ರಾಜ್‍ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಶತಕದ ನೆರವಿನಿಂದ ಟೀಂ ಇಂಡಿಯಾ (Team India) ಮೂರನೇ ದಿನದಾಟದ ಅಂತ್ಯಕ್ಕೆ 322 ರನ್‍ಗಳ ಮುನ್ನಡೆ ಸಾಧಿಸಿದೆ.
3ನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 19 ರನ್ ಗಳಿಸಿ ಔಟಾದರು. ನಂತರ ಜೈಸ್ವಾಲ್ ಮತ್ತು ಶುಭಮನ್ ಗಿಲ್ (Shubman Gill) ಉತ್ತಮ ಜೊತೆಯಾಟವಾಡಿದರು. ಇದನ್ನೂ ಓದಿ: 112 ರನ್‌ಗಳಿಗೆ 8 ವಿಕೆಟ್ ಉಡೀಸ್; ಸಿರಾಜ್ ಮಿಂಚಿನ ದಾಳಿಗೆ ಆಂಗ್ಲ ಪಡೆ ಕಂಗಾಲು, ಭಾರತಕ್ಕೆ ಮುನ್ನಡೆ
ಜೈಶ್ವಾಲ್ 103 (133 ಬಾಲ್, 5 ಸಿಕ್ಸರ್, 9 ಫೋರ್) ಸಿಡಿಸಿ ಮಿಂಚಿದರು. ಆಟದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿ ಹೊರನಡೆದರು. ರಜತ್ ಪಾಟಿದಾರ್ ಶೂನ್ಯಕ್ಕೆ ಔಟಾದರು. ಶುಭಮನ್ ಗಿಲ್ ಅರ್ಧಶತಕ ಬಾರಿಸಿ (64) ಆಟವಾಡುತ್ತಿದ್ದಾರೆ.
ಭಾರತ: (ಮೊದಲ ಇನ್ನಿಂಗ್ಸ್) 445 ಮತ್ತು 196/2 (ಎರಡನೇ ಇನ್ನಿಂಗ್ಸ್)
ಇಂಗ್ಲೆಂಡ್: 319 (ಮೊದಲ ಇನ್ನಿಂಗ್ಸ್) ಇದನ್ನೂ ಓದಿ: ದಿಢೀರ್ ಮನೆಗೆ ತೆರಳಿದ ಅಶ್ವಿನ್ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ