– 5 ವಿಕೆಟ್ ಕಿತ್ತ ಇಶಾಂತ್
– ಚಹಾ ವಿರಾಮಕ್ಕೂ ಮುನ್ನವೇ ಆಲೌಟ್
ಕೋಲ್ಕತ್ತಾ: ಐತಿಹಾಸಿಕ ಪಿಂಕ್ ಟೆಸ್ಟ್ ಕ್ರಿಕೆಟ್‍ನ ಮೊದಲ ದಿನವೇ ಚಹಾ ವಿರಾಮಕ್ಕೆ ಮೊದಲು ಟೀಂ ಇಂಡಿಯಾ ವೇಗಿಗಳ ಅಬ್ಬರಕ್ಕೆ ಬಾಂಗ್ಲಾದೇಶವು 106 ರನ್‍ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ.
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟಿಗೆ ಇಂದು ಚಾಲನೆ ಸಿಕ್ಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ಕಾಡಿದರು.
Advertisement
Advertisement
ಮಧ್ಯಾಹ್ನ ಭೋಜನ ವಿರಾಮಕ್ಕೂ ಮುನ್ನ ಬಾಂಗ್ಲಾದೇಶವು ಆರು ವಿಕೆಟ್ ನಷ್ಟಕ್ಕೆ 60 ರನ್‍ಗಳಿಸಿತ್ತು. ಈ ಪೈಕಿ ಮೂವರು ಆಟಗಾರರು ಶೂನ್ಯಕ್ಕೆ ಔಟಾಗಿದ್ದರು. ಶಾದ್ಮನ್ ಇಸ್ಲಾಂ 29 ರನ್, ಲಿಟ್ಟಲ್ ದಾಸ್ 24 ರನ್, ನಯೀಮ್ ಹಸನ್ 19 ರನ್ ಸಹಾಯದಿಂದ ಬಾಂಗ್ಲಾ ತಂಡವು ಟೀ ವಿರಾಮಕ್ಕೂ ಮುನ್ನವೇ 30.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 106 ರನ್ ಗಳಿಸಲು ಶಕ್ತವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದ 4 ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿಸಿದ್ದರೆ 8 ಆಟಗಾರರು ಎರಡಂಕಿ ತಲುಪಲು ವಿಫಲರಾದರು. ಇತರೇ ರೂಪದಲ್ಲಿ 14 ರನ್ ಬಂದ ಕಾರಣ ಬಾಂಗ್ಲಾ ನೂರರ ಗಡಿ ದಾಟಿದೆ.
Advertisement
Advertisement
ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಒಟ್ಟು 12 ಓವರ್ ಮಾಡಿ, 4 ಮೆಡನ್ ಮೂಲಕ 5 ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಐದು ವಿಕೆಟ್ ಕಿತ್ತ ಮೊದಲ ಭಾರತೀಯ ಎಂಬ ಹಿರಿಮೆಗೆ ಇಶಾಂತ್ ಶಾರ್ಮಾ ಪಾತ್ರರಾಗಿದ್ದಾರೆ. ಉಳಿದಂತೆ ಉಮೇಶ್ ಯಾದವ್ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2 ವಿಕೆಟ್ ಉರುಳಿಸಿದ್ದಾರೆ.