ದುಬೈ: 15ನೇ ಆವೃತ್ತಿ ಏಷ್ಯಾಕಪ್‍ಗೆ ದಿನಗಣನೆ ಆರಂಭವಾಗಿದ್ದು, ಏಷ್ಯಾದ 6 ತಂಡಗಳು ಏಷ್ಯಾಕಪ್ ಗೆಲ್ಲಲು ಹೋರಾಟಕ್ಕೆ ಸಿದ್ಧತೆ ಆರಂಭಿಸಿವೆ. ಈ ನಡುವೆ ಏಷ್ಯಾಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟಕ್ಕೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
Advertisement
ಟೂರ್ನಿಯಲ್ಲಿ ಭಾಗವಹಿಸುತ್ತಿರುವ 6 ತಂಡಗಳ ಪೈಕಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟ ಈಗಾಗಲೇ ಕ್ರೇಜ್ ಹುಟ್ಟಿಸಿದ್ದು, ಬದ್ಧವೈರಿಗಳ ರಣರೋಚಕ ಕಾದಾಟಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಐಸಿಸಿ ಟ್ರೋಫಿಗಳಲ್ಲಿ ಮಾತ್ರ ಈ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತದೆ ಹಾಗಾಗಿ ಅಭಿಮಾನಿಗಳಲ್ಲಿ ಈ ಎರಡು ತಂಡಗಳ ಹೋರಾಟ ನೋಡುವುದು ಹಬ್ಬದಂತಿರುತ್ತದೆ. ಎರಡು ದೇಶಗಳು ಕೂಡ ಬಲಿಷ್ಠವಾಗಿದ್ದು, ಬಲಾಢ್ಯ ಆಟಗಾರರ ದಂಡೇ ಇದೆ. ಎರಡು ತಂಡ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಪಂಟರ್‌ಗಳನ್ನು ಹೊಂದಿರುವುದರಿಂದ ಗೆಲುವಿಗಾಗಿ ಕ್ಷಣ, ಕ್ಷಣವು ಹೋರಾಡಬೇಕಾಗಿದೆ. ಇದನ್ನೂ ಓದಿ: ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!
Advertisement
Advertisement
ಈ ಬಾರಿ ಏಷ್ಯಾಕಪ್‍ನಲ್ಲಿ ಲೆಕ್ಕಾಚಾರವೆಲ್ಲ ಸರಿಯಾಗಿ ನಡೆದರೆ ಮುಂದಿನ ಮೂರು ಭಾನುವಾರ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮೈದಾನದಲ್ಲಿ ಮದಗಜಗಳಂತೆ ಹೋರಾಟ ನಡೆಸುವ ಸಾಧ್ಯತೆ ಇದೆ. ಮೊದಲ ಹೋರಾಟವಂತು ಫಿಕ್ಸ್ ಆಗಸ್ಟ್ 28 ಭಾನುವಾರದಂದು ಲೀಗ್‍ನ ಮೊದಲ ಪಂದ್ಯ ನಡೆಯಲಿದೆ. ಆ ಬಳಿಕ ಎರಡು ತಂಡಗಳ ಗೆಲುವಿನ ಲೆಕ್ಕಾಚಾರದ ಮೇಲೆ ಸೂಪರ್-4 ಹಂತಕ್ಕೆ ಈ ಎರಡು ತಂಡಗಳು ಪ್ರವೇಶ ಪಡೆದರೆ, ಸೆಪ್ಟೆಂಬರ್ 4 ಭಾನುವಾರದಂದು ಈ ಎರಡು ತಂಡಗಳು ಮತ್ತೆ ಎದುರು ಬದುರಾಗುತ್ತದೆ. ಅದಾದ ಬಳಿಕ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಟ್ಟರೆ ಸೆಪ್ಟೆಂಬರ್ 11 ಭಾನುವಾರದಂದು ಮತ್ತೆ ಕಾದಾಟ ನಡೆಸಲಿದೆ. ಈ ಮೂರು ಪಂದ್ಯಗಳು ಉಭಯ ತಂಡಗಳ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ. ಇದನ್ನೂ ಓದಿ: ಏಷ್ಯಾಕಪ್‍ನಲ್ಲಿ ಬದ್ಧ ವೈರಿಗಳ ಕಾದಾಟ – 14 ಬಾರಿ ಮುಖಾಮುಖಿ, ಯಾರಿಗೆ ಮೇಲುಗೈ?
Advertisement
ಹಾಗಾಗಿ ಮುಂದಿನ ಮೂರು ಭಾನುವಾರ ಕ್ರಿಕೆಟ್ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಸಲಿದ್ದು, ಎಲ್ಲವೂ ಅಂದುಕೊಂಡಂತೆ ಲೆಕ್ಕಾಚಾರದ ಪ್ರಕಾರ ನಡೆದರೆ ಈ ಬಾರಿಯ ಏಷ್ಯಾಕಪ್‌ನಲ್ಲಿ ಅದ್ಭುತ ಕ್ಷಣಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಈವರೆಗೆ ಉಭಯ ತಂಡಗಳು ಏಷ್ಯಾಕಪ್‍ನಲ್ಲಿ ಒಟ್ಟು 14 ಮುಖಾಮುಖಿಯಾಗಿದೆ. ಇದರಲ್ಲಿ 1 ಪಂದ್ಯ ಫಲಿತಾಂಶ ಕಾಣದೆ ರದ್ದಾದರೆ, ಇನ್ನುಳಿದ 13 ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 5 ಪಂದ್ಯಗಳನ್ನು ಗೆದ್ದುಕೊಂಡಿದೆ.