ಢಾಕಾ: ಆರಂಭಿಕ ಆಟಗಾರ ಜಾಕಿರ್ ಹಸನ್ (Zakir Hasan) ಶತಕದ ಹೊರತಾಗಿಯೂ ಭಾರತ (India) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ (1st Test) ಬಾಂಗ್ಲಾದೇಶಕ್ಕೆ (Bangladesh) ಸೋಲಿನ ಭೀತಿ ಎದುರಾಗಿದೆ.
Advertisement
ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಫಲವಾಗಿ 4ನೇ ದಿನದಾಟದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ಗಳಿಸಿ 241 ರನ್‍ಗಳ ಹಿನ್ನಡೆಯಲ್ಲಿದೆ. ಇತ್ತ ಭಾರತ ಇನ್ನೂ 4 ವಿಕೆಟ್ ಕಬಳಿಸಿ ಗೆಲುವಿನ ಸಂಭ್ರಮ ಆಚರಿಸಲು ಸಜ್ಜಾಗಿದೆ. ಇದನ್ನೂ ಓದಿ: ಕೇವಲ 15 ರನ್‌ಗಳಿಗೆ ಆಲೌಟ್- ಟಿ20ಯಲ್ಲೇ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್
Advertisement
Advertisement
4ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ರನ್ ಬಾರಿಸಿದ್ದು, ನಾಯಕ ಶಕೀಬ್ ಅಲ್ ಹಸನ್ ಅಜೇಯ 40 ರನ್ (69 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಮೆಹಿದಿ ಹಸನ್ ಮಿರಾಜ್ 9 ರನ್ ಸಿಡಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬಾಂಗ್ಲಾ ಗೆಲುವಿಗೆ 241 ರನ್ ಬೇಕಾಗಿದ್ದು, ಗೆಲುವಿಗಾಗಿ ಹೋರಾಟ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ – ಫೈನಲ್‍ಗೂ ಮುನ್ನ ಫ್ರಾನ್ಸ್ ಆಟಗಾರರಿಗೆ ಕಾಡುತ್ತಿದೆ ವೈರಸ್!
Advertisement
ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದ್ದ ಬಾಂಗ್ಲಾ ನಾಲ್ಕನೇ ದಿನದಾಟದಲ್ಲೂ ದಿಟ್ಟ ಹೋರಾಟದ ಮುನ್ಸೂಚನೆ ನೀಡಿತು. ಆರಂಭಿಕರಾದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಜಾಕಿರ್ ಹಸನ್ ಭಾರತ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅಲ್ಲದೇ ಈ ಜೋಡಿ ತಲಾ ಅರ್ಧಶತಕ ಸಿಡಿಸಿ ಮಿಂಚಿತು.
ಟೀ ವಿರಾಮದ ವರೆಗೂ ವಿಕೆಟ್ ನಷ್ಟವಿಲ್ಲದೆ ಮುನ್ನಗ್ಗುತ್ತಿದ್ದ ಬಾಂಗ್ಲಾಗೆ ಬಳಿಕ ಉಮೇಶ್ ಯಾದವ್ ಶಾಕ್ ನೀಡಿದರು. ಉತ್ತಮವಾಗಿ ಆಡುತ್ತಿದ್ದ ನಜ್ಮುಲ್ ಹೊಸೈನ್ ಶಾಂತೋ 67 ರನ್ (156 ಎಸೆತ, 7 ಬೌಂಡರಿ) ಬಾರಿಸಿ ವಿಕೆಟ್ ಕೈಜೆಲ್ಲಿಕೊಂಡರು. ಈ ಮೊದಲು ಜಾಕಿರ್ ಹಸನ್ ಜೊತೆ ಮೊದಲ ವಿಕೆಟ್‍ಗೆ 67 ರನ್ (156 ಎಸೆತ) ಜೊತೆಯಾಟವಾಡಿ ಬೇರ್ಪಟ್ಟರು.
ಬಳಿಕ ಬಂದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಬಾಂಗ್ಲಾ ಪರ ಹೋರಾಟದ ಮನೋಭಾವ ತೋರಲಿಲ್ಲ. ಆದರೆ ಇನ್ನೊಂದೆಡೆ ಜಾಕಿರ್ ಹಸನ್ ಮಾತ್ರ ಭರ್ಜರಿಯಾಗಿ ಬ್ಯಾಟ್ಸ್ ಬೀಸಿದರು. ಪರಿಣಾಮ ತನ್ನ ಡೆಬ್ಯೂ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಸಂಭ್ರಮಿಸಿದರು.
ಜಾಕಿರ್ ಚೊಚ್ಚಲ ಶತಕ:
ಜಾಕಿರ ಡೆಬ್ಯೂ ಟೆಸ್ಟ್ ಪಂದ್ಯವಾಡುತ್ತಿದ್ದು ಮೊದಲ ಪಂದ್ಯದಲ್ಲೇ 100 ರನ್ (224 ಎಸೆತ, 13 ಬೌಂಡರಿ, 1 ಸಿಕ್ಸ್) ಸಿಡಿಸಿ ಶತಕ ಸಿಡಿಸಿದ ಸಂಭ್ರಮದ ನಡುವೆಯೇ ಮರು ಎಸೆತದಲ್ಲೇ ವಿಕೆಟ್ ಕಳೆದುಕೊಂಡರು. ಬಳಿಕ ಬಾಂಗ್ಲಾ ಬ್ಯಾಟ್ಸ್‌ಮ್ಯಾನ್‌ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು.
ಹರ್ಷಲ್ ಪಟೇಲ್ ವಿಕೆಟ್ ಬೇಟೆ:
ಕೆಲ ಕ್ರಮಾಂಕದಲ್ಲಿ ಮುಶ್ಫಿಕರ್ ರಹೀಮ್ 23 ರನ್ (50 ಎಸೆತ, 2 ಬೌಂಡರಿ) ಸಿಡಿಸಿ ಪ್ರತಿರೋಧ ಒಡ್ಡಿ ಹರ್ಷಲ್ ಪಟೇಲ್‍ಗೆ ಬಲಿಯಾದರು. ಭಾರತ ಪರ ಹರ್ಷಲ್ ಪಟೇಲ್ 3 ವಿಕೆಟ್ ಕಿತ್ತರೆ, ಉಮೇಶ್ ಯಾದವ್, ಅಶ್ವಿನ್, ಕುಲ್‍ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. 5ನೇ ದಿನದಾಟ ಕುತೂಹಲ ಮೂಡಿಸಿದೆ.