ದುಬೈ: ಬ್ಯಾಟಿಂಗ್‍ನಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಇನ್ನಿಂಗ್ಸ್ ಮತ್ತು ಬೌಲರ್‌ಗಳ ಸಂಘಟಿತ ದಾಳಿಯ ಪರಿಣಾಮ ಹಾಂಕಾಂಗ್ ವಿರುದ್ಧ ಭಾರತ 40 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಏಷ್ಯಾಕಪ್‍ನ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ.
Advertisement
ಭಾರತ ನೀಡಿದ 193 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಹಾಂಕಾಂಗ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಸೋಲೋಪ್ಪಿಕೊಂಡಿತು. 40 ರನ್‌ಗಳ ದೊಡ್ಡ ಮೊತ್ತದ ಗೆಲುವಿನೊಂದಿಗೆ ಭಾರತ ಕೂಟದಲ್ಲಿ ಸತತ ಎರಡನೇ ಜಯ ದಾಖಲಿಸಿತು.
Advertisement
Advertisement
ಬೃಹತ್ ಗುರಿ ಬೆನ್ನಟ್ಟಲು ಹೊರಟ ಹಾಂಕಾಂಗ್‍ಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ಆ ಬಳಿಕ ಬಂದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಬಾಬರ್ ಹಯಾತ್ ಕೆಲಕಾಲ ಭಾರತದ ಬಲಿಷ್ಠ ಬೌಲಿಂಗ್‍ಗೆ ಸವಾಲೆಸೆದರು. ಆದರೆ ಅವರ ಆಟ 41 ರನ್ (35 ಎಸೆತ, 3 ಬೌಂಡರಿ, 2 ಸಿಕ್ಸ್) ಅಂತ್ಯಕಂಡಿತು. ಆ ಬಳಿಕ ಕಿಂಚಿಂತ್ ಶಾ ಹಾಂಕಾಂಗ್ ಗೆಲುವಿಗಾಗಿ ಹೋರಾಡಲು ಮುಂದಾದರು. ಆದರೆ ಇವರಿಗೆ ಇತರ ಬ್ಯಾಟ್ಸ್‌ಮ್ಯಾನ್‌ಗಳು ಸಾಥ್ ನೀಡಲು ವಿಫಲರಾದರು. ಪರಿಣಾಮ ಕಿಂಚಿಂತ್ ಶಾ 30 ರನ್ (28 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆಗುವುದರೊಂದಿಗೆ ಹಾಂಕಾಂಗ್ ಗೆಲುವಿನ ಆಸೆ ಕಮರಿತು.
Advertisement
ಅಂತಿಮವಾಗಿ ಹಾಂಕಾಂಗ್ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 152 ರನ್ ಪೇರಿಸಿ ಸೋಲುಕಂಡಿತು. ಭಾರತ ಪರ ಹರ್ಷದೀಪ್ ಸಿಂಗ್, ಜಡೇಜಾ, ಆವೇಶ್ ಖಾನ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಈ ಮೊದಲು ಟಾಸ್ ಗೆದ್ದ ಹಾಂಕಾಂಗ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿ ಕೈ ಸುಟ್ಟುಕೊಂಡಿತು. ಭಾರತದ ಬ್ಯಾಟ್ಸ್‌ಮ್ಯಾನ್‌ಗಳು ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಆರಂಭಿಕರಾದ ರೋಹಿತ್ ಶರ್ಮಾ 21 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಕೆಎಲ್ ರಾಹುಲ್ 36 ರನ್ (39 ಎಸೆತ, 2 ಸಿಕ್ಸ್) ಸಿಡಿಸಿ ದೊಡ್ಡ ಮೊತ್ತ ಕಲೆಹಾಕುವ ಭರವಸೆ ಮೂಡಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು.
ಕೊಹ್ಲಿ, ಸೂರ್ಯಕುಮಾರ್ ಬ್ಯಾಟಿಂಗ್ ಬಿರುಗಾಳಿ
ಆರಂಭಿಕರು ಔಟ್ ಆದ ಬಳಿಕ ಅಗ್ರಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಆರಂಭದಲ್ಲಿ ನಿಧಾನವಾಗಿ ರನ್ ಕಲೆಹಾಕಿದ ಈ ಜೋಡಿ ಬಳಿಕ ಹಾಂಕಾಂಗ್ ಬೌಲರ್‌ಗಳ ಮೈ ಚಳಿ ಬಿಡಿಸಿದರು.
ಬೌಂಡರಿ, ಸಿಕ್ಸರ್‌ಗಳ ಅಬ್ಬರೊಂದಿಗೆ ಇಬ್ಬರು ತಲಾ ಅರ್ಧಶತಕ ಸಿಡಿಸಿ ಮೂರನೇ ವಿಕೆಟ್‍ಗೆ ಅಜೇಯ 98 ರನ್ (42 ಎಸೆತ) ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ಕಾರಣರಾದರು. ವಿರಾಟ್ ಕೊಹ್ಲಿ ಅಜೇಯ 59 ರನ್ (44 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 68 ರನ್ (26 ಎಸೆತ, 6 ಬೌಂಡರಿ, 6 ಸಿಕ್ಸ್) ಚಚ್ಚಿ ಅಬ್ಬರಿಸಿ ಬೊಬ್ಬಿರಿದರು. ಇದರ ಪರಿಣಾಮವಾಗಿ ನಿಗದಿತ ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 192 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು.