ಢಾಕಾ: ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲೂ ಭಾರತ ಮೇಲುಗೈ ಸಾಧಿಸಿದೆ. ಭಾರತ ಪರ ಶುಭಮನ್ ಗಿಲ್ ಚೊಚ್ಚಲ ಶತಕ ಸಿಡಿಸಿದರೆ, ಚೇತೇಶ್ವರ ಪೂಜಾರ ತಮ್ಮ ಟೆಸ್ಟ್ ವೃತ್ತಿಜೀವನದ ವೇಗದ ಶತಕ ಸಿಡಿಸಿ ಭಾರತಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ.
Advertisement
ಬಾಂಗ್ಲಾ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲೂ ಭಾರತದ ಬ್ಯಾಟ್ಸ್‌ಮ್ಯಾನ್ ತಮ್ಮ ಉತ್ತಮ ಲಯ ಮುಂದುವರಿಸಿದರು. ಭಾರತ ಪರ ಶುಭಮನ್ ಗಿಲ್ 110 ರನ್ (152 ಎಸೆತ, 10 ಬೌಂಡರಿ, 3 ಸಿಕ್ಸ್) ಚಚ್ಚಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಇನ್ನೊಂದೆಡೆ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲಿ 102 ರನ್ (130 ಎಸೆತ, 13 ಬೌಂಡರಿ) ಬಾರಿಸಿ ಶತಕ ಪೂರೈಸಿಕೊಂಡರು. ಇದು ಪೂಜಾರ ಅವರ ಟೆಸ್ಟ್ ವೃತ್ತಿ ಜೀವನದ ವೇಗದ ಶತಕವಾಗಿದೆ. ಪೂಜಾರ ಶತಕ ಸಿಡಿಸುತ್ತಿದ್ದಂತೆ 61.4 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 258 ರನ್ ಬಾರಿಸಿದ್ದಾಗ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದನ್ನೂ ಓದಿ: ಕಿವೀಸ್ ಟೆಸ್ಟ್ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ಗುಡ್‌ಬೈ
Advertisement
Advertisement
ಭಾರತ ನೀಡಿದ 513 ರನ್‍ಗಳ ಬೃಹತ್ ಟಾರ್ಗೆಟ್‍ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಸಿಡಿಸಿದೆ. ಇನ್ನೆರಡು ದಿನ ಬಾಕಿ ಉಳಿದಿದ್ದು, ಬಾಂಗ್ಲಾ ಗೆಲುವಿಗೆ 471 ರನ್ ಬೇಕಾಗಿದೆ. ಭಾರತದ ಗೆಲುವಿಗೆ 10 ವಿಕೆಟ್ ಉದುರಿಸಬೇಕಾಗಿದೆ. ಇನ್ನೆರಡು ದಿನ ಬಾಕಿ ಉಳಿದಿರುವುದರಿಂದ ಸ್ಪಷ್ಟ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: ಕುಲ್‍ದೀಪ್ ಯಾದವ್ ಆಲ್‍ರೌಂಡರ್ ಆಟ – ಭಾರತದ ಬಿಗಿ ಹಿಡಿತದಲ್ಲಿ ಬಾಂಗ್ಲಾ ಒದ್ದಾಟ
Advertisement
2ನೇ ದಿನದಾಟದ ಅಂತ್ಯಕ್ಕೆ 44 ಓವರ್‌ಗಳಲ್ಲಿ ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿತ್ತು. ಮೂರನೇ ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾ ನಿನ್ನೆಯ ಮೊತ್ತಕ್ಕೆ ಕೇವಲ 17 ರನ್ ಒಟ್ಟುಗೂಡಿಸಿ 55.5 ಓವರ್‌ಗಳ ಅಂತ್ಯಕ್ಕೆ 150 ರನ್‍ಗಳಿಗೆ ಆಲೌಟ್ ಆಯಿತು.