ನಾಗ್ಪುರ: ಭಾರತ, ಆಸ್ಟ್ರೇಲಿಯಾ (Australia) ವಿರುದ್ಧದ 2ನೇ ಟಿ20 (T20 Match) ಪಂದ್ಯದಲ್ಲಿ ಹಿಟ್‌ಮ್ಯಾನ್ ಬ್ಯಾಟಿಂಗ್ ಅಬ್ಬರದಿಂದ ಭಾರತ ತಂಡ 1-1 ಅಂತರದಲ್ಲಿ ಗೆದ್ದು, ಸರಣಿಯನ್ನು ಸಮಬಲಗೊಳಿಸಿತು. ಆದರೆ ಪಂದ್ಯ ಗೆದ್ದ ನಂತರವೂ ರೋಹಿತ್ ಶರ್ಮಾ (Rohit Sharma) ತಮ್ಮ ಸ್ಫೋಟಕ ಬ್ಯಾಟಿಂಗ್ ಬಗ್ಗೆಯೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Advertisement
ಮಳೆಯ (Rain) ಕಾರಣದಿಂದಾಗಿ 8 ಓವರ್‌ಗೆ ಇಳಿಕೆ ಕಂಡಿದ್ದ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿಸದ ಆಸ್ಟ್ರೇಲಿಯಾ (Australia) 5 ವಿಕೆಟ್ ನಷ್ಟಕ್ಕೆ 90 ರನ್‌ಗಳನ್ನು ಗಳಿಸಿತು. ಈ ರನ್‌ಗಳ ಗುರಿ ಬೆನ್ನತ್ತಿದ ಭಾರತ 7.2 ಓವರ್‌ಗಳಲ್ಲೇ 4 ವಿಕೆಟ್‌ಗಳ ನಷ್ಟಕ್ಕೆ 92 ರನ್‌ಗಳಿಸಿ ಗೆದ್ದು ಬೀಗಿತು. ಇದನ್ನೂ ಓದಿ: ರೋಹಿತ್ ನಾಯಕನ ಆಟ – ಭಾರತಕ್ಕೆ ಜಯ, ಸರಣಿ ಸಮಬಲ
Advertisement
Advertisement
ನಾಯಕನ ಆಟವಾಡಿದ ರೋಹಿತ್ ಶರ್ಮಾ ಕೊನೆಯವರೆಗೂ ನಿಂತು ಅಬ್ಬರಿಸಿದರು. ಸಿಕ್ಸ್, ಫೋರ್‌ಗಳ ಮಳೆ ಸುರಿಸಿ, ಆಸಿಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಇದರ ಹೊರತಾಗಿಯೂ ಹಿಟ್‌ಮ್ಯಾನ್ ತಮ್ಮ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ತಾವೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ
Advertisement
ಪಂದ್ಯದ ಬಳಿಕ ಮಾತನಾಡಿದ ರೋಹಿತ್, ನಿಜ ಹೇಳಬೇಕೆಂದರೆ ನನಗೆ ನನ್ನ ಬ್ಯಾಟಿಂಗ್‌ನಿಂದ ಸ್ವಲ್ಪ ಅಚ್ಚರಿಯಾಗಿದೆ. ಈ ರೀತಿಯ ಸ್ಫೋಟಕ ಬ್ಯಾಟ್ ಮಾಡುತ್ತೇನೆಂದು ನನಗೆ ಗೊತ್ತಿರಲಿಲ್ಲ. ಏಕೆಂದರೆ ಕಳೆದ 8 ರಿಂದ 9 ತಿಂಗಳು ನಾನು ಈ ರೀತಿ ಆಡಿರಲಿಲ್ಲ. ಇದು ತೀರಾ ಚುಟುಕು ಪಂದ್ಯವಾಗಿದ್ದರಿಂದ ಇದಕ್ಕೆ ಹೆಚ್ಚಿನ ಯೋಜನೆ ಸಹ ರೂಪಿಸಿರಲಿಲ್ಲ. ನಿನ್ನೆ ನನ್ನ ಬ್ಯಾಟಿಂಗ್ ಕಂಡು ನನಗೇ ಅಚ್ಚರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬೌಲರ್‌ಗಳು ಇನ್ನಷ್ಟು ಎಚ್ಚರ ವಹಿಸಬೇಕು:
ಬೌಲರ್‌ಗಳು ಇನ್ನಷ್ಟು ಎಚ್ಚರಿಕೆಯಿಂದ ಬೌಲಿಂಗ್ (Bowling) ಮಾಡಬೇಕು. ಆದಾಗ್ಯೂ ನಮ್ಮ ಬೌಲರ್‌ಗಳು (Batting) ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಕೊನೆಯಲ್ಲಿ ಇಬ್ಬನಿ ಹೆಚ್ಚಾಗುತ್ತಿತ್ತು. ಈ ಕಾರಣದಿಂದಲೇ ಹರ್ಷಲ್ ಪಟೇಲ್ (Harshal Patel) ಫುಲ್‌ಟಾಸ್ ಎಸೆತಗಳನ್ನು ಹಾಕಿದ್ದರು.
ಹರ್ಷಲ್ ಗಾಯದ ಸಮಸ್ಯೆಯಿಂದ ಗುಣಮುಖನಾಗಿ ಬಂದಿದ್ದಾರೆ, ಆದರೆ ಹಲವು ತಿಂಗಳ ಬಳಿಕ ಕಮ್‌ಬ್ಯಾಕ್ ಮಾಡುವುದು ಸುಲಭವಲ್ಲ. ಆದರೆ ಕೆಲ ನಿರ್ಣಾಯಕ ವಿಕೆಟ್‌ಗಳನ್ನು ನಾವು ಪಡೆದಿದ್ದು ತಂಡದ ಗೆಲುವಿಗೆ ಕಾರಣವಾಗಿದೆ ಎಂದು ಹಿಟ್‌ಮ್ಯಾನ್ (HitMan Rohit Sharma) ಹೇಳಿದ್ದಾರೆ.
ಇನ್ನೂ ಸ್ಪಿನ್ನರ್ ಅಕ್ಷರ್ ಪಟೇಲ್ ಯಾವುದೇ ಸನ್ನಿವೇಶದಲ್ಲೂ ಬೌಲ್ ಮಾಡಬಲ್ಲರು. ವಿಭಿನ್ನ ಪರಿಸ್ಥಿತಿಗಳಿದ್ದರೂ ಇತರೆ ಬೌಲರ್‌ಗಳಿಗಿಂತ ಅವರು ಪರಿಸ್ಥಿತಿಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅಕ್ಷರ್ ಪಟೇಲ್ ಪವರ್ ಪ್ಲೇನಲ್ಲಿ ಬೌಲ್ ಮಾಡಿಸಿದರೆ, ವೇಗಿಗಳನ್ನು ಮಧ್ಯಮ ಓವರ್‌ಗಳಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಅಕ್ಷರ್ ಬೌಲಿಂಗ್ ಜೊತೆಗೆ ಚೆನ್ನಾಗಿ ಬ್ಯಾಟ್ ಮಾಡುವುದನ್ನೂ ನಾನು ನೋಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.