ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ಗೆದ್ದು ಬೀಗಿರುವ ಟೀಂ ಇಂಡಿಯಾ, ಪಾಕ್ ವಿರುದ್ಧದ ಸೂಪರ್ 4 ಹಂತದ ಹೋರಾಟಕ್ಕೆ ಸಿದ್ಧವಾಗಿದ್ದು, ಗೆಲುವಿನ ವಿಶ್ವಾಸದಲ್ಲಿದೆ.
ಎರಡು ತಂಡಗಳನ್ನ ಗಮನಿಸಿದರೆ ಟೀಂ ಇಂಡಿಯಾ ಗೆಲ್ಲುವ ಫೇವರಿಟ್ ತಂಡವಾಗಿದ್ದು, ಪಾಕ್ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದೆ. ಅಫ್ಘಾನಿಸ್ತಾನದ ವಿರುದ್ಧದ ಗೆಲುವು ಪಾಕ್ ತಂಡಕ್ಕೆ ಆತ್ಮವಿಶ್ವಾಸ ನೀಡಿದ್ದರೂ ಭಾರತದ ವಿರುದ್ಧದ ಹಿಂದಿನ ಪಂದ್ಯದ ಸೋಲು ಒತ್ತಡಕ್ಕೆ ಸಿಲುಕಿಸಿದೆ.
Advertisement
"Every time he has got an opportunity to captain India, he has shown his acumen."
???????? legend Sunil Gavaskar is pleased with @ImRo45's leadership ????https://t.co/yqrpdokso9 pic.twitter.com/U7G41lwyid
— ICC (@ICC) September 23, 2018
Advertisement
ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿ ಆಗುತ್ತಿರುವ ಎರಡು ತಂಡಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದು ಖಚಿವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡವೂ ಸೆ. 28 ರಂದು ನಡೆಯುವ ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದ್ದು, ಟೀಂ ಇಂಡಿಯಾ ಸ್ವಲ್ಪ ಮೈಮರೆತರು ಪಾಕ್ ತಂಡದ ಅದರ ಲಾಭ ಪಡೆಯುತ್ತದೆ.
Advertisement
ದುಬೈ ಅಂತರಾಷ್ಟ್ರಿಯ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆ ಇದ್ದು, ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಮತ್ತೆ ಮೋಡಿ ಮಾಡುವ ವಿಶ್ವಾಸವಿದೆ. ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುತ್ತಿದ್ದರೂ ಕೂಡ ಮಧ್ಯಮ ಕ್ರಮಾಂಕದ ಆಟಗಾರರು ರನ್ ಗಳಿಸಬೇಕಿದೆ. ಈ ಪಂದ್ಯದಲ್ಲಿ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆಯುವ ನಿರೀಕ್ಷೆ ಇದ್ದು, ಹೆಚ್ಚು ಸಮಯ ಬ್ಯಾಟಿಂಗ್ ನಡೆಸಲು ಅವಕಾಶ ಲಭಿಸಿದಂತಾಗುತ್ತದೆ. ಇನ್ನು ಕನ್ನಡಿಗ ಕೆಎಲ್ ರಾಹುಲ್, ಪಾಂಡೆ ಆಡುವ 11 ಬಳಗ ಸ್ಥಾನ ಪಡೆಯುತ್ತರಾ ಎಂದು ಕಾದು ನೋಡಬೇಕಿದೆ.
Advertisement
Road to the #AsiaCup2018 final – can India ???????? continue their winning streak or will Pakistan ???????? hit back in the crucial game?#INDvPAK PREVIEW ????https://t.co/USFgRiyLrb pic.twitter.com/DcspdKUZHx
— ICC (@ICC) September 23, 2018
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‍ನಲ್ಲಿ 7 ಸಾವಿರ ರನ್ ಪೂರೈಸಲು 94 ರನ್ ಮಾತ್ರ ಅಗತ್ಯವಿದೆ. ಇತ್ತ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ ಏಕದಿನದಲ್ಲಿ ಭಾರತದ ಪರ 100 ವಿಕೆಟ್ ಪಡೆದ 12 ಭಾರತೀಯ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ. ಯಜುವೇಂದ್ರ ಚಹಲ್ ಕೂಡ 2 ವಿಕೆಟ್ ಪಡೆದರೆ 50 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.
ಪಾಕ್ ತಂಡದ ಪರ ಶೊಯಿಬ್ ಮಲಿಕ್ ಮಾತ್ರ ರನ್ ಗಳಿಸಿತ್ತು, ಉಳಿದೆಲ್ಲಾ ಬ್ಯಾಟ್ಸ್ ಮನ್‍ಗಳ ಮೇಲೆ ಭರವಸೆ ಕಡಿಮೆಯಾಗಿದೆ. ಬೌಲಿಂಗ್ ವಿಭಾಗದಲ್ಲಿ ಹಸನ್ ಅಲಿ, ಶಾದಾಬ್ ಖಾನ್ ಫಾರ್ಮ್ ಕಳೆದುಕೊಂಡಿದ್ದಾರೆ. ಭಾನುವಾರದ ಪಂದ್ಯದಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Today's the day for #INDvPAK at the #AsiaCup2018! ????????????????
Pakistan will be hoping @FakharZamanLive will be on fire, like he was in the #CT17 final! ???? pic.twitter.com/myD9oizjN9
— ICC (@ICC) September 19, 2018