– 8ನೇ ಕ್ರಮಾಂಕದಲ್ಲಿ ಮೈನಕ್ಕಿಳಿದು 45 ರನ್ ಚಚ್ಚಿದ ಸೈನಿ
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ನವದೀಪ್ ಸೈನಿ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಸೈನಿ ಸಿಕ್ಸ್ ಸಿಡಿಸಿದ್ದನ್ನು ನೋಡಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಿದಾ ಆಗಿದ್ದಾರೆ.
ಆಕ್ಲೆಂಡ್‍ನ ಈಡನ್ ಪಾರ್ಕ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ನವದೀಪ್ ಸೈನಿ 45 ರನ್ (49 ಎಸೆತ, 5 ಬೌಂಡರಿ, ಸಿಕ್ಸ್) ಗಳಿಸಿದರು. ಬೌಲಿಂಗ್‍ನಲ್ಲೂ ಸೈ ಎನಿಸಿಕೊಂಡಿದ್ದ ಸೈನಿ 10 ಓವರ್ ಬೌಲಿಂಗ್ ಮಾಡಿ ಅವರು 48 ರನ್ ನೀಡಿದ್ದರು. ಈ ಮೂಲಕ ಪಂದ್ಯದಲ್ಲಿ ಅತಿ ಕಡಿಮೆ ರನ್ ನೀಡಿದ ಎರಡನೇ ಬೌಲರ್ ಸೈನಿ ಆಗಿದ್ದಾರೆ. ಇದೇ ವೇಳೆ 10 ಓವರ್ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ 35 ರನ್ ನೀಡಿ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ
Advertisement
https://twitter.com/SMmPMm/status/1226082022038409217
Advertisement
ಟೀಂ ಇಂಡಿಯಾ 7ನೇ ವಿಕೆಟ್‍ಗೆ 153 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮೈದಾನಕ್ಕಿಳಿದ ನವದೀಪ್ ಸೈನಿ ಭಾರತದ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ರವೀಂದ್ರ ಜಡೇಜಾ ಹಾಗೂ ನವದೀಪ್ ಸೈನಿ 8ನೇ ವಿಕೆಟ್‍ಗೆ 80 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಇದನ್ನೂ ಓದಿ: ಅಂಪೈರ್ ವಿರುದ್ಧ ಕೊಹ್ಲಿ ಫುಲ್ ಗರಂ- ವಿಡಿಯೋ
Advertisement
ನವದೀಪ್ ಸೈನಿ ಇನ್ನಿಂಗ್ಸ್ ನ 40ನೇ ಓವರಿನಲ್ಲಿ ಸಿಕ್ಸ್ ಸಿಡಿಸಿ ತಂಡದ ಮೊತ್ತವನ್ನು ಏರಿಸಲು ಯತ್ನಿಸಿದರು. ಅಷ್ಟೇ ಅಲ್ಲದೆ ಇನ್ನಿಂಗ್ಸ್ ನ 44ನೇ ಓವರಿನಲ್ಲಿ ನವದೀಪ್ ಸೈನಿ 3 ಬೌಂಡರಿ ಬಾರಿಸಿದರು. ಬಳಿಕ ಇನ್ನಿಂಗ್ಸ್ 45ನೇ ಓವರಿನಲ್ಲಿ ಸೈನಿ ಮತ್ತೊಂದು ಸಿಕ್ಸ್ ಸಿಡಿಸಿದರು. ಇದನ್ನು ನೋಡಿ ವಿರಾಟ್ ಕೊಹ್ಲಿ ಹುಬ್ಬೇರಿಸಿದರು. ಆದರೆ ನಂತರದ ಎಸೆತದಲ್ಲಿ ಬಾಲ್ ಅನ್ನು ಬೌಂಡರಿಗೆ ಅಟ್ಟಲು ಯತ್ನಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಜಡೇಜಾ ವಿರೋಚಿತ ಆಟಕ್ಕೆ ಸೈನಿ ಸಾಥ್- ಭಾರತಕ್ಕೆ ಸೋಲು, ನ್ಯೂಜಿಲೆಂಡಿಗೆ ಸರಣಿ
Advertisement
ಸೈನಿ ಇದುವರೆಗೂ 4 ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ್ದು, ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದ್ದಾರೆ. ಮೊದಲ ಅವಕಾಶದಲ್ಲೇ ಸಿಕ್ಸರ್, ಬೌಂಡರಿ ಸಿಡಿಸಿ 45 ರನ್ ಗಳಿಸಿ ಸೈನಿ ಮಿಂಚಿದ್ದಾರೆ. ಅವರು 4 ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 5 ವಿಕೆಟ್ ಹಾಗೂ 10 ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ 9 ವಿಕೆಟ್ ಪಡೆದಿದ್ದಾರೆ.