ಮುಂಬೈ: ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಭಾರತ ವಿರುದ್ಧ 10 ವಿಕೆಟ್‍ಗಳ ದಾಖಲೆಯೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ರನ್‍ವೇಗಕ್ಕೆ ಕಡಿವಾಣ ಹಾಕಿದರೂ ಕೂಡ ನ್ಯೂಜಿಲೆಂಡ್ ತಂಡ ಪ್ರಥಮ ಇನ್ನಿಂಗ್ಸ್‌ನಲ್ಲಿ ಕುಸಿತಕಂಡು ಹಿನ್ನಡೆ ಅನುಭವಿಸಿದೆ.
Advertisement
ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿದ್ದ ಭಾರತ ತಂಡಕ್ಕೆ ಎರಡನೇ ದಿನ ಅಜಾಜ್ ಪಟೇಲ್ ಬೌಲಿಂಗ್‍ನಲ್ಲಿ ಕಾಡಿದರು. ಮೊದಲು ವೃದ್ಧಿಮಾನ್ ಸಹಾ 27 ರನ್ (62 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ಅಜಾಜ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಶ್ವಿನ್ ಕೂಡ ಶೂನ್ಯ ಸುತ್ತಿ ಹೊರನಡೆದರೆ, 120 ರನ್ ಮಾಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಯಾಂಕ್ ಅಗರ್ವಾಲ್ ಭರ್ತಿ 150 ರನ್ (311 ಎಸೆತ, 17 ಬೌಂಡರಿ, 4 ಸಿಕ್ಸ್) ಸಿಡಿಸಿ ಅಜಾಜ್ ಪಟೇಲ್‍ಗೆ ದಿನದ ಮೂರನೇ ಬಳಿಯಾದರು. ಇದನ್ನೂ ಓದಿ: ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್
Advertisement
Advertisement
ನಂತರ ಬಂದ ಅಕ್ಷರ್ ಪಟೇಲ್ 52 ರನ್ (128 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸುದರೊಂದಿಗೆ ಅರ್ಧಶತಕ ಸಿಡಿಸಿ ಔಟ್ ಆದರು. ಜಯಂತ್ ಯಾದವ್ 12 ರನ್ (31 ಎಸೆತ, 2 ಬೌಂಡರಿ) ಮತ್ತು ಮೊಹಮ್ಮದ್ ಸಿರಾಜ್ 4 ರನ್ (1 ಬೌಂಡರಿ) ಬಾರಿಸಿ ಅಜಾಜ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಟೇಲ್ ಎಲ್ಲಾ 10 ವಿಕೆಟ್ ಕಿತ್ತು ಮಿಂಚಿದರು. ಇದನ್ನೂ ಓದಿ: 10 ವಿಕೆಟ್ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್ ಪಟೇಲ್
Advertisement
ಅಶ್ವಿನ್, ಸಿರಾಜ್ ದಾಳಿಗೆ ಕಿವೀಸ್ ಪರದಾಟ
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. ನಾಯಕ ಟಾಮ್ ಲ್ಯಾಥಮ್ 10 ರನ್ (14 ಎಸೆತ, 2 ಬೌಂಡರಿ) ಮತ್ತು ಕೈಲ್ ಜೇಮಿಸನ್ 17 ರನ್ (36 ಎಸೆತ, 2 ಬೌಂಡರಿ) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಒಂದಂಕಿ ಮೊತ್ತ ದಾಟಲಿಲ್ಲ. ವಿಲ್ ಯಂಗ್ 4, ಡೇರಿಲ್ ಮಿಚೆಲ್ 8, ರಾಸ್ ಟೇಲರ್ 1, ಹೆನ್ರಿ ನಿಕೋಲ್ಸ್ 7, ಟಾಮ್ ಬ್ಲಂಡೆಲ್ 8, ಎಚಿನ್ ರವೀಂದ್ರ 4 ರನ್ ಮತ್ತು ಟಿಮ್ ಸೌಥಿ ಹಾಗೂ ವಿಲಿಯಂ ಸೊಮರ್ವಿಲ್ಲೆ ಶೂನ್ಯ ಸುತ್ತಿದರು. ಟೀಮ್ ಇಂಡಿಯಾ ಪರ ಆರ್. ಅಶ್ವಿನ್ 8 ಓವರ್ ಎಸೆದು 8 ರನ್ ನೀಡಿ 4 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 4 ಓವರ್ ಎಸೆದು 19 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಅಕ್ಷರ್ ಪಟೇಲ್ 2 ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದು ನ್ಯೂಜಿಲೆಂಡ್ ಕುಸಿತಕ್ಕೆ ಕಾರಣವಾದರು.
290 ರನ್‍ಗಳ ಮುನ್ನಡೆಯೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಮಯಾಂಕ್ ಅಗರ್ವಾಲ್ ಅಜೇಯ 38 ರನ್ (75 ಎಸೆತ, 6 ಬೌಂಡರಿ) ಮತ್ತು ಚೇತೇಶ್ವರ ಪೂಜಾರ 29 ರನ್ (51 ಎಸೆತ 3 ಬೌಂಡರಿ, 1 ಸಿಕ್ಸ್) ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 2ನೇ ದಿನದಾಟದ ಅಂತ್ಯಕ್ಕೆ 21 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ದಾಖಲಿಸಿದೆ. ಈ ಮೂಲಕ ಒಟ್ಟು 332 ರನ್‍ಗಳ ಮುನ್ನಡೆ ಪಡೆದುಕೊಂಡಿದ್ದು, 3ನೇ ದಿನ ಬೃಹತ್ ಮೊತ್ತ ಪೇರಿಸಿ ನ್ಯೂಜಿಲೆಂಡ್‍ಗೆ ದೊಡ್ಡ ಟಾರ್ಗೆಟ್ ನೀಡುವ ಯೋಜನೆಯಲ್ಲಿದೆ. ಇದನ್ನೂ ಓದಿ: ಆರ್ಸಿಬಿ ಪರ ಮಾತ್ರ ಆಡುತ್ತೇನೆ ಎಂದಿದ್ದ ಚಹಲ್ ಐಪಿಎಲ್ ಭವಿಷ್ಯವೇನು?