CricketLatestMain PostSports

 ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್

ಓವಲ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಭಾರತದ ಪರ ವಿಶೇಷ ಸಾಧನೆ ನಿರ್ಮಿಸಿದ್ದಾರೆ.

31 ಎಸೆತದಲ್ಲಿ ಸಿಕ್ಸರ್ ಸಿಡಿಸಿ ಅರ್ಧಶತಕ ಹೊಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಎರಡನೇ ವೇಗದ ಅರ್ಧಶತಕ ಹೊಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಶಾರ್ದೂಲ್ ಠಾಕೂರ್ ಪಾತ್ರವಾದರು. ಭಾರತದ ಪರ ವೇಗದ ಅರ್ಧಶತಕ ಹೊಡೆದ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿದೆ. ಕಪಿಲ್ ದೇವ್ 30 ಎಸೆತದಲ್ಲಿ ಈ ಸಾಧನೆ ಮಾಡಿದ್ದಾರೆ.

ಟಿ20 ಪಂದ್ಯದಂತೆ ಬ್ಯಾಟ್ ಬೀಸಿದ ಶಾರ್ದೂಲ್ ಠಾಕೂರ್ 57 ರನ್(36 ಎಸೆತ, 7 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ಭಾರತ ಮೊದಲ ನ್ನಿಂಗ್ಸ್ ನಲ್ಲಿ 191 ರನ್‍ಗಳಿಗೆ ಆಲೌಟ್ ಆಗಿದ್ದರೆ ಇಂಗ್ಲೆಂಡ್ 53 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಇದನ್ನೂ ಓದಿ : ವಿರಾಟ್ ಕೊಹ್ಲಿ ನೂತನ ದಾಖಲೆ

ಭಾರತದ ಪರ ನಾಯಕ ವಿರಾಟ್ ಕೊಹ್ಲಿ 50 ರನ್(96 ಎಸೆತ, 8 ಬೌಂಡರಿ) ಹೊಡೆದು ಔಟಾದರು. ಇಂಗ್ಲೆಂಡ್ ಪರ ಜೋ ರೂಟ್ 21 ರನ್ ಹೊಡೆದು ಔಟಾದರೆ ಡೇವಿಡ್ ಮಲಾನ್ ಔಟಾಗದೇ 26 ರನ್ ಗಳಿಸಿದ್ದಾರೆ.  ಇದನ್ನೂ ಓದಿ : ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

ಕ್ರೀಸ್ ವೋಕ್ಸ್ 4, ಒಲಿ ರಾಬಿನ್ಸನ್ 3, ಜೇಮ್ಸ್ ಅಂಡರ್ ಸನ್, ಕ್ರೇಗ್ ಓವರ್ಟನ್ ತಲಾ ಒಂದು ವಿಕೆಟ್ ಪಡೆದರೆ, ಟೀಂ ಇಂಡಿಯಾ ಪರ ಬುಮ್ರಾ 2, ಉಮೇಶ್ ಯಾದವ್ 1 ವಿಕೆಟ್ ಪಡೆದ್ದಾರೆ. ಮೊದಲ ದಿನವೇ 13 ವಿಕೆಟ್ ಪತನಗೊಂಡಿದ್ದು ಈ ಪಂದ್ಯ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

Back to top button