ಮುಂಬೈ: ಬಹು ನಿರೀಕ್ಷಿತ ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಟೂರ್ನಿಯಲ್ಲಿ ಗಾಯಗೊಂಡು ಅಲಭ್ಯರಾದ ವೇಗಿ ಜಸ್‍ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ಸ್ಥಾನಕ್ಕೆ ಬಿಸಿಸಿಐ ಬದಲಿ ಆಟಗಾರನ್ನು ಆಯ್ಕೆ ಮಾಡಿದೆ.
ವೇಗಿ ಬುಮ್ರಾ ಅವರ ಸ್ಥಾನದಲ್ಲಿ ಟಿ20 ಸರಣಿಗೆ ದೀಪಕ್ ಚಾಹರ್ ಸ್ಥಾನ ಪಡೆದಿದ್ದು, ಇದೇ ವೇಳೆ ವಾಷಿಂಗ್ಟನ್ ಸುಂದರ್ ಸ್ಥಾನದಲ್ಲಿ ಟಿ20 ಪಂದ್ಯಗಳಿಗೆ ಕೃನಾಲ್ ಪಾಂಡ್ಯ, ಏಕದಿನ ಪಂದ್ಯಗಳಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ.
Advertisement
NEWS: @krunalpandya24 named as a replacement for injured Washington Sundar in India’s T20I side & @akshar2026 in the ODI side.
Deepak Chahar named as a replacement for Jasprit Bumrah in T20I side.
More details here – https://t.co/HGq0BkZslB #ENGvIND pic.twitter.com/SeKMRvqWaE
— BCCI (@BCCI) July 1, 2018
Advertisement
ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಫೀಲ್ಡಿಂಗ್ ವೇಳೆ ಬುಮ್ರಾ ಬಲಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಇದರಿಂದ ಅವರು ಇಂಗ್ಲೆಂಡ್ ಟೂರ್ನಿಯ ಮೂರು ಪಂದ್ಯಗಳ ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇನ್ನು ಸುಂದರ್ ಬಲ ಮೊಣಕಾಲಿಗೆ ಗಾಯವಾಗಿದ್ದು, ಐರ್ಲೆಂಡ್ ವಿರುದ್ಧದ 2ನೇ ಪಂದ್ಯಕ್ಕೂ ಮುನ್ನ ನಡೆದ ತರಬೇತಿ ಫುಟ್ಬಾಲ್ ಪಂದ್ಯದ ವೇಳೆ ಗಾಯಗೊಂಡಿದ್ದರು.
Advertisement
ಸದ್ಯ ಬುಮ್ರಾ ಐಸಿಸಿ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದು, ಟೀಂ ಇಂಡಿಯಾ ಪರ ಯಜುವೇಂದ್ರ ಚಹಲ್, ಬುಮ್ರಾ ಮಾತ್ರ ಮೊದಲ 10 ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಇನ್ನು ಜುಲೈ 3 ರಂದು ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ನಡೆಯಲಿದ್ದು, ಜುಲೈ 12 ರಂದು ಏಕದಿನ ಪಂದ್ಯ ನಡೆಯಲಿದೆ. ಉಳಿದಂತೆ ಟಿ20, ಏಕದಿನ ಟೂರ್ನಿ ಬಳಿಕ ಆಗಸ್ಟ್ 1 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.