– ಶುಭಮನ್ ಗಿಲ್ ಅಮೋಘ ಶತಕ
ವಿಶಾಖಪಟ್ಟಣಂ: ಇಂಗ್ಲೆಂಡ್ (India-England 2nd Test) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟರ್ ಶುಭಮನ್ ಗಿಲ್ (Shubman Gill) ಅವರ ಅಮೋಘ ಶತಕದಾಟದೊಂದಿಗೆ ಭಾರತ ತಂಡವು 78.3 ಓವರ್‌ಗೆ 255 ರನ್ ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ಗೆಲುವಿಗೆ 399 ರನ್‌ಗಳ ಗುರಿ ನೀಡಿದೆ.
Advertisement
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತ 255 ರನ್ ಗಳಿಸಿತು. 28/0 ಇರುವಾಗಲೇ ರೋಹಿತ್ ಶರ್ಮಾ (13) ಮತ್ತು ಯಶಸ್ವಿ ಜೈಸ್ವಾಲ್ (17) ಎರಡು ಆರಂಭಿಕ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದಲೂ ಕೊಹ್ಲಿ ಔಟ್?
Advertisement
Advertisement
ಈ ವೇಳೆ ಶುಭಮನ್ ಗಿಲ್ ತಂಡದ ಪರ ಲಯ ಕಾಯ್ದುಕೊಂಡು, 104 ರನ್ (147 ಬಾಲ್, 11 ಫೋರ್, 2 ಸಿಕ್ಸರ್) ಗಳಿಸಿದರು. ಅಕ್ಷರ್ ಪಟೇಲ್ ಕೂಡ 45 ರನ್ ಗಳಿಸಿ ಅರ್ಧಶತಕ ವಂಚಿತರಾದರು.
Advertisement
ಶ್ರೇಯಸ್ ಅಯ್ಯರ್ (29), ರಜತ್ ಪಾಟಿದಾರ್ (9), ಶ್ರೀಕಾಂತ್ ಭರತ್ (6), ರವಿಚಂದ್ರನ್ ಅಶ್ವಿನ್ (29) ರನ್ ಗಳಿಸಿದರು. ಬೌಲರ್‌ಗಳಾದ ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮುಕೇಶ್ ಕುಮಾರ್ ಡಕೌಟ್ ಆದರು. ಇದನ್ನೂ ಓದಿ: ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ
ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ 4 ವಿಕೆಟ್ ಪಡೆದರೆ ರೆಹಾನ್ ಅಹ್ಮದ್ 3 ಮತ್ತು ಜೇಮ್ಸ್ ಆಂಡರ್ಸನ್ 2 ವಿಕೆಟ್ ಪಡೆದರು.