ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಪಾಕ್ ವಿರುದ್ಧ ಭಾರತ ಸೋತ ಬಳಿಕ ಅಭಿಮಾನಿಗಳ ನಡುವೆ ವಾಕ್ಸಮರವೂ ಜೋರಾಗಿದೆ. ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಪಾಕ್ ಹಾಗೂ ಟೀಂ ಇಂಡಿಯಾ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದ ವಿಡಿಯೋ ಈಗ ವೈರಲ್ ಆಗಿದೆ.
ಫಾದರ್ಸ್ ಡೇಯಂದು ನಡೆದಿದ್ದ ಫೈನಲ್ ಪಂದ್ಯ ಸೋತು ಡ್ರೆಸ್ಸಿಂಗ್ ರೂಂಗೆ ಮರಳುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಪಾಕ್ ಅಭಿಮಾನಿಗಳು ಕೆಣಕಿದ್ದು, ಭಾರತೀಯ ಆಟಗಾರರು ಕೇಳಿಸಿಕೊಳ್ಳುವಂತೆ ಪಾಕ್ ಅಭಿಮಾನಿಯೊಬ್ಬ “ಬಾಪ್ ಕೌನ್ ಹೇ …ಕೌನ್ ಹೇ ಬಾಪ್” ಎಂದು ಟೀಂ ಇಂಡಿಯಾ ಆಟಗಾರರನ್ನು ಕೆಣಕಿದ್ದಾನೆ.
ಈ ವೇಳೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಶಮಿ ಪಾಕ್ ಅಭಿಮಾನಿ ಬಳಿ ಮಾತಿನ ಸಮರಕ್ಕೆ ಮುಂದಾಗಿದ್ದರು. ಆದರೆ ಹಿಂದಿನಿಂದ ಬಂದ ಮಿ. ಕೂಲ್ ಖ್ಯಾತಿಯ ಮಾಜಿ ನಾಯಕ ಧೋನಿ ಶಮಿ ಅವರನ್ನು ತಮ್ಮ ಜೊತೆ ಕರೆದುಕೊಂಡು ಹೋದರು.
ಇದನ್ನೂ ಓದಿ: ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ
https://youtu.be/870P_55zaK0