಿದೆ.
Advertisement
Advertisement
ಪಾಕಿಸ್ತಾನದ ಅಂಡರ್ 19 ತಂಡ ನೀಡಿದ್ದ 173 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಮುರಿಯಲು ಪಾಕ್ ಬೌಲರ್‍ಗಳು ತಿಣುಕಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಭಾರತವು ಯಾವುದೇ ವಿಕೆಟ್ ಕಳೆದುಕೊಳ್ಳದೆ 35.2 ಓವರಿನಲ್ಲಿ 176 ರನ್ ಪೇರಿಸಿ ಜಯಗಳಿಸಿತು.
Advertisement
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ಅಂಡರ್ 19 ತಂಡವನ್ನು ಭಾರತದ ಯುವ ಪಡೆ ಸಮರ್ಥವಾಗಿ ಕಟ್ಟಿ ಹಾಕಿತ್ತು. ಇನ್ನಿಂಗ್ಸ್ ನ ಎರಡನೇ ಓವರಿನಲ್ಲಿ ಪಾಕ್ ಒಂದು ವಿಕೆಟ್ ಕಳೆದುಕೊಂಡು ಆಘಾತಕ್ಕೆ ತುತ್ತಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಹೈದರ್ ಅಲಿ ವಿಕೆಟ್ ಕಾಯ್ದುಕೊಂಡು ಆಡಿದರಾದರೂ ಮೈದಾನಕ್ಕಿಳಿದ ಉಳಿದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿದ್ದರು. ಇದರಿಂದಾಗಿ ಪಾಕ್ ತಂಡವು ಮೂರನೇ ವಿಕೆಟ್‍ಗೆ 96 ರನ್ ಪೇರಿಸಿತ್ತು.
Advertisement
ಹೈದರ್ ಅಲಿ, ರೋಹೈಲ್ ನಜೀರ್ ಹಾಗೂ ಮೊಹಮ್ಮದ್ ಹರಿಸ್ ಮಾತ್ರ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಆದರೆ ಎಂಟು ಜನ ಆಟಗಾರರು ಎರಡಂಕಿ ದಾಟಲು ವಿಫರಾದರು. ಈ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಕೇವಲ ಒಂದು ಸಿಕ್ಸ್ ಸಿಡಿಸಿದ್ದರು. 146 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಾಕ್ 26 ರನ್‍ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್‍ಗೆ ಆಲೌಟ್ ಆಗಿತ್ತು.
ಮಿಶ್ರಾ ಕಮಾಲ್:
ಭಾರತದ ಯುವ ಪಡೆಯ ಬೌಲರ್ ಸುಶಾಂತ್ ಮಿಶ್ರಾ 8.1 ಓವರ್ ಬೌಲಿಂಗ್ ಮಾಡಿ 28 ರನ್ ನೀಡಿ, 3 ವಿಕೆಟ್ ಕಿತ್ತು ಮಿಂಚಿದರು. ಕಾರ್ತಿಕ್ ತ್ಯಾಗಿ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ, ಎ.ವಿ.ಅಂಕೋಲೆಕರ್ ಹಾಗೂ ಯಶಸ್ವಿ ಜೈಸ್ವಾಲ್ ತಲಾ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.
ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ನಡುವೆ ಫೆ.6 ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು ಫೆ.9 ರಂದು ಫೈನಲ್ ಪಂದ್ಯ ನಡೆಯಲಿದೆ.
Sri Lanka ✅
Japan ✅
New Zealand ✅
Australia ✅
Pakistan ✅
Way to go, boys!
????????????????India U19 march into the final of the #U19CWC with a ten-wicket win over Pakistan.
Report ???????? https://t.co/ZHIRANrn09#INDvPAK #TeamIndia pic.twitter.com/HGH7yiBYA1
— BCCI (@BCCI) February 4, 2020