ಹ್ಯಾಮಿಲ್ಟನ್: ಟಿ20 ಸರಣಿ ಸೋಲಿನಿಂದ ಕಂಗೆಟ್ಟಿರುವ ನ್ಯೂಜಿಲೆಂಡ್ ಪಡೆಗೆ ಈಗ ಸೇಡು ತೀರಿಸಿಕೊಳ್ಳುವ ತವಕ. ಚುಟುಕು ಕ್ರಿಕೆಟ್‍ನಲ್ಲಿ ಹೋದ ಮಾನ ಉಳಿಸಿಕೊಳ್ಳಲು ಕಿವೀಸ್ ಏಕದಿನ ಕ್ರಿಕೆಟ್‍ನಲ್ಲಿ ಭಾರತವನ್ನು ಮಣಿಸಲು ರಣತಂತ್ರ ರೂಪಿಸಿದೆ. ಆದರೆ ಸಂಪೂರ್ಣ ಯುವ ಪಡೆಯನ್ನ ಹೊಂದಿರುವ ಟೀಂ ಇಂಡಿಯಾ ಗೆಲುವಿನ ನಾಗಲೋಟವನ್ನು ಮುಂದುವರಿಸಲು ಸನ್ನದ್ಧವಾಗಿದೆ.
ನ್ಯೂಜಿಲೆಂಡ್‍ನ ಹ್ಯಾಮಿಲ್ಟನ್‍ನಲ್ಲಿ ಬುಧವಾರ ಬೆಳಗ್ಗೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಉಭಯ ತಂಡಗಳು ಅಭ್ಯಾಸ ನಡೆಸಿವೆ. ಆದರೆ ಎರಡು ತಂಡಗಳಿಗೂ ಗಾಯಳುಗಳ ಸಮಸ್ಯೆ ಕಾಡುತ್ತಿದೆ. ಟೀಂ ಇಂಡಿಯಾದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಹೊರಗುಳಿದಿದ್ದರೆ ನ್ಯೂಜಿಲೆಂಡ್ ತಂಡದಲ್ಲಿ ನಾಯಕ ಕೇನ್ ವಿಲಿಯಮ್ಸನ್, ವೇಗಿ ಟ್ರೆಂಟ್ ಬೌಲ್ಟ್ ಕಣಕ್ಕಿಳಿಯುತ್ತಿಲ್ಲ. ಗಾಯಾಳುಗಳ ಅನುಪಸ್ಥಿತಿ ತಂಡಗಳಿಗೆ ಕಾಡಲಿದೆ. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್
Advertisement
Advertisement
ರೋಹಿತ್ ಶರ್ಮಾ, ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್, ಪೃಥ್ವಿ ಶಾಗೆ ಚಾನ್ಸ್ ದೊರಕಿದೆ. ಮಯಾಂಕ್, ಪೃಥ್ವಿ ಶಾ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಇಬ್ಬರು ಓಪನಿಂಗ್ ಬ್ಯಾಟ್ಸ್‍ಮನ್ ಆಗಿ ಕಣಕ್ಕಿಳಿಯಲಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ 5ನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನೂ ಓದಿ: ಪಾಕಿಸ್ತಾನ 172/10, ಭಾರತ 176/0- ಯುವಪಡೆಯ ಆಟಕ್ಕೆ ಪಾಕ್ ಔಟ್, ಫೈನಲಿಗೆ ಟೀಂ ಇಂಡಿಯಾ
Advertisement
ನ್ಯೂಜಿಲೆಂಡ್ ವಿರುದ್ಧ ಭಾರತ 3 ಏಕದಿನ ಪಂದ್ಯವನ್ನಾಡಲಿದೆ. ಭಾರತಕ್ಕೆ ಟಿ-20 ಸರಣಿ ಗೆಲುವು ಆತ್ಮವಿಶ್ವಾಸವನ್ನು ಹೆಚ್ಚಿಸಿದರೆ, ನ್ಯೂಜಿಲೆಂಡ್ ಪಡೆಗೆ ಬಿಟ್ಟುಬಿಡದಂತೆ ಕಾಡುತ್ತಿದೆ. ಬುಧವಾರದ ಪಂದ್ಯದಲ್ಲಿ ಗೆದ್ದು ಫಿನಿಕ್ಸ್ ನಂತೆ ಎದ್ದು ಬರಲು ರಣತಂತ್ರ ಹೆಣೆದಿದೆ. ಹ್ಯಾಮಿಲ್ಟನ್ ಪಿಚ್ ಬ್ಯಾಟ್ಸ್‍ಮನ್‍ಗಳಿಗೆ ಹೆಚ್ಚು ಸಹಕಾರಿಯಾಗಲಿದ್ದು, ಭಾರೀ ಜಿದ್ದಾಜಿದ್ದಿಯನ್ನ ನಿರೀಕ್ಷಿಸಬಹುದಾಗಿದೆ. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ
Advertisement
#TeamIndia on playing sans the Hitman & a possible combo ahead of the 1st ODI against New Zealand #NZvIND ???????? pic.twitter.com/hdGVKwVbYz
— BCCI (@BCCI) February 4, 2020