Connect with us

Cricket

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

Published

on

ಓವಲ್: ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಪಾಕ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ 7 ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರರಾಗಿದ್ದಾರೆ. ಶ್ರೀಲಂಕಾದ ಆಟಗಾರರಾದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ, ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾ ರಿಕ್ಕಿಪಾಟಿಂಗ್ ಇದೂವರೆಗೆ 6 ಫೈನಲ್ ಆಡಿದ್ದರು.

ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ 32 ಎಸೆತಗಳಲ್ಲಿ 53 ರನ್ ಯುವರಾಜ್ ಚಚ್ಚಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. 2000 ನೇ ಇಸ್ವಿಯಲ್ಲಿ 17ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟ ಯುವಿ ಇದೂವರೆಗೆ 301 ಏಕದಿನ ಪಂದ್ಯ, 58 ಟಿ 20 ಪಂದ್ಯಗಳನ್ನು ಆಡಿದ್ದಾರೆ.

ಆ 7  ಫೈನಲ್‍ಗಳು
1. ಐಸಿಸಿ ಚಾಂಪಿಯನ್ಸ್ ಟ್ರೋಫಿ 2000 – ಭಾರತ ವರ್ಸಸ್ ನ್ಯೂಜಿಲೆಂಡ್
2. ಐಸಿಸಿ ಚಾಂಪಿಯನ್ಸ್ ಟ್ರೋಫಿ 2002 – ಭಾರತ ವರ್ಸಸ್ ಶ್ರೀಲಂಕಾ
3. ಐಸಿಸಿ ವಿಶ್ವಕಪ್ ಕ್ರಿಕೆಟ್ 2003 – ಭಾರತ ವರ್ಸಸ್ ಆಸ್ಟ್ರೇಲಿಯಾ
4. ಐಸಿಸಿ ಟಿ20 ವಿಶ್ವಕಪ್ 2007 – ಭಾರತ ವರ್ಸಸ್ ಪಾಕಿಸ್ತಾನ
5. ಐಸಿಸಿ ವಿಶ್ವಕಪ್ ಕ್ರಿಕೆಟ್ 2011- ಭಾರತ ವರ್ಸಸ್ ಶ್ರೀಲಂಕಾ
6. ಐಸಿಸಿ ಟಿ20 ವಿಶ್ವಕಪ್ 2014- ಭಾರತ ವರ್ಸಸ್ ಶ್ರೀಲಂಕಾ
7. ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 – ಭಾರತ ವರ್ಸಸ್ ಪಾಕಿಸ್ತಾನ

https://twitter.com/YuviWorld/status/873960152432607232

Click to comment

Leave a Reply

Your email address will not be published. Required fields are marked *