ಹೈದರಾಬಾದ್: ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಿನ್ನೆ ಹೈದರಾಬಾದ್ದ (Hyderabad) ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ 3ನೇ ಟಿ20 ಪಂದ್ಯ ನಡೆಯಿತು. ಈ ವೇಳೆ ಮೈದಾನದಲ್ಲಿ ಅಭಿಮಾನಿಗಳು ಜೈಶ್ರೀರಾಮ್ (Jai Shreeram) ಎಂದು ಉದ್ಘೋಷಿಸಿ ಸಂಭ್ರಮಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
ಮೂರು ಪಂದ್ಯಗಳ ಟಿ20 (T20) ಸರಣಿಯಲ್ಲಿ ಎರಡು ತಂಡಗಳ ನಡುವೆ 1-1 ರಲ್ಲಿ ಸಮಬಲ ಕಂಡಿತ್ತು. ನಿನ್ನೆಯ ಪಂದ್ಯ ಫೈನಲ್ ಪಂದ್ಯದಂತಿತ್ತು. ಸರಣಿ ಗೆಲ್ಲುವ ತವಕದಲ್ಲಿ ಎರಡು ತಂಡಗಳು ಕಣಕ್ಕಿಳಿದಿದ್ದವು. ಹಾಗಾಗಿ ರೋಚಕ ಕದನಕ್ಕೆ ಹೈದರಾಬಾದ್ ಸಾಕ್ಷಿಯಾಗಿತ್ತು. ಅತ್ತ ಮೈದಾನಲ್ಲಿ ಆಟಗಾರರು ಆರ್ಭಟಿಸುತ್ತಿದ್ದರೆ ಇತ್ತ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ನಿನ್ನೆ ಜೈಶ್ರೀರಾಮ್ ಎಂದು ಕೂಗುತ್ತ ರಾಮಜಪ ಮಾಡಿದ್ದಾರೆ. ಇದೀಗ ಪ್ರೇಕ್ಷಕರು ಮೈದಾನದಲ್ಲಿ ಜೈಶ್ರೀರಾಮ್ ಎಂದು ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಾತ್ರವಾಗಿದೆ. ಇದನ್ನೂ ಓದಿ: ಪಂದ್ಯಗೆದ್ದ ಖುಷಿ – ರೋಹಿತ್ಗೆ ಹೊಡೆದು ಸಂಭ್ರಮಿಸಿದ ಕೊಹ್ಲಿ
Advertisement
Advertisement
ರೋಚಕವಾಗಿದ್ದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 21 ರನ್ ಬೇಕಾಗಿತ್ತು. 18 ಓವರ್ನ ಮೊದಲ ಎಸೆತವನ್ನು ಹಾರ್ದಿಕ್ ಪಾಂಡ್ಯ ಸಿಕ್ಸರ್ಗಟ್ಟಿದರು. ಮುಂದಿನ 5 ಎಸೆತಗಳಲ್ಲಿ ಕೊಹ್ಲಿ ಹಾಗೂ ಪಾಂಡ್ಯ 4 ರನ್ ಕಸಿದರು. ಕೊನೆಯ 6 ಎಸೆತಗಳಲ್ಲಿ ಭಾರತದ ಗೆಲುವಿಗೆ 11 ರನ್ ಬೇಕಾಗಿತ್ತು. ಡೇನಿಯಲ್ ಸ್ಯಾಮ್ ಎಸೆದ ಮೊದಲ ಎಸೆತವನ್ನು ಕೊಹ್ಲಿ ಸಿಕ್ಸರ್ಗಟ್ಟಿದರು. ಮರು ಎಸೆತದಲ್ಲೇ ಕೊಹ್ಲಿ ಔಟ್ ಆದರು. ನಂತರ ಕಾರ್ತಿಕ್ ಬಂದು 1 ರನ್ ಓಡಿದರು. 19ನೇ ಓವರ್ನ 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ ಭಾರತದ ಗೆಲುವಿಗೆ 4 ರನ್ ಬೇಕಾಗಿತ್ತು. 5ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ ಪಾಂಡ್ಯ ಭಾರತಕ್ಕೆ ಜಯ ತಂದುಕೊಟ್ಟರು. ಇದನ್ನೂ ಓದಿ: ಟಿ20ಯಲ್ಲಿ ಕೆಟ್ಟ ಸಾಧನೆ ಮಾಡಿದ ಬುಮ್ರಾ
Advertisement
https://twitter.com/MR4BJP/status/1574055053761347584
ಆಸ್ಟ್ರೇಲಿಯಾ ನೀಡಿದ 187 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಚೇಸಿಂಗ್ ಕಿಂಗ್ ಕೊಹ್ಲಿ ಮತ್ತು ಸೂರ್ಯಕುಮಾರ್ ಸ್ಫೋಟಕ ಆಟ ನೆರವಾಯಿತು. ಅಂತಿಮ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದದಲ್ಲಿ ಫೋರ್ ಹೊಡೆದು ಪಾಂಡ್ಯ ಇನ್ನೊಂದು ಎಸೆತ ಬಾಕಿ ಇರುವಂತೆ 187 ರನ್ ಸಿಡಿಸಿ ಜಯ ತಂದು ಕೊಟ್ಟರು. ಅಂತಿಮವಾಗಿ 19.5 ಓವರ್ಗಳ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 187 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಭಾರತ ಈ ಗೆಲುವಿನೊಂದಿಗೆ ತವರಿನಲ್ಲಿ ಟಿ20 ಸರಣಿ ಗೆದ್ದುಕೊಂಡಿತು. ಜೊತೆಗೆ ಈ ವರ್ಷ ದಾಖಲೆಯ 21 ಟಿ20 ಪಂದ್ಯವನ್ನು ಗೆದ್ದು ನೂತನ ದಾಖಲೆ ಬರೆಯಿತು. ಇದನ್ನೂ ಓದಿ: ಕೊಹ್ಲಿ ಜೊತೆ ಸೂರ್ಯನ ಅಬ್ಬರ – ವಿಶ್ವಚಾಂಪಿಯನ್ನರಿಗೆ ಸೋಲು, ಭಾರತಕ್ಕೆ T20 ಸರಣಿ