ನವದೆಹಲಿ: ಎಡ್ಜ್ ಬಸ್ಟನ್‍ನಲ್ಲಿ ಇಂದು ಭಾರತ-ಇಂಗ್ಲೆಂಡ್ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಪರಂಗಿಗಳ ನೆಲದಲ್ಲೇ ಯುದ್ಧಕ್ಕೆ ಸಿದ್ಧವಾಗಿರುವ ಕೇಸರಿ ಪಡೆ, ಆಂಗ್ಲರ ಸೋಲಿಸಿ ತಿರಂಗ ಹಾರಿಸಲು ಸಿದ್ಧರಾಗಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಶುರುವಾಗುವ ಮ್ಯಾಚ್‍ನಲ್ಲಿ ಪಿಚ್ ಬ್ಯಾಟಿಂಗ್ ಹೆಚ್ಚು ಅನುಕೂಲಕಾರಿಯಾಗಿದ್ದು, ರನ್‍ಗಳ ಹೊಳೆಯೇ ಹರಿಯಬಹುದು. ಇಲ್ಲಿವರೆಗೂ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ಭಾರತ ಅಜೇಯವಾಗಿದೆ. ಆದರೆ ಕ್ರಿಕೆಟ್ ಮಹಾಕದನದಿಂದ ಹೊರಬೀಳುವ ಭೀತಿಯಲ್ಲಿರುವ ಇಂಗ್ಲೆಂಡ್ ಇಂದಿನ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.
Advertisement
Advertisement
ಟೂರ್ನಿ ಆರಂಭದಲ್ಲಿ ಅಬ್ಬರಿಸಿದ್ದ ಆಂಗ್ಲರು, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಮ್ಯಾಚ್‍ಗಳನ್ನು ಸೋತು ಹೈರಾಣರಾಗಿದ್ದಾರೆ. ಇತ್ತ ಪಾಕಿಸ್ತಾನಕ್ಕೆ ಸೆಮಿಫೈನಲ್ ಆಸೆ ಜೀವಂತವಾಗಿರಬೇಕಾದರೆ ಇಂಗ್ಲೆಂಡ್ ಸೋಲಬೇಕಿದೆ. ಹೀಗಾಗಿ ನೆರೆವೈರಿ ಪಾಕಿಸ್ತಾನದಲ್ಲೂ ಭಾರತದ ಗೆಲುವಿಗಾಗಿ ಪ್ರಾರ್ಥನೆ ನಡೆಯುತ್ತಿದೆ.
Advertisement
ಸಂಕಷ್ಟದ ಸ್ಥಿತಿಯಲ್ಲೇ ಇಂಗ್ಲೆಂಡ್‍ಗೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಮೊಣಕೈ ನೋವಿನಿಂದ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಜಸನ್ ರಾಯ್ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಬೌಲರ್ ಜೋಫ್ರಾ ಆರ್ಚರ್ ಆಡುವುದು ಅನುಮಾನವಾಗಿದೆ. ಎಡ್ಜ್ ಬಸ್ಟನ್ ನಲ್ಲಿ ಇದೂವರೆಗೆ ನಡೆದ ಐದು ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡಗಳೇ ಗೆದ್ದಿವೆ. ಅಲ್ಲದೆ ಇದೂವರೆಗೆ ಆಡಿರುವ ಮ್ಯಾಚ್‍ಗಳಲ್ಲಿ ಭಾರತ ಎದುರಾಳಿ ತಂಡದ 9 ವಿಕೆಟ್ ಕಬಳಿಸಿದೆ. ಹೊಸ ಆರೆಂಜ್ ಜರ್ಸಿಯಲ್ಲಿ ವಿರಾಟ್ ಕೊಹ್ಲಿ ಪಡೆ ಮೈದಾನಕ್ಕಿಳಿಯಲಿದೆ.
Advertisement
ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್‍ನ್ನ 87 ರನ್‍ಗಳಿಂದ ಸೋಲಿಸಿ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ ಕಾಂಗಾರುಗಳು 9 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು. ಖವಜಾ 88, ಅಲೆಕ್ಸ್ ಕೆರೇ 71 ರನ್ ಗಳಿಸಿದ್ದರು. ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್ ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿತ್ತು. 43.4 ಓವರ್‍ಗಳಲ್ಲಿ 157 ರನ್‍ಗೆ ಆಲೌಟಾಗಿ 87 ರನ್‍ಗಳಿಂದ ಸೋಲಿಗೆ ಶರಣಾಗಿತ್ತು. ವಿಲಿಯಮ್‍ಸನ್ 40, ಟೇಲರ್ 30 ರನ್ ಗಳಿಸಿದ್ದು, ಸ್ಟಾರ್ಕ್ 26ಕ್ಕೆ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾಗಿದ್ದಾರೆ.
And warm and sunny welcome here at the Edgbaston Cricket Ground.#TeamIndia pic.twitter.com/nRYLhbq17t
— BCCI (@BCCI) June 29, 2019
ಇತ್ತ ಲೀಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಅಫ್ಘಾನಿಸ್ತಾನ ವಿರುದ್ಧ ಮೂರು ವಿಕೆಟ್‍ಗಳ ರೋಚಕ ಜಯ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ಅಫ್ಘನ್ನರು 9 ವಿಕೆಟ್ ನಷ್ಟಕ್ಕೆ 227 ರನ್‍ಗಳನ್ನ ಗಳಿಸಿದ್ದರು. ರಹಮತ್ ಶಾ 35, ಅಸ್ಗರ್ ಅಫ್ಘನ್ 42, ನಬೀವುಲ್ಲಾ 42 ರನ್ ಗಳಿಸಿದ್ದರು. ಗುರಿ ಬೆನ್ನತ್ತಿದ್ದ ಪಾಕಿಸ್ತಾನ 2 ಎಸೆತ ಬಾಕಿ ಇರುವಂತೆ 7 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು. ಇಮಾಮ್ ಉಲ್ ಹಕ್ 36, ಬಾಬರ್ ಅಜಂ 45, ಇಮಾದ್ ವಾಸೀಂ 49 ರನ್ ಗಳಿಸಿದ್ದರು. ಈ ಜಯದೊಂದಿಗೆ ಸೆಮಿಫೈನಲ್‍ಗೇರುವ ಪಾಕಿಸ್ತಾನದ ಆಸೆ ಜೀವಂತವಾಗಿ ಉಳಿದಿದೆ.
Presenting #TeamIndia's Away Jersey ???????????????????????? What do you make of this one guys? #TeamIndia #CWC19 pic.twitter.com/TXLuWhD48Q
— BCCI (@BCCI) June 28, 2019
ಇತಿಹಾಸದಲ್ಲಿ ಸಮಬಲದ ಹೋರಾಟ:
ವಿಶ್ವಕಪ್ ಇತಿಹಾಸದ ಪುಟಗಳನ್ನ ಒಮ್ಮೆ ಮೆಲುಕು ಹಾಕಿದರೆ ಇಂಡೋ-ಇಂಗ್ಲೆಂಡ್ 7 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಲಾ ಮೂರು ಪಂದ್ಯಗಳನ್ನ ಗೆದ್ದಿದ್ದು, ಒಂದು ಡ್ರಾನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ಇಂದಿನ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.
#TeamIndia for @ICC #CWC19 ????????#MenInBlue ???? pic.twitter.com/rsz44vHpge
— BCCI (@BCCI) April 15, 2019