ದುಬೈ: ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿ ಆರಂಭವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಭಾರತ – ಪಾಕಿಸ್ತಾನ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಟ್ವಿಟ್ಟರ್ನಲ್ಲೂ ಟ್ರೆಂಡ್ ಅಲೆ ಎದ್ದಿದೆ.
Up close and personal with @imVkohli!
Coming back from a break, Virat Kohli speaks about the introspection, the realisation and his way forward! ????
Full interview coming up on https://t.co/Z3MPyeKtDz ????
Watch this space for more ⌛️ #TeamIndia | #AsiaCup2022 | #AsiaCup pic.twitter.com/fzZS2XH1r1
— BCCI (@BCCI) August 27, 2022
ನಾಳಿನ ಸೂಪರ್ ಸಂಡೇ ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳ ಕ್ರಿಕೆಟ್ ಪ್ರಿಯರು ಕಾದು ಕುಳಿತಿದ್ದಾರೆ. ಗೆಲುವಿಗಾಗಿ ಇತ್ತಂಡಗಳು ಭಾರೀ ಕಸರತ್ತನ್ನೇ ನಡೆಸಿವೆ. ಇದನ್ನೂ ಓದಿ: ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ
ಐಸಿಸಿ ಟ್ರೋಫಿಗಳಲ್ಲಿ ಮಾತ್ರ ಈ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತದೆ. ಹಾಗಾಗಿ ಅಭಿಮಾನಿಗಳಲ್ಲಿ ಈ ಎರಡು ತಂಡಗಳ ಹೋರಾಟ ನೋಡುವುದು ಹಬ್ಬದಂತಿರುತ್ತದೆ. ಇತ್ತಂಡಗಳೂ ಬಲಿಷ್ಠವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ಪಂಟರ್ಗಳನ್ನೇ ಹೊಂದಿರುವುದರಿಂದ ಗೆಲುವಿಗಾಗಿ ಕ್ಷಣ, ಕ್ಷಣವೂ ಹೋರಾಡಬೇಕಾಗಿದೆ. ಇದನ್ನೂ ಓದಿ: ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!
ವಿರಾಟ್ ಮೇಲೆ ಭರವಸೆ: 15ನೇ ಐಪಿಎಲ್ ಆವೃತ್ತಿಯಿಂದಲೂ ತೀವ್ರ ಹಿನ್ನಡೆ ಸಾಧಿಸಿದ್ದ ವಿರಾಟ್ ಕೊಹ್ಲಿ ದೀರ್ಘಕಾಲದ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಿದ್ದಾರೆ. ಅಲ್ಲದೇ ಕೊಹ್ಲಿ ಭರ್ಜರಿ ಬ್ಯಾಟಿಂಗ್ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ವಿರಾಟ್ ಮತ್ತೆ ತಂಡಕ್ಕೆ ರೀ ಎಂಟ್ರಿ ಆಗಿರುವುದು ರೋಹಿತ್ ಪಡೆಗೆ ಬಲ ಬಂದಂತಾಗಿದೆ. ಆದರೆ ಕೊಹ್ಲಿ ದಿಟ್ಟ ಆಟ ಪ್ರದರ್ಶಿಸಿ ತಮ್ಮ ಕಳಪೆ ಲಯದಿಂದ ಹೊರಬರಬೇಕಾದ ಒತ್ತಡದಲ್ಲಿದ್ದಾರೆ.
1984ರಲ್ಲಿ ಆರಂಭವಾಗಿರುವ ಏಷ್ಯಾಕಪ್ನ 14ನೇ ಆವೃತ್ತಿಗಳ ಪೈಕಿ ಭಾರತ 7 ಬಾರಿ ಚಾಂಪಿಯನ್ ಆಗಿದೆ. 2016 ರಿಂದ ಏಷ್ಯಾಕಪ್ಗೆ ಟಿ-20 ರೂಪ ಕೊಡಲಾಗಿದ್ದು, ಈಗ 2ನೇ ಬಾರಿ ಟಿ-20 ಫಾರ್ಮ್ಯಾಟ್ನಲ್ಲಿ ಟೂರ್ನಿ ನಡೆಯುತ್ತಿದೆ. ಇಂದು ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ಸೆಣಸುತ್ತಿವೆ.