ಇಂದೋರ್: ಬೌಲರ್‌ಗಳ ಆಕ್ರಮಣಕಾರಿ ಬೌಲಿಂಗ್, ಬ್ಯಾಟ್ಸ್ ಮನ್‍ಗಳ ಉತ್ತಮ ಬ್ಯಾಟಿಂಗ್‍ನಿಂದಾಗಿ ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 130 ರನ್‍ಗಳಿಂದ ಗೆದ್ದುಕೊಂಡಿದೆ. ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯ ಗೆದ್ದು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾ 150 ರನ್ ಗಳಿಗೆ ಆಲೌಟ್ ಆಗಿದ್ದರೆ ಭಾರತ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತ್ತು. 343 ರನ್‍ಗಳ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾ ಎರಡನೇ ಇನ್ನಿಂಗ್ಸ್ ನಲ್ಲಿ 69.2 ಓವರ್ ಗಳಲ್ಲಿ 213 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಮೂರೇ ದಿನಕ್ಕೆ ಮೊದಲ ಟೆಸ್ಟ್ ಫಲಿತಾಂಶದೊಂದಿಗೆ ಅಂತ್ಯ ಕಂಡಿದೆ.
Advertisement
Advertisement
72 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ಬಾಂಗ್ಲಾಗೆ ಮುಷ್ಫಿಕರ್ ರಹೀಮ್, ಲಿಟ್ಟನ್ ದಾಸ್, ಮೆಹ್ದಿ ಹಸನ್ ನೆರವಾದ ಪರಿಣಾಮ 200 ರನ್ ಗಳ ಗಡಿಯನ್ನು ದಾಟಿತು. ಮುಷ್ಫಿಕರ್ ರಹೀಮ್ ಹಾಗೂ ಲಿಟ್ಟನ್ ದಾಸ್ ಜೋಡಿ 6ನೇ ವಿಕೆಟಿಗೆ 68 ರನ್ ಗಳ ಜೊತೆಯಾಟ ನೀಡಿದರೆ ಮುಷ್ಫಿಕರ್ ಮತ್ತು ಮೆಹ್ದಿ ಹಸನ್ 59 ರನ್‍ಗಳ ಜೊತೆಯಾಟವಾಡಿದರು.
Advertisement
Advertisement
ಲಿಟ್ಟನ್ ದಾಸ್ 35 ರನ್, ಮೆಹ್ದಿ ಹಸನ್ 38 ರನ್ ಹೊಡೆದರೆ ಐದನೆಯವರಾಗಿ ಬಂದ ಮುಷ್ಫಿಕರ್ ರಹೀಮ್ 64 ರನ್(150 ಎಸೆತ,7 ಬೌಂಡರಿ) ಹೊಡೆದು ಒಂಭತ್ತನೇಯವರಾಗಿ ಔಟಾದರು.
ಮೊದಲ ಇನ್ನಿಂಗ್ಸ್‍ನಲ್ಲಿ ಮೂರು ವಿಕೆಟ್ ಕಿತ್ತಿದ್ದ ಶಮಿ ಎರಡನೇ ಇನ್ನಿಂಗ್ಸ್ ನಲ್ಲೂ 4 ವಿಕೆಟ್ ಕಿತ್ತರು. ಆರ್ ಅಶ್ವಿನ್ 3 ವಿಕೆಟ್, ಉಮೇಶ್ ಯಾದವ್ 2 ವಿಕೆಟ್ ಪಡೆದರೆ ಇಶಾಂತ್ ಶರ್ಮಾ ಒಂದು ವಿಕೆಟ್ ಕಿತ್ತರು.
ಮೊದಲ ದಿನದಾಟದ ಅಂತ್ಯಕ್ಕೆ 37 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ 2ನೇ ದಿನದಾಟ ಆರಂಭವಾಗುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 186 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅಗರ್ವಾಲ್ 330 ಎಸೆತಗಳಲ್ಲಿ 243 ರನ್(28 ಬೌಂಡರಿ, 8 ಸಿಕ್ಸ್) ಹೊಡೆದು ವಿಕೆಟ್ ಒಪ್ಪಿಸಿದ್ದರು. ಅಜಿಂಕ್ಯ ರಹಾನೆ 86 ರನ್, ಚೇತೇಶ್ವರ ಪೂಜಾರ 54 ರನ್ ಮತ್ತು ರವೀಂದ್ರ ಜಡೇಜಾ ಅಜೇಯ 60 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನವೆಂಬರ್ 22ರಿಂದ ಹೊನಲು ಬೆಳಕಿನ (ಡೇ-ನೈಟ್) ಐತಿಹಾಸಿಕ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
There it is the 8th wicket for #TeamIndia. Shami has his 4th and we are two wickets away from victory ????????#INDvBAN pic.twitter.com/XhJOgXM5r0
— BCCI (@BCCI) November 16, 2019