ಅಹಮದಾಬಾದ್: ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ (World Cup Cricket) ಆಸ್ಟ್ರೇಲಿಯಾದ (Australia) ಸ್ಟಿವ್ ಸ್ಮಿತ್ (Steve Smith) ಡಿಆರ್‌ಎಸ್ ತೆಗೆದುಕೊಳ್ಳದೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ನಡೆದಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಬುಮ್ರಾ (Jasprit Bumrah) ಎಸೆದ 7ನೇ ಓವರ್‌ನ ಕೊನೆಯ ಎಸೆತ ಪಿಚ್‌ಗೆ ಬಿದ್ದು ಸ್ಮಿತ್ ಪ್ಯಾಡ್‌ಗೆ ಬಡಿಯಿತು. ಬುಮ್ರಾ ವಿಶ್ವಾಸದಿಂದ ಎಲ್‌ಬಿಡಬ್ಲ್ಯೂಗೆ (LBW) ಮನವಿ ಮಾಡಿದ್ದು ಅಂಪೈರ್ ಔಟ್ ತೀರ್ಪು ನೀಡಿದರು.
Advertisement
Advertisement
ಈ ವೇಳೆ ಸ್ಮಿತ್ ನಾನ್ ಸ್ಟ್ರೈಕ್‌ನಲ್ಲಿದ್ದ ಟ್ರಾವಿಸ್ ಹೆಡ್ ಬಳಿ ಡಿಆರ್‌ಎಸ್ (DRS) ಕೇಳಬೇಕಾ? ಬೇಡವಾ ಎಂಬುದರ ಬಗ್ಗೆ ಚರ್ಚೆ ನಡೆಸಿದರು. ಇದಕ್ಕೆ ಹೆಡ್ ಬೇಡ ಎಂಬರ್ಥದ ಸಿಗ್ನಲ್ ನೀಡಿದರು. ಹೆಡ್ ಕಡೆಯಿಂದ ಬೇಡ ಎಂಬ ಸಂದೇಶ ಬಂದ ಕೂಡಲೇ ಸ್ಮಿತ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
Advertisement
ನಂತರ ರಿಪ್ಲೇ ನೋಡಿದಾಗ ಪಿಚ್ಚಿಂಗ್ ಔಟ್‌ಸೈಡ್ ಆಫ್ ಆಗಿದ್ದರೆ ಇಂಪ್ಯಾಕ್ಟ್ ಔಟ್‌ಸೈಡ್ ಇತ್ತು. ಒಂದು ವೇಳೆ ಡಿಆರ್‌ಎಸ್ ತೆಗೆದುಕೊಂಡಿದ್ದರೆ ಸ್ಮಿತ್ ಔಟಾಗುತ್ತಿರಲಿಲ್ಲ.
Advertisement
ಸ್ಮಿತ್ 9 ಎಸೆತ ಎದುರಿಸಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಡೇವಿಡ್ ವಾರ್ನರ್ 7 ರನ್, ಮಿಷೆಲ್ ಮಾರ್ಶ್ 15 ರನ್‌ಗಳಿಸಿ ಔಟಾಗಿದ್ದಾರೆ.