ಹೈದರಾಬಾದ್: ಭಾರತ (Team India) ಇಂಗ್ಲೆಂಡ್ (England) ನಡುವಿನ ಟೆಸ್ಟ್ ಸರಣಿಯ ಮೊದಲ ದಿನದಾಟ ಅಂತ್ಯ ಕಂಡಿದ್ದು, ಟೀಂ ಇಂಡಿಯಾ ಸ್ಪಿನ್ನರ್‌ಗಳ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ. ಪಂದ್ಯದ ಮೊದಲ ದಿನವೇ 64.3 ಓವರ್‍ಗೆ 246 ರನ್‍ಗಳಿಸಿ ಇಂಗ್ಲೆಂಡ್ ಆಲೌಟ್ ಆಗಿದೆ. ನಂತರ ಬ್ಯಾಟ್ ಮಾಡಿದ ಟೀಂ ಇಂಡಿಯಾ 116 ರನ್ ಗಳಿಸಿ ನಾಳೆಗೆ ಪಂದ್ಯವನ್ನು ಕಾಯ್ದಿರಿಸಿದೆ.
ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ 23 ಓವರ್‌ಗೆ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. ಈ ಮೂಲಕ 127 ರನ್‍ಗಳ ಹಿನ್ನಡೆಯಲ್ಲಿದೆ. ಬ್ಯಾಟಿಂಗ್ ಆರಂಭಿಸಿದಾಗ ಆಂಗ್ಲರ ರೀತಿ ಮೊದಲ ಎಸೆತದಿಂದಲೇ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾಗಿ ಕಣಕ್ಕಿಳಿದ ಜೈಸ್ವಾಲ್ 70 ಎಸೆತಗಳಲ್ಲಿ 3 ಸಿಕ್ಸ್ ಮತ್ತು 9 ಬೌಂಡರಿ ಮೂಲಕ 76 ರನ್ ಸಿಡಿಸಿ ನಾಳೆಗೆ ಕಾಯ್ದಿರಿಸಿದ್ದಾರೆ. ಜೈಸ್ವಾಲ್ ಜೊತೆ ಶುಭ್‍ಮನ್ ಗಿಲ್ ಸಹ 14 ರನ್ ಗಳಿಸಿ ಔಟಾಗದೆ ಉಳಿದುಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ 24 ರನ್‍ಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಆಂಗ್ಲ ಪಡೆ – ಮೊದಲ ದಿನದಾಟದಲ್ಲೇ 246 ರನ್‍ಗೆ ಆಲೌಟ್ !
Advertisement
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ಬೌಲರ್‌ಗಳಾದ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಅಬ್ಬರದ ಬೌಲಿಂಗ್ ದಾಳಿಗೆ ತತ್ತರಿಸಿತು. ಇಂಗ್ಲೆಂಡ್ ಪರ ಆರಂಭಿಕರಾಗಿ ಫೀಲ್ಡಿಗಿಳಿದಿದ್ದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅರ್ಧಶತಕದ ಜೊತೆಯಾಟ ನೀಡಿದರು. ಬಳಿಕ 20 ರನ್ ಗಳಿಸಿ ಜ್ಯಾಕ್ ಕ್ರಾಲಿ ಔಟಾದರು. ಇವರ ಬೆನ್ನಲ್ಲೇ ಓಲಿ ಪೋಪ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬೆನ್ ಡಕೆಟ್ 35 ರನ್ ಗಳಿಸಿ ಪೆವೆಲಿಯನ್‍ಗೆ ಮರಳಿದರು.
Advertisement
Advertisement
ಇನ್ನೂ ಇನ್ನಿಂಗ್ಸ್ ಅಂತಿಮ ಹಂತದವರೆಗೂ ನಾಯಕ ಬೆನ್ ಸ್ಟೋಕ್ಸ್ ಏಕಾಂಗಿಯಾಗಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಈ ವೇಳೆ ಸ್ಟೋಕ್ಸ್ 88 ಎಸೆತದಲ್ಲಿ 3 ಸಿಕ್ಸ್ ಮತ್ತು 7 ಬೌಂಡರಿ ಚಚ್ಚುವ ಮೂಲಕ 70 ರನ್ ದಾಖಲಿಸಿದರು. ಉಳಿದ ಆಟಗಾರರಾದ, ಜೋ ರೂಟ್ 29 ರನ್, ಜಾನಿ ಬೈರ್‌ಸ್ಟೋವ್ 37 ರನ್, ಬೆನ್ ಫಾಕ್ಸ್ 4 ರನ್, ರೆಹಾನ್ ಅಹ್ಮದ್ 13 ರನ್, ಟಾಮ್ ಹಾಟ್ರ್ಲೀ 23 ರನ್, ಮಾರ್ಕ್ ವುಡ್ 11 ರನ್ ಗಳಿಸಿದರು. ಇದನ್ನೂ ಓದಿ: IND vs ENG, 1st Test: ಕುಂಬ್ಳೆ-ಹರ್ಭಜನ್ ದಾಖಲೆ ಉಡೀಸ್ ಮಾಡಿದ ಜಡೇಜಾ-ಅಶ್ವಿನ್ ಜೋಡಿ