ರಾಂಚಿ: ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಶೇನ್ ಮಾರ್ಷ್ ಅವರ ಉಪಯುಕ್ತ ಆಟದಿಂದಾಗಿ ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
63 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯ ಭಾರತದತ್ತ ವಾಲಿತ್ತು. ಆದರೆ 5 ವಿಕೆಟ್‍ಗೆ ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಶೇನ್ ಮಾರ್ಷ್ 373 ಎಸೆತಗಳಲ್ಲಿ 124 ರನ್ ಜೊತೆಯಾಟವಾಡುವ ಮೂಲಕ ಸೋಲುವ ಭೀತಿಯಿಂದ ತಂಡವನ್ನು ಪಾರು ಮಾಡಿದರು. ಅಂತಿಮವಾಗಿ ಆಸ್ಟ್ರೇಲಿಯಾ 100 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 204 ಗಳಿಸಿತು.
Advertisement
ಭಾನುವಾರ 7.2 ಓವರ್‍ಗಳಲ್ಲಿ 23 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇಂದು 4 ವಿಕೆಟ್‍ಗಳ ಸಹಾಯದಿಂದ 93.4 ಓವರ್‍ಗಳಲ್ಲಿ ಬಾರಿಸಿದ್ದು 181 ರನ್ ಮಾತ್ರ. ಇದರಲ್ಲಿ ಬೈ 9, ಲೆಗ್‍ಬೈ 4, ನೋಬಾಲ್ 3 ಎಸೆಯುವ ಮೂಲಕ ಇತರೇ ರೂಪದಲ್ಲಿ ಭಾರತ 16 ರನ್‍ಗಳ ಕಾಣಿಕೆಯನ್ನು ನೀಡಿತ್ತು.
Advertisement
ನಾಯಕ ಸ್ವೀವ್ ಸ್ಮಿತ್ 21 ರನ್‍ಗಳಿಸಿ ಔಟಾದರೆ, ಶೇನ್ ಮಾರ್ಷ್ 53 ರನ್(197 ಎಸೆತ, 7 ಬೌಂಡರಿ), ಪೀಟರ್ ಹ್ಯಾಂಡ್ಸ್ ಕಾಂಬ್ ಔಟಾಗದೇ 72 ರನ್(200 ಎಸೆತ, 7 ಬೌಂಡರಿ) ಹೊಡೆಯುವ ಮೂಲಕ ಆಸ್ಟ್ರೇಲಿಯಾವನ್ನು ಪಾರು ಮಾಡಿದರು.
Advertisement
ಜಡೇಜಾ 44 ಓವರ್ ಎಸೆದು 18 ಓವರ್‍ಗಳನ್ನು ಮೇಡನ್ ಮಾಡಿ, 54 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ 30 ಓವರ್ ಎಸೆದು 10 ಓವರ್ ಮೇಡನ್ ಮಾಡಿ 71 ರನ್ ನೀಡಿ 1 ವಿಕೆಟ್ ಪಡೆದರು. ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.
Advertisement
ಈ ಟೆಸ್ಟ್ ನಲ್ಲಿ ದ್ರಾವಿಡ್ ದಾಖಲೆಯನ್ನು ಮುರಿದು 202 ರನ್ ಹೊಡೆದಿದ್ದ ಚೇತೇಶ್ವರ ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲದಲ್ಲಿ ಸಾಧಿಸಿದ್ದು, ಕೊನೆಯ ಟೆಸ್ಟ್ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಾರ್ಚ್ 25ರಿಂದ ನಡೆಯಲಿದೆ. ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದು ಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 451 ಮತ್ತು 204/6
ಭಾರತ 603/ 9 ಡಿಕ್ಲೇರ್
ಇದನ್ನೂ ಓದಿ: 13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ