ದುಬೈ: ಏಷ್ಯಾದ ಬಲಿಷ್ಠ ತಂಡಗಳ ಏಷ್ಯಾಕಪ್ ಟೂರ್ನಿಯಲ್ಲಿ ಬದ್ಧ ವೈರಿಗಳು ಎನಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು 14 ಬಾರಿ ಮುಖಾಮುಖಿಯಾಗಿದೆ. ಪ್ರತಿಬಾರಿಯ ಹೋರಾಟವೂ ರಣರೋಚಕವಾಗಿ ಕೂಡಿರುತ್ತದೆ. ಪ್ರತಿಷ್ಠೆಯ ಪಂದ್ಯದಲ್ಲಿ ಎರಡು ತಂಡಗಳ ಪೈಕಿ ಯಾರು ಮೇಲುಗೈ ಸಾಧಿಸಿದ್ದಾರೆ ಎಂದು ನೋಡಬೇಕಾದರೆ ಈ ಸ್ಟೋರಿ ಪೂರ್ತಿ ಓದಿ.
Advertisement
ಭಾರತ ಹಾಗೂ ಪಾಕಿಸ್ತಾನ ತಂಡಗಳ ಕಾದಾಟವೆಂದರೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಈ ಎರಡು ತಂಡಗಳು ಕೇವಲ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತಿವೆ. ಹಾಗಾಗಿ ಎರಡು ದೇಶಗಳ ತಂಡದ ಅಭಿಮಾನಿಗಳು ಹೆಚ್ಚು ಅಭಿಮಾನದಿಂದ ಈ ಪಂದ್ಯವನ್ನು ನೋಡುತ್ತಾರೆ. ಇದನ್ನೂ ಓದಿ: ಚಾಹಲ್‍ರನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಲು ಬಂದ ಧನಶ್ರೀ
Advertisement
Advertisement
ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳಿಗೂ ಈ ಹೋರಾಟ ಪ್ರತಿಷ್ಠೆಯ ಹೋರಾಟ. ಟೂರ್ನಿಯಲ್ಲಿ ಕಪ್ ಗೆಲ್ಲದಿದ್ದರೂ, ಈ ಪಂದ್ಯವನ್ನು ಮಾತ್ರ ಎರಡು ತಂಡಗಳು ಗೆಲ್ಲಲೇ ಬೇಕಾದ ಒತ್ತಡದಲ್ಲೇ ಆಡುತ್ತವೆ. ಪ್ರತಿಬಾರಿ ಈ ಎರಡು ತಂಡಗಳ ಹೋರಾಟವೆಂದರೆ, ತುಂಬಾ ಸ್ಟೆಷಲ್. ಇದೀಗ ಮತ್ತೆ ಈ ಎರಡು ತಂಡಗಳ ಹೋರಾಟ ಯುಎಇನಲ್ಲಿ ಕಾಣಸಿಗಲಿದೆ. ಈ ಹೋರಾಟಕ್ಕೂ ಮೊದಲು ಏಷ್ಯಾಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 14 ಬಾರಿ ಮುಖಾಮುಖಿಯಾಗಿದೆ.
Advertisement
ಫಲಿತಾಂಶ ಹೀಗಿದೆ:
1984ರ ಮೊದಲ ಮುಖಾಮುಖಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ 54 ರನ್‍ಗಳ ಅಂತರದ ಗೆಲುವು.
1988ರಲ್ಲಿ 4 ವಿಕೆಟ್‍ಗಳ ಅಂತರದಿಂದ ಪಾಕಿಸ್ತಾನವನ್ನು ಭಾರತ ತಂಡ ಮಣಿಸಿತ್ತು.
1995ರಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ 97 ರನ್‍ಗಳ ಅಂತರದ ಜಯ.
1997ರಲ್ಲಿ ಫಲಿತಾಂಶ ಕಾಣದೆ ಪಂದ್ಯ ರದ್ದುಕೊಂಡಿತ್ತು.
2000ರಲ್ಲಿ 44 ರನ್‍ಗಳ ಅಂತರದಿಂದ ಭಾರತವನ್ನು ಮಣಿಸಿದ ಪಾಕಿಸ್ತಾನ.
2004ರಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ 59 ರನ್‍ಗಳ ಅಂತರದಿಂದ ಗೆಲುವು.
2008ರಲ್ಲಿ ಪಾಕಿಸ್ತಾನ ವಿರುದ್ಧ 6 ವಿಕೆಟ್‍ಗಳ ಅಂತರದ ಜಯ ದಾಖಲಿಸಿದ ಭಾರತ.
2008ರಲ್ಲಿ ಭಾರತವನ್ನು 8 ವಿಕೆಟ್‍ಗಳ ಅಂತರದಿಂದ ಸೋಲಿಸಿದ ಪಾಕಿಸ್ತಾನ.
2010ರಲ್ಲಿ ಪಾಕಿಸ್ತಾನವನ್ನು 3 ವಿಕೆಟ್‍ಗಳ ಅಂತರದಿಂದ ಸೋಲಿಸಿದ ಭಾರತ.
2012ರಲ್ಲಿ ಪಾಕಿಸ್ತಾನ ವಿರುದ್ಧ 6 ವಿಕೆಟ್‍ಗಳ ಅಂತರದಿಂದ ಗೆದ್ದ ಭಾರತ.
2014ರಲ್ಲಿ ಭಾರತವನ್ನು 1 ವಿಕೆಟ್ ಅಂತರದಿಂದ ಸೋಲಿಸಿದ ಪಾಕಿಸ್ತಾನ.
2016ರಲ್ಲಿ ಪಾಕಿಸ್ತಾನವನ್ನು 6 ವಿಕೆಟ್‍ಗಳಿಂದ ಬಗ್ಗುಬಡಿದ ಭಾರತ.
2018ರಲ್ಲಿ ಪಾಕಿಸ್ತಾನವನ್ನು 8 ವಿಕೆಟ್‍ಗಳಿಂದ ಸೋಲಿಸಿದ ಭಾರತ.
2018ರಲ್ಲಿ ಪಾಕಿಸ್ತಾನ ವಿರುದ್ಧ 9 ವಿಕೆಟ್‍ಗಳ ಅಂತರದಿಂದ ಗೆದ್ದು ಬೀಗಿದ ಭಾರತ. ಇದನ್ನೂ ಓದಿ: ರಾಹುಲ್ ದ್ರಾವಿಡ್‍ಗೆ ಕೊರೊನಾ- ಏಷ್ಯಾ ಕಪ್ ಟೂರ್ನಿಯಿಂದ ಹೊರಕ್ಕೆ
ಈ ಮೂಲಕ ಏಷ್ಯಾಕಪ್‍ನ ಒಟ್ಟು 14 ಮುಖಾಮುಖಿಯಲ್ಲಿ 1 ಪಂದ್ಯ ಫಲಿತಾಂಶ ಕಾಣದೆ ರದ್ದಾದರೆ, ಇನ್ನುಳಿದ 13 ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 5 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಭಾರತ ತಂಡ ಪಾಕಿಸ್ತಾನ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ. ಇದೀಗ 15ನೇ ಮುಖಾಮುಖಿಗೆ ವೇದಿಕೆ ಸಜ್ಜಾಗಿದ್ದು, ಆಗಸ್ಟ್ 28 ರಂದು ಭಾರತ Vs ಪಾಕಿಸ್ತಾನ ಪಂದ್ಯಾಟ ನಡೆಯಲಿದೆ.
Live Tv
[brid partner=56869869 player=32851 video=960834 autoplay=true]