ಓವೆಲ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಭಾರತ ತಂಡ 157 ರನ್‍ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.
Advertisement
ಭಾರತ ತಂಡ ನೀಡಿದ್ದ 368ರನ್‍ಗಳ ಟಾರ್ಗೆಟ್‍ನ್ನು ಚೇಸ್ ಮಾಡಲು ಹೊರಟ, ಇಂಗ್ಲೆಂಡ್ ತಂಡ 210ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಅನುಭವಿಸಿತು. ಇದನ್ನೂ ಓದಿ: ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್
Advertisement
If Lord’s was special, today’s win at The Oval is spectacular. #TeamIndia thrives on challenges and loves to overcome them. Congratulations to the entire group for an incredible performance. @Jaspritbumrah93’s journey to 100 Test wickets has been phenomenal #ENGvIND
— Jay Shah (@JayShah) September 6, 2021
Advertisement
ಇಂಗ್ಲೆಂಡ್ ಪರ ರೋರಿ ಬರ್ನ್ಸ್ ಮತ್ತು ಹಸೀದ್ ಹಮೀದ್ ಮೊದಲ ವಿಕೆಟಿಗೆ 246 ಎಸೆತಗಳಲ್ಲಿ 100 ರನ್ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ರೋರಿ ಬರ್ನ್ಸ್ 50ರನ್(125 ಎಸೆತ, 4 ಬೌಂಡರಿ) ಮತ್ತು ಹಸೀದ್ ಹಮೀದ್ 63ರನ್(193 ಎಸೆತ, 6 ಬೌಂಡರಿ) ಬಾರಿಸಿದ್ದನ್ನು ಹೊರತು ಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮ್ಯಾನ್ ಗಳು ಇಂಗ್ಲೆಂಡ್ ಗೆಲುವಿಗೆ ಹೋರಾಡಲಿಲ್ಲ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಂಪಿಕ್ಸ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶೇಷ: ಮೋದಿ
Advertisement
ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು ಕೂಡ 36ರನ್(78 ಎಸೆತ, 3 ಬೌಂಡರಿ) ವೇಳೆ ಶಾರ್ದೂಲ್ ಠಾಕೂರ್ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ ಬಂದ ಬ್ಯಾಟ್ಸ್‌ಮ್ಯಾನ್ ಗಳು ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಓವರ್ ಗಳಲ್ಲಿ ಸರ್ವಪತನ ಕಂಡಿತು. ಇದನ್ನೂ ಓದಿ : ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್
ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಬೌಲಿಂಗ್ ಪಡೆ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಬುಮ್ರಾ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಿತ್ತರು.
ಭಾರತ ಮೊದಲ ಇನ್ನಿಂಗ್ಸ್ – 191/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ – 290/10
ಭಾರತ ಎರಡನೇ ಇನ್ನಿಂಗ್ಸ್ – 466/10
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ -210/10